ರಾಜಮೌಳಿ (Rajamouli) ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ (RRR Movie) ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡಿದೆ. ಈ ಚಿತ್ರವನ್ನು ನೋಡಿದ ಫ್ಯಾನ್ಸ್ ಸಖತ್ ಖುಷಿಪಟ್ಟರು. ರಾಜಮೌಳಿ ಅವರ ನಿರ್ದೇಶನ ಕಂಡು ಹುಬ್ಬೇರಿಸಿದರು. ಈ ಸಿನಿಮಾ ಈಗಾಗಲೇ 50 ದಿನಗಳನ್ನು ಪೂರೈಸಿದೆ. ಭಾರತದ ಮಾರುಕಟ್ಟೆ ಮಾತ್ರವಲ್ಲದೆ ವಿದೇಶದಲ್ಲೂ ಈ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ. ಈಗ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಒಂದು ಸಿಕ್ಕಿದೆ. ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆದ ನಂತರ ಚಿತ್ರಮಂದಿರದಲ್ಲಿ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
‘ಆರ್ಆರ್ಆರ್’ ಸಿನಿಮಾ ಅಮೆರಿಕದಲ್ಲಿ ದೊಡ್ಡ ಯಶಸ್ಸು ಕಂಡಿದೆ. ಭಾರತೀಯ ಸಿನಿಮಾಗಳ ಪೈಕಿ ಅಮೆರಿಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎನ್ನುವ ಖ್ಯಾತಿ ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ ಕಾಂಬಿನೇಷನ್ನಲ್ಲಿ ಮೂಡಿ ಬಂದ ಈ ಸಿನಿಮಾಗೆ ಸಿಕ್ಕಿದೆ. ಅನೇಕ ಹಾಲಿವುಡ್ ಸೆಲೆಬ್ರಿಟಿಗಳು ಹಾಗೂ ಅಲ್ಲಿನ ಸಿನಿಪ್ರಿಯರು ‘ಆರ್ಆರ್ಆರ್’ ಚಿತ್ರವನ್ನು ಮೆಚ್ಚಿಕೊಂಡರು. ಹೀಗಾಗಿ ಅಮೆರಿಕದ ಭಾಗದಲ್ಲಿ ಸಿನಿಮಾ ಅಬ್ಬರಿಸಿದೆ.
ಅಮೆರಿಕದಲ್ಲಿ ಸಿನಿಮಾ 50 ದಿನ ಕಳೆದ ಹೊರತಾಗಿಯೂ ‘ಆರ್ಆರ್ಆರ್’ ಚಿತ್ರವನ್ನು ಕೆಲವರಿಗೆ ನೋಡಲು ಸಾಧ್ಯವಾಗಿರಲಿಲ್ಲ. ‘ಕೆಜಿಎಫ್ 2’ ಬಂದ ಕಾರಣ ‘ಆರ್ಆರ್ಆರ್’ ಸಿನಿಮಾಗೆ ಎಲ್ಲ ಕಡೆಗಳಲ್ಲೂ ಶೋ ಸಿಕ್ಕಿರಲಿಲ್ಲ. ಅಂಥವರಿಗೆ ಈಗ ಸಿನಿಮಾ ತಂಡ ಸಿಹಿಸುದ್ದಿ ನೀಡಿದೆ. ಅಮೆರಿಕದಲ್ಲಿ ಜ್ಯೂನ್ 1ರಂದು ರಾತ್ರಿ ಈ ಸಿನಿಮಾ ಸ್ಕ್ರೀನಿಂಗ್ ಆಗಲಿದೆ. 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ.
‘ಆರ್ಆರ್ಆರ್’ ಅಧಿಕೃತ ಟ್ವಿಟರ್ ಖಾತೆ ಮೂಲಕ ಈ ಬಗ್ಗೆ ಘೋಷಣೆ ಮಾಡಲಾಗಿದೆ. ‘ಅಮೆರಿಕದ ಜನತೆ ತೋರಿದ ಪ್ರೀತಿಗೆ ಧನ್ಯವಾದ. ಜೂನ್ 1ರಂದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ’ ಎಂದು ಟ್ವಿಟರ್ನಲ್ಲಿ ಬರೆಯಲಾಗಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಬಹುತೇಕ ಟಿಕೆಟ್ಗಳು ಸೋಲ್ಡ್ ಆಗಿವೆ.
ಮೇ 20ಕ್ಕೆ ಒಟಿಟಿಯಲ್ಲಿ ‘ಆರ್ಆರ್ಆರ್’:
ಈ ಚಿತ್ರ ಒಟಿಟಿ ಪ್ಲಾಟ್ಫಾರ್ಮ್ಗೆ ಕಾಲಿಡುತ್ತಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಬಳಿಕ ಈಗ ಮನೆಮನೆಗಳಲ್ಲೂ ಮನರಂಜನೆ ನೀಡಲು ಈ ಸಿನಿಮಾ ಬರುತ್ತಿದೆ. ‘ಆರ್ಆರ್ಆರ್’ ಚಿತ್ರ ಯಾವಾಗ ಒಟಿಟಿಗೆ ಬರಲಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದರು. ಆ ಕಾಯುವಿಕೆಗೆ ಈಗ ತೆರೆ ಬಿದ್ದಿದೆ. ಮೇ 20ರಂದು ಈ ಚಿತ್ರ ಜೀ5 ಮೂಲಕ ಪ್ರಸಾರ ಆಗಲಿದೆ. ಮೂಲ ತೆಲುಗಿನ ಈ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಗಳಿಗೆ ಡಬ್ ಆಗಿದೆ. ಈ ಎಲ್ಲ ವರ್ಷನ್ಗಳು ಕೂಡ ಮೇ 20ರಿಂದ ವೀಕ್ಷಣೆಗೆ ಲಭ್ಯವಾಗಲಿವೆ. ವಿಶೇಷ ಎಂದರೆ ಮೇ 20ರಂದು ಜ್ಯೂ. ಎನ್ಟಿಆರ್ ಬರ್ತ್ಡೇ. ಆ ದಿನವೇ ‘ಆರ್ಆರ್ಆರ್’ ಸಿನಿಮಾದ ವರ್ಲ್ಡ್ ಪ್ರೀಮಿಯರ್ ಆಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.