
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಚಿತ್ರರಂಗದಲ್ಲಿ ದೊಡ್ಡ ಗೆಲುವು ಕಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಅವರು ಮಿಂಚಿದ್ದಾರೆ. ಹಾಗಂತ ಅವರು ಒಂದೇ ಬಗೆಯ ಸಿನಿಮಾಗಳನ್ನು ಮಾಡುತ್ತಿಲ್ಲ. ಬದಲಿಗೆ, ಬೇರೆ ಬೇರೆ ರೀತಿಯ ಸಿನಿಮಾ ಮತ್ತು ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಅವರ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಗಮನ ಸೆಳೆದಿತ್ತು. ಈಗ ಅವರು ‘ಮೈಸಾ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ. ಈ ಸಿನಿಮಾದಿಂದ ಫಸ್ಟ್ ಗ್ಲಿಂಪ್ಸ್ (Mysaa First Glimpse) ಬಿಡುಗಡೆ ಆಗಿದೆ.
ಸ್ಟಾರ್ ನಟರಿಗೆ ಜೋಡಿಯಾಗಿ ನಟಿಸಲು ರಶ್ಮಿಕಾ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅದರ ನಡುವೆಯೂ ಅವರು ಹೊಸ ಬಗೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ‘ಮೈಸಾ’ ಸಿನಿಮಾವೇ ಬೆಸ್ಟ್ ಉದಾಹರಣೆ. ಈ ಸಿನಿಮಾದಲ್ಲಿ ಅವರು ಹಿಂದೆಂದೂ ಕಾಣಿಸಿಕೊಳ್ಳದ ಗೆಟಪ್ನಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರೆ. ಆ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಸಲು ಈ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ.
ರವೀಂದ್ರ ಪುಲ್ಲೆ ಅವರು ‘ಮೈಸಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾಗಿ ಇದು ಅವರ ಮೊದಲ ಸಿನಿಮಾ. ಹಾಗಿದ್ರೂ ಕೂಡ ಓರ್ವ ಅನುಭವಿ ನಿರ್ದೇಶಕನ ರೀತಿಯಲ್ಲಿ ಅವರು ಸಿನಿಮಾ ಮಾಡಿದ್ದಾರೆ ಎಂಬುದಕ್ಕೆ ಫಸ್ಟ್ ಗ್ಲಿಂಪ್ಸ್ ಟೀಸರ್ನಲ್ಲಿ ಸುಳಿವು ಸಿಕ್ಕಿದೆ. ‘ಅನ್‌ಫಾರ್ಮುಲಾ ಫಿಲ್ಮ್ಸ್’ ಸಂಸ್ಥೆಯ ಮೂಲಕ ‘ಮೈಸಾ’ ಸಿನಿಮಾ ನಿರ್ಮಾಣ ಆಗುತ್ತಿದೆ.
ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ಹಿಂದೆ, ತಮಿಳು ಮುಂತಾದ ಭಾಷೆಗಳಲ್ಲಿ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಭಾರಿ ಬಜೆಟ್ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಕೈಯಲ್ಲಿ ಬೇಡಿ, ಬಂದೂಕು, ಮೈಯೆಲ್ಲಾ ರಕ್ತ, ಮುಖದಲ್ಲಿ ನೋವು, ಆಕ್ರೋಶ.. ಹೀಗೆ ಮೊದಲ ಲುಕ್ನಲ್ಲೇ ಕಥೆಯ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡಲಾಗಿದೆ. ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಈ ಫಸ್ಟ್ ಗ್ಲಿಂಪ್ಸ್ ಇಷ್ಟ ಆಗಿದೆ. ಸಿನಿಮಾ ನೋಡಲು ತಾವೆಲ್ಲ ಕಾಯುತ್ತಿರುವುದಾಗಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮದುವೆಗೆ ಮುನ್ನ ಗೆಳತಿಯರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿದ ರಶ್ಮಿಕಾ: ಚಿತ್ರಗಳು ಇಲ್ಲಿವೆ
‘ಮೈಸಾ’ ಸಿನಿಮಾದ ಈ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆ ಪಾತ್ರದ ಹಿನ್ನೆಲೆ ಹೇಗಿದೆ ಎಂಬುದನ್ನು ತಾಯಿಯ ಧ್ವನಿ ವಿವರಿಸುತ್ತದೆ. ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಶ್ರೀಯಾಸ್ ಪಿ. ಕೃಷ್ಣ ಅವರ ಛಾಯಾಗ್ರಹಣ, ಜೇಕ್ಸ್ ಬೆಜೋಯ್ ಅವರ ಸಂಗೀತ, ಆಂಡಿ ಲಾಂಗ್ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.