‘ಮೈಸಾ’ಕ್ಕಾಗಿ ರಶ್ಮಿಕಾ ಮಂದಣ್ಣ ಮಾಡಿರುವ ಸಾಹಸ ಒಂದೆರಡಲ್ಲ

ಮದುವೆಯ ಬಳಿಕ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾ ಆಯ್ಕೆಯನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಹೆಚ್ಚು-ಹೆಚ್ಚು ಮಹಿಳಾ ಪ್ರಧಾನ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಅದರ ಭಾಗವಾಗಿಯೇ ‘ಮೈಸಾ’ ಎಂಬ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾನಲ್ಲಿ ರಶ್ಮಿಕಾ ನಟಿಸಿದ್ದು, ಈ ಸಿನಿಮಾಕ್ಕಾಗಿ ಸಾಕಷ್ಟು ಶ್ರಮ ಹಾಕಿ ಚಿತ್ರೀಕರಣ ಸಹ ಮಾಡಿದ್ದಾರೆ ರಶ್ಮಿಕಾ.

‘ಮೈಸಾ’ಕ್ಕಾಗಿ ರಶ್ಮಿಕಾ ಮಂದಣ್ಣ ಮಾಡಿರುವ ಸಾಹಸ ಒಂದೆರಡಲ್ಲ
Rashmika Mandanna

Updated on: Nov 20, 2026 | 2:52 PM

ಮುಖ್ಯಾಂಶಗಳು

  • ‘ಮೈಸಾ’ಕ್ಕಾಗಿ ರಶ್ಮಿಕಾ ಮಂದಣ್ಣ ಸಾಹಸ
  • ಡ್ಯೂಪ್ ಇಲ್ಲದೆ ಆಕ್ಷನ್ ದೃಶ್ಯಗಳಲ್ಲಿ ನಟಿಸಿದ ನಟಿ
  • ಭರ್ಜರಿ ಆಕ್ಷನ್ ಸಿನಿಮಾ ‘ಮೈಸಾ’

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಟನೆಯ ‘ರಣಬಾಲಿ’ ಸಿನಿಮಾ ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಸಾಧಾರಣ ಕಲೆಕ್ಷನ್ ಅನ್ನು ಚಿತ್ರಮಂದಿರಗಳಲ್ಲಿ ಮಾಡಿತ್ತು. ಇತ್ತೀಚೆಗಷ್ಟೆ ಈ ಸಿನಿಮಾ ಒಟಿಟಿಗೂ ಬಂತು. ಮದುವೆಯ ಬಳಿಕ ರಶ್ಮಿಕಾ ತಮ್ಮ ಸಿನಿಮಾ ಆಯ್ಕೆಯನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಹೆಚ್ಚು-ಹೆಚ್ಚು ಮಹಿಳಾ ಪ್ರಧಾನ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಅದರ ಭಾಗವಾಗಿಯೇ ‘ಮೈಸಾ’ ಎಂಬ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾನಲ್ಲಿ ರಶ್ಮಿಕಾ ನಟಿಸಿದ್ದು, ಈ ಸಿನಿಮಾಕ್ಕಾಗಿ ಸಾಕಷ್ಟು ಶ್ರಮ ಹಾಕಿ ಚಿತ್ರೀಕರಣ ಸಹ ಮಾಡಿದ್ದಾರೆ ರಶ್ಮಿಕಾ.

‘ಮೈಸಾ’ ಸಿನಿಮಾ ಭರ್ಜರಿ ಆಕ್ಷನ್ ಸಿನಿಮಾ ಆಗಿದ್ದು, ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಟೀಸರ್ ಇದನ್ನು ಸಾರಿ ಹೇಳುತ್ತಿದೆ. ರಶ್ಮಿಕಾ, ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಅತ್ಯಂತ ಕಠಿಣವಾದ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಹಿಂದೆಂದೂ ಇಷ್ಟು ಇಂಟೆನ್ಸ್ ಆದ ಆಕ್ಷನ್ ದೃಶ್ಯಗಳಿರುವ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಖುದ್ದು ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ‘ಮೈಸಾ’ ಸಿನಿಮಾಕ್ಕಾಗಿ ಹಲವು ಕಠಿಣವಾದ ಆಕ್ಷನ್ ದೃಶ್ಯಗಳಲ್ಲಿ ಡ್ಯೂಪ್ ಇಲ್ಲದೆ ಖುದ್ದು ರಶ್ಮಿಕಾ ಅವರೇ ಪಾಲ್ಗೊಂಡಿದ್ದಾರೆ.

Loading...

‘ಮೈಸಾ’ ಸಿನಿಮಾಕ್ಕಾಗಿ ರಶ್ಮಿಕಾ, 3:50 ನಿಮಿಷಗಳ ಕಾಲ ನೀರಿನಾಳದಲ್ಲಿ ಆಕ್ಷನ್ ದೃಶ್ಯದಲ್ಲಿ ಪಾಲ್ಗೊಂಡಿದ್ದಾರೆ. 90 ಅಡಿ ಎತ್ತರದ ಕೃತಕ ವಾಟರ್ ಫಾಲ್ಸ್​​ನಿಂದ ಜಂಪ್ ಮಾಡಿ ಬಳಿಕ ನೀರಿನಾಳದಲ್ಲಿ ಈ ಫೈಟ್ ದೃಶ್ಯದಲ್ಲಿ ರಶ್ಮಿಕಾ ಪಾಲ್ಗೊಂಡಿದ್ದಾರೆ. ಈ ದೃಶ್ಯಗಳನ್ನು ಶಂಶಾಬಾದ್​​ನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಜೂ ಎನ್​​ಟಿಆರ್ ನಟನೆಯ ‘ದೇವರ’ ಸಿನಿಮಾಕ್ಕಾಗಿ ನಿರ್ಮಿಸಲಾಗಿದ್ದ ಸೆಟ್ನಲ್ಲಿಯೇ ರಶ್ಮಿಕಾರ ಅಂಡರ್ ವಾಟರ್ ಫೈಟ್​​ ದೃಶ್ಯದ ಚಿತ್ರೀಕರಣವನ್ನೂ ಮಾಡಲಾಗಿದೆ. ಈ ಫೈಟ್ ದೃಶ್ಯಕ್ಕಾಗಿ ಗಂಟೆಗಟ್ಟಲೆ ರಶ್ಮಿಕಾ ಅವರು ನೀರಿನಲ್ಲಿಯೇ ಇರಬೇಕಾಗಿತ್ತಂತೆ.

ಇದನ್ನೂ ಓದಿ:ವಿಜಯ್ ಬಗ್ಗೆ ಟೀಕೆ ಮಾಡಿದವರಿಗೆ ನಟಿ ರಶ್ಮಿಕಾ ಮಂದಣ್ಣ ಖಡಕ್ ತಿರುಗೇಟು

‘ಮೈಸಾ’ ಸಿನಿಮಾಕ್ಕಾಗಿ ರಶ್ಮಿಕಾ ಮುವತಾಯ್ ತರಬೇತಿಯನ್ನು ಸಹ ಪಡೆದುಕೊಂಡಿದ್ದಾರೆ. ಬ್ಯಾಂಕಾಕ್ ಮತ್ತು ಥಾಯ್ಲೆಂಡ್​​ಗಳಿಗೆ ಹೋಗಿ ಅಲ್ಲಿ ವಿಶೇಷ ತರಬೇತುದಾರರಿಂದ ಸ್ಟಂಟ್ ಮತ್ತು ಫೈಟ್ ತರಬೇತಿ ಪಡೆದುಕೊಂಡಿದ್ದಾರೆ. ಆಂಡಿ ಲಾಂಗ್ ಮತ್ತು ಕೆಚ ಕಂಪಾಕ್ಡಿ ಅವರುಗಳು ರಶ್ಮಿಕಾಗೆ ಸ್ಟಂಟ್ ಮತ್ತು ಫೈಟ್ ತರಬೇತಿ ಕೊಟ್ಟಿದ್ದಾರೆ. ಪ್ರತಿದಿನ ಎಂಟು ಗಂಟೆಗಳ ಕಾಲ ಅವರು ತರಬೇತಿ ಪಡೆದುಕೊಳ್ಳುತ್ತಿದ್ದರಂತೆ. ರಶ್ಮಿಕಾ ಹಲವಾರು ದೃಶ್ಯಗಳಲ್ಲಿ ಯಾವುದೇ ಸ್ಟಂಟ್ ಇಲ್ಲದೆ ಖುದ್ದು ಆಕ್ಷನ್ ದೃಶ್ಯಗಳಲ್ಲಿ ಭಾಗವಹಿಸಿದ್ದಾರೆ. ಸಿನಿಮಾಕ್ಕಾಗಿ ರೋಪ್ ಕಟ್ಟಿಕೊಂಡು 90 ಅಡಿ ಎತ್ತರದಿಂದ ಕೆಳಕ್ಕೆ ಧುಮುಕಿದ್ದಾರಂತೆ.

ರಶ್ಮಿಕಾ ಖುದ್ದು ಹೇಳಿಕೊಂಡಿರುವಂತೆ ‘ಮೈಸಾ’ ಅವರ ವೃತ್ತಿ ಜೀವನದಲ್ಲೇ ಅತ್ಯಂತ ಕಠಿಣವಾದ ಚಿತ್ರೀಕರಣದ ಅನುಭವ ಆಗಿತ್ತಂತೆ. ಸಿನಿಮಾನಲ್ಲಿ ಸಖತ್ ಆಕ್ಷನ್ ಜೊತೆಗೆ ರಗಡ್ ಆದ ಸಂಭಾಷಣೆಗಳು ಮತ್ತು ಮೈನವಿರೇಳಿಸುವ ಸಂಗೀತ ಮತ್ತು ಹಾಡುಗಳೂ ಇವೆ. ‘ಮೈಸಾ’ ಸಿನಿಮಾ ನವೆಂಬರ್ 27ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us