Tiger Nageswara Rao: ‘ಟೈಗರ್ ನಾಗೇಶ್ವರ ರಾವ್’ ಚಿತ್ರಕ್ಕೆ ಸಾಥ್ ನೀಡಿದ ಶಿವಣ್ಣ; ಬಿಡುಗಡೆ ಆಯ್ತು ಖಡಕ್ ಪೋಸ್ಟರ್
Tiger Nageswara Rao First Look: ‘ಟೈಗರ್ ನಾಗೇಶ್ವರ ರಾವ್’ ಚಿತ್ರ ಹೈಪ್ ಸೃಷ್ಟಿ ಮಾಡಿದೆ. 1970ರ ಕಾಲಘಟ್ಟದಲ್ಲಿ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಪಾತ್ರಕ್ಕಾಗಿ ರವಿತೇಜ ಅವರು ಗೆಟಪ್ ಬದಲಿಸಿಕೊಂಡಿದ್ದಾರೆ.
ಟಾಲಿವುಡ್ನ ‘ಮಾಸ್ ಮಹಾರಾಜ’ ರವಿತೇಜ (Ravi Teja) ಅವರು ಚೊಚ್ಚಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಟೈಗರ್ ನಾಗೇಶ್ವರ ರಾವ್’ ಎಂಬುದು ಈ ಸಿನಿಮಾದ ಶೀರ್ಷಿಕೆ. ವಂಶಿ ನಿರ್ದೇಶನದಲ್ಲಿ ಅದ್ದೂರಿಯಾಗಿ ತಯಾರಾಗಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಭಾರತದ 3ನೇ ಅತಿ ಉದ್ದದ ರಸ್ತೆ ಹಾಗೂ ರೈಲ್ವೆ ಸೇತುವೆ ಎನಿಸಿಕೊಂಡಿರುವ ರಾಜಮುಂಡ್ರಿಯಲ್ಲಿರುವ ಗೋದಾವರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಇಂದು (ಮೇ 24) ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿದೆ. ‘ಟೈಗರ್ ನಾಗೇಶ್ವರ ರಾವ್’ (Tiger Nageswara Rao) ಸಿನಿಮಾದ ಫಸ್ಟ್ ಲುಕ್ನಲ್ಲಿ ರವಿತೇಜ ಅವರು ಉಗ್ರವಾದ ರೂಪ ತಾಳಿದ್ದಾರೆ. ಬಿಯರ್ಡ್ ಲುಕ್, ಗಾಯವಾದ ಮುಖ, ಮಾಸ್ ಅವತಾರದಲ್ಲಿ ರವಿತೇಜ ಕಾಣಿಸಿಕೊಂಡಿದ್ದಾರೆ. 5 ಭಾಷೆಯಲ್ಲಿ ಪೋಸ್ಟರ್ ರಿಲೀಸ್ ಆಗಿದೆ. ಕನ್ನಡದ ಫಸ್ಟ್ ಲುಕ್ಗೆ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ ಕುಮಾರ್ (Shivarajkumar) ಧ್ವನಿ ನೀಡಿದ್ದಾರೆ. ಭಾರತದ ಕುಖ್ಯಾತ ಕಳ್ಳ ಎನಿಸಿಕೊಂಡಿರುವ ಟೈಗರ್ ನಾಗೇಶ್ವರ ರಾವ್ನ ಪ್ರಪಂಚದ ಬಗ್ಗೆ ಶಿವಣ್ಣ ಕಿರುಪರಿಚಯ ನೀಡಿದ್ದಾರೆ.
ಕನ್ನಡದಲ್ಲಿ ಶಿವರಾಜ್ಕುಮಾರ್, ತೆಲುಗಿನಲ್ಲಿ ವೆಂಕಟೇಶ್ ದಗ್ಗುಬಾಟಿ, ಬಾಲಿವುಡ್ನಲ್ಲಿ ಜಾನ್ ಅಬ್ರಾಹಂ, ತಮಿಳಿನಲ್ಲಿ ಕಾರ್ತಿ ಹಾಗೂ ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಅವರು ‘ಟೈಗರ್ ನಾಗೇಶ್ವರ ರಾವ್’ ಫಸ್ಟ್ ಲುಕ್ಗೆ ಧ್ವನಿ ನೀಡಿದ್ದಾರೆ. ‘ಜಿಂಕೆಯನ್ನು ಬೇಟೆಯಾಡುವ ಹುಲಿಯನ್ನ ನೋಡಿರ್ತೀಯ. ಆದರೆ ಹುಲಿಗಳನ್ನು ಬೇಟೆಯಾಡುವ ಹುಲಿಯನ್ನು ಎಲ್ಲಾದ್ರೂ ನೋಡಿದಿಯಾ?’ ಎಂಬ ಪ್ರಶ್ನೆ ಮೂಲಕ ರವಿತೇಜ ಅವರ ಮಾಸ್ ಪಾತ್ರವನ್ನು ಪರಿಚಯಿಸಲಾಗಿದೆ.
Name: NageswaraRao Village: Stuartpuram ..!
Welcoming you all to my zone… THE TIGER ZONE ?
Here’s The #TigerNageswaraRao First Look 🙂
See you at the cinemas this October 20th?@DirVamsee @AbhishekOfficl @AnupamPKher #RenuDesai @NupurSanon… pic.twitter.com/2Pl4QahzI5
— Ravi Teja (@RaviTeja_offl) May 24, 2023
1970ರ ಕಾಲಘಟ್ಟದಲ್ಲಿ ಸ್ಟೂವರ್ಟ್ ಪುರಂ ಹಳ್ಳಿಯಲ್ಲಿದ್ದ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕಾಗಿ ರವಿತೇಜ ಗೆಟಪ್, ಬಾಡಿ ಲಾಂಗ್ವೇಜ್ ಪೂರ್ತಿ ಬದಲಿಸಿಕೊಂಡಿದ್ದಾರೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್. ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ. ಪ್ರಕಾಶ್ ಕುಮಾರ್ ಸಂಗೀತ ಈ ಸಿನಿಮಾಗಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.
ಇದನ್ನೂ ಓದಿ: ಎನ್ಟಿಆರ್ ಶತಮಾನೋತ್ಸವದಲ್ಲಿ ಶಿವರಾಜ್ಕುಮಾರ್, ಬಾಲ್ಯದಲ್ಲಿ ಕಂಡ ದೃಶ್ಯ ವೈಭವ ವಿವರಿಸಿದ ಶಿವಣ್ಣ
ದಸರಾ ಹಬ್ಬಕ್ಕೆ ‘ಟೈಗರ್ ನಾಗೇಶ್ವರ ರಾವ್’ ಜನರ ಎದುರು ಬರಲಿದ್ದಾನೆ. ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಅವರ ಈ ಸಿನಿಮಾ ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ದೂರಿಯಾಗಿ ಈ ಚಿತ್ರ ತೆರೆಕಾಣಲಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.