ಎಸ್.ಎಸ್. ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದಕ್ಕೆ ಬೇರೆಯದೇ ಆದ ತೂಕ ಇರುತ್ತದೆ. ಅವರ ನಿರ್ದೇಶನದ ಸಿನಿಮಾಗಳು ಬಹುತೇಕರಿಗೆ ಇಷ್ಟವಾಗುತ್ತದೆ. ಅವರ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾದ ಟೀಸರ್ ಹಾಗೂ ಪೋಸ್ಟರ್ಗಳು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಈಗ ಟ್ರೇಲರ್ ರಿಲೀಸ್ ದಿನಾಂಕದ ಬಗ್ಗೆ ಚಿತ್ರತಂಡ ಘೋಷಣೆ ಮಾಡಿದೆ. ಡಿಸೆಂಬರ್ 3ಕ್ಕೆ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ.
ಜನವರಿ 7ರಂದು ‘ಆರ್ಆರ್ಆರ್’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಹಲವು ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಚಿತ್ರದ ಮೇಲೆ ಭರವಸೆ ಹುಟ್ಟಿಸುವ ಕೆಲಸ ನಡೆದಿದೆ. ಈಗ ಡಿಸೆಂಬರ್ 3ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗುತ್ತಿದ್ದು, ಸಿನಿಪ್ರಿಯರ ಕಾತುರ ಹೆಚ್ಚಿದೆ.
ರಾಜಮೌಳಿ ಸಿನಿಮಾ ಬಜೆಟ್ಗೆ ತಕ್ಕಂತೆ ಅದ್ದೂರಿಯಾಗಿ ಮೂಡಿ ಬರುತ್ತದೆ. ‘ಆರ್ಆರ್ಆರ್’ ಸಿನಿಮಾ ಮೇಕಿಂಗ್ ಕೂಡ ಉತ್ಕೃಷ್ಟ ಮಟ್ಟದಿಂದ ಕೂಡಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಟ್ರೇಲರ್ ರಿಲೀಸ್ ಆದ ನಂತರದಲ್ಲಿ ಚಿತ್ರತಂಡ ಪ್ರಚಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಿದೆ. ಟ್ರೇಲರ್ ರಿಲೀಸ್ ಆದ ಒಂದು ತಿಂಗಳವರೆಗೆ ನಾನಾ ರಾಜ್ಯಗಳಿಗೆ ತೆರಳಿ ತಂಡ ಸಿನಿಮಾ ಪ್ರಚಾರ ಕಾರ್ಯ ನಡೆಸಿಲಿದೆ.
ಕರ್ನಾಟಕದಲ್ಲಿ ಗ್ರ್ಯಾಂಡ್ ಆಗಿ ಪ್ರೀ-ರಿಲೀಸ್ ಇವೆಂಟ್ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ರಾಜಮೌಳಿ ಇತ್ತೀಚೆಗೆ ಮಾಹಿತಿ ನೀಡಿದ್ದರು. ಈ ಕಾರ್ಯ ಯಾವಾಗ ನಡೆಯಲಿದೆ ಎನ್ನುವ ಕುತೂಹಲ ಕನ್ನಡಿಗರಲ್ಲಿ ಮೂಡಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂನಲ್ಲಿ ಸಿನಿಮಾ ಮೂಡಿ ಬರುತ್ತಿದೆ.
Get ready to witness the magnificence of #RRRMovie. Trailer out on December 3rd…#RRRTrailerOnDec3rd #RRRTrailer@SSRajamouli @tarak9999 @ajaydevgn @aliaa08 @mmkeeravaani @oliviamorris891 @RRRMovie @DVVMovies @LahariMusic @TSeries pic.twitter.com/a1SJGK5rIo
— Ram Charan (@AlwaysRamCharan) November 29, 2021
‘ಆರ್ಆರ್ಆರ್’ ಚಿತ್ರದಲ್ಲಿ ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ‘ಆರ್ಆರ್ಆರ್’ ಚಿತ್ರದಲ್ಲಿ ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಪೋಸ್ಟರ್ ಮತ್ತು ಹಾಡುಗಳು ಧೂಳೆಬ್ಬಿಸಿವೆ.
ಇದನ್ನೂ ಓದಿ: SS Rajamouli: ಕನ್ನಡಿಗರಲ್ಲಿ ಎರಡು ವಿಚಾರಕ್ಕೆ ಕ್ಷಮೆ ಕೇಳಿ ಮಾತು ಆರಂಭಿಸಿದ ಎಸ್ಎಸ್ ರಾಜಮೌಳಿ
‘ಆರ್ಆರ್ಆರ್’ ಸಿನಿಮಾದಲ್ಲಿ ಆಲಿಯಾ ಭಟ್ ಕಾಣಿಸಿಕೊಳ್ಳೋದು ಕೇವಲ ಇಷ್ಟು ನಿಮಿಷನಾ?