‘ಆರ್ಆರ್ಆರ್’ ಸಿನಿಮಾ (RRR Movie) ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾದಿಂದ ನಿರ್ದೇಶಕ ರಾಜಮೌಳಿ ಅವರು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರಾಮ್ ಚರಣ್ (Ram Charan) ಹಾಗೂ ಜ್ಯೂ.ಎನ್ಟಿಆರ್ ಅವರು ಈ ಚಿತ್ರದಿಂದ ಗೆದ್ದು ಬೀಗಿದ್ದಾರೆ. ಈ ಚಿತ್ರದಲ್ಲಿ ಹಲವು ಮೈನವಿರೇಳಿಸುವ ದೃಶ್ಯಗಳಿವೆ. ಇದನ್ನು ಹೇಗೆ ಶೂಟ್ ಮಾಡಿರಬಹುದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇದಕ್ಕೆ ಉತ್ತರವಾಗಿ ಈಗ ‘ಆರ್ಆರ್ಆರ್’ ಚಿತ್ರದ (RRR Movie) ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ಅವಾಕ್ಕಾಗಿದ್ದಾರೆ.
ಡಿವಿವಿ ದಾನಯ್ಯ ಅವರು ‘ಆರ್ಆರ್ಆರ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅವರು ಈ ಚಿತ್ರಕ್ಕಾಗಿ 500 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ. ನೀರಿನಂತೆ ಹಣ ಹೆಚ್ಚು ಖರ್ಚಾಗಿದ್ದರಿಂದ ಪ್ರತಿ ದೃಶ್ಯಗಳೂ ಅದ್ಭುತವಾಗಿ ಮೂಡಿ ಬಂದಿದೆ. ಆದರೆ, ಪ್ರತಿ ದೃಶ್ಯದ ಹಿಂದಿರುವ ಶ್ರಮ ಎಷ್ಟು ಎಂಬುದನ್ನು ನೋಡಿದರೆ ನಿಜಕ್ಕೂ ಅಚ್ಚರಿ ಆಗಲೇಬೇಕು.
ಇದನ್ನೂ ಓದಿ: ಒಟಿಟಿಗೆ ಬಂದ ನಂತರ ಥಿಯೇಟರ್ನಲ್ಲಿ ರೀ-ರಿಲೀಸ್ ಆಗುತ್ತಿದೆ ‘ಆರ್ಆರ್ಆರ್’ ಸಿನಿಮಾ
ಕೋಮರಂ ಭೀಮ್ (ಜ್ಯೂ.ಎನ್ಟಿಆರ್) ಹಾಗೂ ಅಲ್ಲೂರಿ ಸೀತಾರಾಮರಾಜು (ರಾಮ್ ಚರಣ್) ಭೇಟಿ ಆಗುವ ದೃಶ್ಯ ಸಿನಿಮಾದ ಆರಂಭದಲ್ಲೇ ಬರುತ್ತದೆ. ಈ ದೃಶ್ಯ ನಡೆಯೋದು ಒಂದು ಸೇತುವೆ ಮೇಲೆ. ಒಂದು ಕಡೆ ಸೇತುವೆ ಮೇಲೆ ಚಲಿಸುತ್ತಿರುವ ಟ್ರೇನ್ಗೆ ಬೆಂಕಿ ಬಿದ್ದಿರುತ್ತದೆ. ಮತ್ತೊಂದು ಕಡೆ ಅದೇ ಸೇತುವೆ ಕೆಳ ಭಾಗದಲ್ಲಿ ಬಾಲಕನೋರ್ವ ತೆಪ್ಪದ ಮೇಲೆ ಹೋಗುತ್ತಿರುತ್ತಾನೆ. ಬಾಲಕನ ರಕ್ಷಣೆಗೆ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮರಾಜು ಒಂದಾಗುತ್ತಾರೆ. ಈ ದೃಶ್ಯಕ್ಕೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.
ಈ ದೃಶ್ಯವನ್ನು ಸಂಪೂರ್ಣವಾಗಿ ಶೂಟ್ ಮಾಡಿದು ಒಂದು ಸೆಟ್ನಲ್ಲಿ. ಆದರೆ, ಇದಕ್ಕೆ ಬಳಕೆ ಆದ ಗ್ರಾಫಿಕ್ಸ್ ಮಾತ್ರ ಅತ್ಯುತ್ತಮ ಗುಣಮಟ್ಟದ್ದು. ಈ ಕಾರಣಕ್ಕೆ ಆ ದೃಶ್ಯ ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ. ವಿದೇಶದ ಗ್ರಾಫಿಕ್ಸ್ ಸಂಸ್ಥೆಗಳು ಇದಕ್ಕಾಗಿ ಕೆಲಸ ಮಾಡಿವೆ. ಈಗ ಹಂಚಿಕೊಂಡಿರುವ ಮೇಕಿಂಗ್ ವಿಡಿಯೋದಲ್ಲಿ ಆ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವಿಡಿಯೋ ನೋಡಿದ ಫ್ಯಾನ್ಸ್ ನಿಜಕ್ಕೂ ಅಚ್ಚರಿಗೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.