ಮುಖ ಮೂತಿ ನೋಡದೇ ಹೊಡೆದಾಡಿಕೊಂಡ ಮಹೇಶ್ ಬಾಬು, ರಾಜಮೌಳಿ? ಸಿನಿಮಾ ಸತ್ತುಹೋಯ್ತು ಎಂದ ಆರ್​ಜಿವಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋಗೆ ಜನರಿಂದ ಬಗೆಬಗೆಯ ಕಮೆಂಟ್ ಬಂದಿದೆ. ಟಾಲಿವುಡ್​ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸಿನಿಮಾ ಸತ್ತುಹೋಯ್ತು’ ಎಂಬ ಕ್ಯಾಪ್ಷನ್ ಜೊತೆ ಈ ವಿಡಿಯೋವನ್ನು ಅವರು ಶೇರ್ ಮಾಡಿದ್ದಾರೆ.

ಮುಖ ಮೂತಿ ನೋಡದೇ ಹೊಡೆದಾಡಿಕೊಂಡ ಮಹೇಶ್ ಬಾಬು, ರಾಜಮೌಳಿ? ಸಿನಿಮಾ ಸತ್ತುಹೋಯ್ತು ಎಂದ ಆರ್​ಜಿವಿ
Ai Video Screenshots
Image Credit source: Instagram/rishikesav_m

Updated on: Feb 24, 2026 | 5:33 PM

ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಅವರು ‘ವಾರಾಣಸಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamouli) ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಅಪ್​ಡೇಟ್ ತಿಳಿಯಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ಅಂಥ ಅಭಿಮಾನಿಗಳಿಗೆ ಶಾಕ್ ಆಗುವಂತಹ ಒಂದು ವಿಡಿಯೋ ವೈರಲ್ ಆಗಿದೆ. ನಿರ್ದೇಶಕ ರಾಜಮೌಳಿ ಮತ್ತು ಮಹೇಶ್ ಬಾಬು ಅವರು ಮುಖ ಮೂತಿ ನೋಡದೇ ಹೊಡೆದಾಡಿಕೊಂಡ ದೃಶ್ಯ ಈ ವಿಡಿಯೋದಲ್ಲಿ ಇದೆ. ಆದರೆ ಇದು ಎಐ ವಿಡಿಯೋ (AI Video) ಎಂಬುದು ತಿಳಿದ ಬಳಿಕ ಫ್ಯಾನ್ಸ್ ನಿಟ್ಟುಸಿರುವ ಬಿಟ್ಟಿದ್ದಾರೆ.

ದಿನದಿನಕ್ಕೂ ಎಐ ತಂತ್ರಜ್ಞಾನ ಬೆಳೆಯುತ್ತಿದೆ. ಅದನ್ನು ಕೆಟ್ಟ ಉದ್ದೇಶದಿಂದ ಬಳಸುವವರ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ. ಸೆಲೆಬ್ರಿಟಿಗಳ ವಿಡಿಯೋವನ್ನು ಮನಸ್ಸಿಗೆ ಬಂದಂತೆ ತಿರುಚಲಾಗುತ್ತಿದೆ. ಈಗ ಮಹೇಶ್ ಬಾಬು ಮತ್ತು ರಾಜಮೌಳಿ ಅವರು ಹೊಡೆದಾಡುತ್ತಿರುವ ರೀತಿಯಲ್ಲಿ ಈ ಎಐ ವಿಡಿಯೋ ಸೃಷ್ಟಿ ಮಾಡಲಾಗಿದೆ. ಅದಕ್ಕೆ ಜನರಿಂದ ಹಲವು ರೀತಿಯ ಪ್ರತಿಕ್ರಿಯೆ ಬಂದಿದೆ.

ಈ ವಿಡಿಯೋ ನೋಡಿದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ‘ಸಿನಿಮಾ ಸತ್ತುಹೋಯ್ತು’ ಎಂದು ಹೇಳಿದ್ದಾರೆ. ‘ಇದು ಶೇಕಡ 100ರಷ್ಟು ಎಐ ಮೂಲಕ ಸೃಷ್ಟಿಸಿದ ವಿಡಿಯೋ’ ಎಂಬುದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಹಾಗಿದ್ದರೂ ಕೂಡ ರಾಮ್ ಗೋಪಾಲ್ ವರ್ಮಾ ಅವರು ಇದನ್ನು ಖಂಡಿಸಿದ್ದಾರೆ. ಜನರು ಕೂಡ ಈ ಬಗ್ಗೆ ತಕರಾರು ತೆಗೆದಿದ್ದಾರೆ.

‘ಇಂಥ ಎಐ ಕಂಟೆಂಟ್ ನಿಲ್ಲಿಸಿ. ಇದು ಅಪಾಯಕಾರಿ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ನಾನು ಈ ರೀತಿಯ ವಿಡಿಯೋಗಳನ್ನು ಉಚಿತವಾಗಿ ಕೂಡ ನೋಡಲ್ಲ’ ಎಂಬ ಕಮೆಂಟ್ ಸಹ ಬಂದಿದೆ. ಆದರೆ ಕೆಲವರು ಈ ವಿಡಿಯೋ ನೋಡಿ ತಮಾಷೆ ಮಾಡಿದ್ದಾರೆ. ‘ಇದು ರಾಜಾಸಾಬ್ ಸಿನಿಮಾದ ವಿಎಫ್​ಎಕ್ಸ್ ​ದೃಶ್ಯಗಳಿಗಿಂತ ಉತ್ತಮವಾಗಿದೆ’ ಎಂದು ಕೆಲವರು ಹೇಳಿದ್ದಾರೆ. ‘ಕೊನೇ ಪಕ್ಷ ಎಐ ವಿಡಿಯೋದಲ್ಲಾದರೂ ಮಹೇಶ್ ಬಾಬು ಅವರ ಬೇರೆ ಬೇರೆ ಎಕ್ಸ್​ಪ್ರೆಷನ್ ಕಾಣಿಸುತ್ತಿದೆ’ ಎಂದು ವ್ಯಂಗ್ಯ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಪಟ್ಟೆ ವೈರಲ್ ಆಗುತ್ತಿದೆ. rishikesav_m ಎಂಬ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಅಪ್​ಲೋಡ್ ಮಾಡಲಾಗಿದೆ. ಇದು ಮಿಲಿಯನ್​​ಗಟ್ಟಲೆ ವೀವ್ಸ್ ಪಡೆದಿದೆ. ಇದನ್ನು ನೋಡಿದರೆ ರಾಜಮೌಳಿ ಮತ್ತು ಮಹೇಶ್ ಬಾಬು ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us