ಮತ್ತೋರ್ವ ತೆಲುಗು ಸ್ಟಾರ್​ ಹೀರೋ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ? ನಿಲ್ಲುತ್ತಿಲ್ಲ ಕೊಡಗು ಕುವರಿಯ ಓಟ

ತೆಲುಗಿನ ಸ್ಟಾರ್ ನಟ ನಾಗ ಚೈತನ್ಯ ಜತೆ ರಶ್ಮಿಕಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪರಶುರಾಮ್​ ಅವರು ನಾಗ ಚೈತನ್ಯ ಜತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರುವ ಸಾಧ್ಯತೆ ಇದೆ.

ಮತ್ತೋರ್ವ ತೆಲುಗು ಸ್ಟಾರ್​ ಹೀರೋ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ? ನಿಲ್ಲುತ್ತಿಲ್ಲ ಕೊಡಗು ಕುವರಿಯ ಓಟ
ರಶ್ಮಿಕಾ
Edited By:

Updated on: Aug 09, 2022 | 10:20 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಓಟ ಸದ್ಯಕ್ಕೆ ನಿಲ್ಲುವ ಸೂಚನೆ ಸಿಗುತ್ತಿಲ್ಲ. ಅವರು ಸದ್ಯ, ಬಾಲಿವುಡ್, ಟಾಲಿವುಡ್, ಕಾಲಿವುಡ್​​ನಲ್ಲಿ ಬ್ಯುಸಿ ಇದ್ದಾರೆ. ಈಗ ಅವರು ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವ ಸೂಚನೆ ಸಿಕ್ಕಿದೆ. ತೆಲುಗಿನ ಸ್ಟಾರ್ ನಟನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎಂಬ ವಿಚಾರ ಹರಿದಾಡುತ್ತಿದೆ. ‘ಸೀತಾ ರಾಮಂ’ ಗೆಲುವಿನ ಖುಷಿಯಲ್ಲಿರುವ ರಶ್ಮಿಕಾ ಫ್ಯಾನ್ಸ್​ಗೆ ಈ ವಿಚಾರದಿಂದ ಡಬಲ್ ಧಮಾಕಾ ಸಿಕ್ಕಂತೆ ಆಗಿದೆ. ಈ ವಿಚಾರ ಕೇಳಿ ರಶ್ಮಿಕಾ ಅಭಿಮಾನಿಗಳು ಸಖತ್ ಖುಷಿ ಆಗಿದ್ದಾರೆ.

ತೆಲುಗಿನ ಸ್ಟಾರ್ ನಟ ನಾಗ ಚೈತನ್ಯ ಜತೆ ರಶ್ಮಿಕಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪರಶುರಾಮ್​ ಅವರು ನಾಗ ಚೈತನ್ಯ ಜತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ರಶ್ಮಿಕಾ ಹೀರೋಯಿನ್ ಆಗಬೇಕು ಎಂಬುದು ನಿರ್ದೇಶಕ ಪರಶುರಾಮ್ ಅವರ ಆಸೆ. ರಶ್ಮಿಕಾ ಸಿನಿಮಾದ ಕಥೆ ಕೇಳಿ ಇಷ್ಟಪಟ್ಟಿದ್ದಾರೆ ಎನ್ನಲಾಗುತ್ತಿದೆ. ಅವರು ಓಕೆ ಎಂಬುದಷ್ಟೇ ಬಾಕಿ ಇದೆ ಎಂದು ವರದಿ ಆಗಿದೆ.

ರಶ್ಮಿಕಾ ಮಂದಣ್ಣ ಅವರು ತೆಲುಗಿನ ಹಲವು ಸ್ಟಾರ್​ಗಳ ಜತೆ ಬಣ್ಣ ಹಚ್ಚಿದ್ದಾರೆ. ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ಮಹೇಶ್ ಬಾಬು, ನಿತೀನ್ ಮೊದಲಾದವರ ಜತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ, ನಾಗ ಚೈತನ್ಯ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿರಲಿಲ್ಲ. ಈಗ ಆ ಅವಕಾಶ ಕೂಡಿ ಬಂದಿದೆ.

ಇದನ್ನೂ ಓದಿ
ಲಂಡನ್​ನಲ್ಲಿ ಮಹೇಶ್ ಬಾಬು ಮಗನಿಗೆ ಶಿಕ್ಷಣ; ಇಂಗ್ಲೆಂಡ್​​ಗೆ ಹಾರಲಿದೆ ಫ್ಯಾಮಿಲಿ
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

ಇದನ್ನೂ ಓದಿ: ‘ನಾನು ವರ್ಷಕ್ಕೆ ಇಷ್ಟೊಂದು ಸಿನಿಮಾ ಮಾಡ್ತೀನಿ, ಆದರೂ..’; ರಶ್ಮಿಕಾ ಬೇಸರಕ್ಕೆ ಕಾರಣವಾಯ್ತು ಆ ಒಂದು ವಿಚಾರ

‘ಸೀತಾ ರಾಮಂ’ ಸಿನಿಮಾ ಕಳೆದ ವಾರ ತೆರೆಗೆ ಬಂತು. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಶ್ಮಿಕಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರದಿಂದ ಮತ್ತೊಂದು ಗೆಲುವು ಕಂಡಿದ್ದಾರೆ. ಇದಲ್ಲದೆ, ಹಿಂದಿಯಲ್ಲಿ ‘ಗುಡ್ ಬೈ’, ‘ಮಿಷನ್​ ಮಜ್ನು’ ಸಿನಿಮಾದಲ್ಲಿ ನಟಿಸಿದ್ದು ಅದು ರಿಲೀಸ್​ಗೆ ರೆಡಿ ಇದೆ. ರಣಬೀರ್ ಕಪೂರ್ ಜತೆ ‘ಅನಿಮಲ್​’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ‘ಪುಷ್ಪ 2’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇನ್ನೂ ಕೆಲವು ಕಥೆಗಳನ್ನು ಅವರು ಕೇಳುತ್ತಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಬ್ಯುಸಿ ಇರುವ ನಾಯಕಿಯರ ಪೈಕಿ ರಶ್ಮಿಕಾ ಮುಂಚೂಣಿಯಲ್ಲಿ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.