ಕನ್ನಡದಲ್ಲಿ ಅಂಬರೀಷ್, ತೆಲುಗಿನಲ್ಲಿ ಪ್ರಭಾಸ್; ಇಬ್ಬರೂ ರೆಬೆಲ್ ಸ್ಟಾರ್ ಮಧ್ಯೆ ಇದೆ ಸಾಮ್ಯತೆ

ಕನ್ನಡದ ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ತೆಲುಗಿನ ಪ್ರಭಾಸ್ ನಡುವೆ ಊಟದ ವಿಷಯದಲ್ಲಿ ವಿಶೇಷ ಸಾಮ್ಯತೆ ಇದೆ. ಇಬ್ಬರೂ ಎಲ್ಲರಿಗೂ ಊಟ ಹಾಕಿಸುವುದನ್ನು ಅಪಾರವಾಗಿ ಇಷ್ಟಪಡುತ್ತಿದ್ದರು. ಪ್ರಭಾಸ್ ಅಂಬರೀಷ್ ಅವರಂತೆಯೇ ಸೆಟ್‌ನಲ್ಲಿರುವವರಿಗೂ ಔದಾರ್ಯದಿಂದ ಊಟ ನೀಡುತ್ತಾರೆ, ತಮ್ಮ ಕುಟುಂಬದ ಊಟದ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

ಕನ್ನಡದಲ್ಲಿ ಅಂಬರೀಷ್, ತೆಲುಗಿನಲ್ಲಿ ಪ್ರಭಾಸ್; ಇಬ್ಬರೂ ರೆಬೆಲ್ ಸ್ಟಾರ್ ಮಧ್ಯೆ ಇದೆ ಸಾಮ್ಯತೆ
ಪ್ರಭಾಸ್​-ಅಂಬರೀಷ್

Updated on: Apr 07, 2026 | 12:22 PM

ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಅಂತ ಇದ್ದವರು ಅಂಬರೀಷ್. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಮಿಂಚಿ ಅವರು ಮರೆಯಾದರು. ಅವರು ಈಗಲೂ ಅನೇಕರ ಫೇವರಿಟ್. ತೆಲುಗಿನಲ್ಲಿ ಪ್ರಭಾಸ್ (Prabhas) ಅವರನ್ನು ರೆಬೆಲ್ ಸ್ಟಾರ್ ಎನ್ನುತ್ತಾರೆ. ಈಗಲೂ ಅವರು ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ. ಈಗ ಇಬ್ಬರ ಮಧ್ಯೆ ಒಂದು ಸಾಮ್ಯತೆ ಇದೆ ಎಂಬ ವಿಷಯ ಗೊತ್ತಾಗಿದೆ.

‘ಆಲ್​ ರೌಂಡರ್’ ಹೆಸರಿನ ಯೂಟ್ಯೂಬ್ ಚಾನೆಲ್ ಅಲ್ಲಿ ಕಾಸ್ಟಿಂಗ್ ನಿರ್ದೇಶಕ ನಂದ ಕೀಶೋರ್ ಮಾತನಾಡಿದ್ದಾರೆ. ಅವರು ತೆಲುಗು ಚಿತ್ರರಂಗವನ್ನು ಹತ್ತಿರದಿಂದ ಕಂಡವರು. ಅವರು ಪ್ರಭಾಸ್ ಬಗ್ಗೆ ಮಾತನಾಡಿದ್ದಾರೆ. ಪ್ರಭಾಸ್ ಅವರನ್ನು ಅಂಬರೀಷ್​ಗೆ ಹೋಲಿಕೆ ಮಾಡಿದ್ದಾರೆ. ಊಟದ ವಿಷಯದಲ್ಲಿ ಇಬ್ಬರ ಮಧ್ಯೆ ಸಾಮ್ಯತೆ ಇದೆ ಎಂದು ಅವರು ವಿವರಿಸಿದ್ದಾರೆ.

‘ಸೆಟ್​ ಬಾಯ್ ಎಲ್ಲಾದರೂ ಒಂದು ಕಡೆ ಫುಡ್ ತಿಂದಿದ್ದಾನೆ ಎಂದರೆ ಅದನ್ನು ಪ್ರಭಾಸ್ ನೆನಪಿಟ್ಟುಕೊಳ್ಳುತ್ತಾರೆ. ಮುಂದೆ ಆ ಆಹಾರ ತೆಗೆದುಕೊಂಡು ಬಂದಾಗ ಸೆಟ್ ಬಾಯ್​​ನ ಕರೆದು ಅವರಿಗೂ ಕೊಡ್ತಾರೆ. ಇದು ಪ್ರಭಾಸ್ ಹೆಚ್ಚುಗಾರಿಕೆ’ ಎಂದರು ನಂದ ಕಿಶೋರ್.

‘ಆದಿಪುರಷ್’ ಸಿನಿಮಾದ ಶೂಟ್ ಮುಂಬೈನಲ್ಲಿ ನಡೆಯುತ್ತಿತ್ತಂತೆ. ಈ ವೇಳೆ ಪ್ರಭಾಸ್ ಚೆನ್ನೈ ಇಂದ ಊಟ ತರಿಸಿದ್ದರು. ಫ್ಲೈಟ್ ಅಲ್ಲಿ ಓರ್ವನ ಕಳುಹಿಸಿ, ಆತ ಊಟ ತೆಗೆದು ಮತ್ತೆ ಮುಂಬೈಗೆ ಬಂದಿದ್ದ. ಇದು ಪ್ರಭಾಸ್ ಊಟದ ಬಗ್ಗೆ ಇರುವ ಕ್ರೇಜ್.

ಇದನ್ನೂ ಓದಿ: ಅನುಷ್ಕಾ ಜೊತೆ ಪ್ರಭಾಸ್ ಇನ್ನೂ ಎಷ್ಟು ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದಾರೆ ನೋಡಿ 

‘ನಮ್ಮಲ್ಲಿ ಅಂಬರೀಷ್ ಇದ್ದರು. ಅವರಿಗೆ ಎಲ್ಲರಿಗೂ ಊಟ ಹಾಕಿಸೋದು ಅಂದ್ರೆ ಇಷ್ಟ ಆಗಿತ್ತು. ಅದೇ ರೀತಿ ಪ್ರಭಾಸ್. ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು ಕಾಲದಿಂದಲೂ ಹಾಗೆಯೇ. ಪ್ರಭಾಸ್ ತಮ್ಮ ಕುಟುಂಬದ ಲೆಗಸಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ನಂದ ಕಿಶೋರ್ ಹಾಡಿ ಹೊಗಳಿದರು. ಅಂಬರೀಷ್ ಅವರ ಬಗ್ಗೆ ಅನೇಕ ಕಲಾವಿದರು ಮಾತನಾಡಿದ್ದಾರೆ. ಅವರು ನಟನ ಹಾಡಿ ಹೊಗಳಿದ್ದರು. ಅವರ ಫುಡ್ ಕ್ರೇಜ್ ವಿವರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:19 pm, Tue, 7 April 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us