ಆ ಒಬ್ಬ ನಟಿಗಾಗಿ ಹಾಡು ಹಾಡುವುದಿಲ್ಲ ಎಂದು ಶಪಥ ಮಾಡಿದ್ದ ಎಸ್ ಜಾನಕಿ
S Janaki movie: 70 ವರ್ಷಗಳ ವೃತ್ತಿ ಬದುಕಿನಲ್ಲಿ ನೂರಾರು ಕಲಾವಿದರಿಗಾಗಿ ಎಸ್ ಜಾನಕಿ ಹಾಡು ಹಾಡಿದ್ದಾರೆ. ದೊಡ್ಡ ನಟಿಯಾಗಿರಲಿ, ಬಾಲ ನಟಿ ಆಗಿರಲಿ, ಹೊಸಬರಾಗಿರಲಿ, ಹಳಬರಲಾಗಿಲಿ, ನಾಯಕಿ ಆಗಿರಲಿ, ಪೋಷಕ ನಟಿ ಆಗಿರಲಿ ಯಾರಿಗೂ ಸಹ ಇಲ್ಲ ಎನ್ನದೆ ಧ್ವನಿ ನೀಡಿದ್ದಾರೆ. ಆದರೆ ಒಮ್ಮೆ ಮಾತ್ರ ತೆಲುಗಿನ ಲಿಜೆಂಡರಿ ನಟಿಯೊಬ್ಬರಿಗೆ ತಾವು ಧ್ವನಿ ನೀಡುವುದಿಲ್ಲ ಎಂದು ಶಪಥ ಮಾಡಿದ್ದರಂತೆ ಎಸ್ ಜಾನಕಿ. ಯಾರದು? ಯಾಕೆ ಅಂಥಹಾ ನಿರ್ಧಾರ ಮಾಡಿದ್ದರು?

ಖ್ಯಾತ ಗಾಯಕಿ ಎಸ್ ಜಾನಕಿ (S Janaki) ನಿಧನರಾಗಿದ್ದಾರೆ. ಹಲವಾರು ಚಿತ್ರರಂಗದ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕೋಟ್ಯಂತರ ಅಭಿಮಾನಿಗಳು ಜಾನಕಿ ಅವರ ಅಗಲಿಕೆಗೆ ಕಂಬನಿ ಮಿಡಿದ್ದಾರೆ. ಸುಮಾರು 70 ವರ್ಷಗಳ ವೃತ್ತಿ ಬದುಕಿನಲ್ಲಿ ನೂರಾರು ಕಲಾವಿದರಿಗಾಗಿ ಎಸ್ ಜಾನಕಿ ಹಾಡು ಹಾಡಿದ್ದಾರೆ. ದೊಡ್ಡ ನಟಿಯಾಗಿರಲಿ, ಬಾಲ ನಟಿ ಆಗಿರಲಿ, ಹೊಸಬರಾಗಿರಲಿ, ಹಳಬರಲಾಗಿಲಿ, ನಾಯಕಿ ಆಗಿರಲಿ, ಪೋಷಕ ನಟಿ ಆಗಿರಲಿ ಯಾರಿಗೂ ಸಹ ಇಲ್ಲ ಎನ್ನದೆ ಧ್ವನಿ ನೀಡಿದ್ದಾರೆ. ಆದರೆ ಒಮ್ಮೆ ಮಾತ್ರ ತೆಲುಗಿನ ಲಿಜೆಂಡರಿ ನಟಿಯೊಬ್ಬರಿಗೆ ತಾವು ಧ್ವನಿ ನೀಡುವುದಿಲ್ಲ ಎಂದು ಶಪಥ ಮಾಡಿದ್ದರಂತೆ ಎಸ್ ಜಾನಕಿ. ಯಾರದು? ಯಾಕೆ ಅಂಥಹಾ ನಿರ್ಧಾರ ಮಾಡಿದ್ದರು?
ಎಸ್ ಜಾನಕಿ ಅವರು ಕನ್ನಡದಂತೆ ತೆಲುಗು ಚಿತ್ರರಂಗದಲ್ಲಿಯೂ ಸಹ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಂತೆ ತೆಲುಗಿನಲ್ಲಿಯೂ ಸಹ ಏಳು ದಶಕಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಅನೇಕ ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಆದರೆ, ಇಂದು ‘ಮಹಾನಟಿ’ ಎಂದು ಕರೆಸಿಕೊಳ್ಳುತ್ತಿರುವ ದಿವಂಗತ ಸಾವಿತ್ರಿಯವರ ಸಿನಿಮಾಗಳಿಗೆ ತಾನು ಹಾಡುವುದಿಲ್ಲ ಎಂದು ಜಾನಕಿ ಅವರು ಕಟ್ಟುನಿಟ್ಟಾಗಿ ಹೇಳಿದ್ದರಂತೆ. ಮಾತ್ರವಲ್ಲದೆ ತಮ್ಮ ನಿರ್ಧಾರದಿಂದ ಏನೇ ಆದರೂ ಹಿಂದೆ ಸರಿಯಲಿಲ್ಲವಂತೆ ಜಾನಕಿ.
ತಾವು ಸಾವಿತ್ರಿ ಅವರ ಸಿನಿಮಾಗಳಿಗೆ ಹಾಡದ ವಿಷಯದ ಬಗ್ಗೆ ಖುದ್ದು ಅವರೇ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು, ‘ಸಾವಿತ್ರಿ ಅವರ ಸಿನಿಮಾಗಳಿಗೆ ಹೆಚ್ಚಾಗಿ ಪಿ ಸುಶೀಲಾ ಹಾಡುತ್ತಿದ್ದರು. ವಿಶೇಷವಾಗಿ ಸಾವಿತ್ರಿಯವರ ಅಭಿನಯಕ್ಕೆ ಮತ್ತು ಹಾವಭಾವಗಳಿಗೆ ಸುಶೀಲ ಅವರ ಧ್ವನಿ ಸರಿಯಾಗಿ ಹೊಂದಿಕೆಯಾಗುತ್ತದೆ ಎಂದು ಖುದ್ದು ನಟಿ ಸಾವಿತ್ರಿ ಬಲವಾಗಿ ನಂಬಿದ್ದರು. ಇದರಿಂದಾಗಿ ತಮ್ಮ ಸಿನಿಮಾಗಳಿಗೆ ಸುಶೀಲ ಅವರೇ ಹಾಡಬೇಕು ಎಂಬ ನಿಯಮವನ್ನು ಸಾವಿತ್ರಿ ಹಾಕಿಕೊಂಡಿದ್ದರಂತೆ. ಆದರೆ ಈ ವಿಷಯ ತಿಳಿಯದ ಜಾನಕಿ ಅವರು ಒಂದು ತಮಿಳು ಸಿನಿಮಾದಲ್ಲಿ ಸಾವಿತ್ರಿಗಾಗಿ ಹಾಡೊಂದನ್ನು ಹಾಡಿದ್ದರು. ಹಾಡು ಕೂಡ ಅದ್ಭುತವಾಗಿ ಬಂದಿತ್ತು. ಆದರೆ, ಜಾನಕಮ್ಮ ಹಾಡಿದ ಆ ಹಾಡನ್ನು ಪಕ್ಕಕ್ಕಿಟ್ಟು, ಸುಶೀಲ ಅವರಿಂದ ಮತ್ತೆ ಹಾಡಿಸಿ ಮರು-ರೆಕಾರ್ಡಿಂಗ್ ಮಾಡಿಸಿದ್ದರಂತೆ. ಇದರಿಂದ ಬೇಸರಗೊಂಡ ಜಾನಕಿ ಅವರು, ಅಂದಿನಿಂದ ಸಾವಿತ್ರಿ ಸಿನಿಮಾಗಳಿಗೆ ಹಾಡಬಾರದೆಂದು ನಿರ್ಧರಿಸಿದರಂತೆ.
ಇದನ್ನೂ ಓದಿ:ಎಸ್. ಜಾನಕಿ ನಿಧನಕ್ಕೆ ಲಂಡನ್ನಿಂದಲೇ ಸಂಗೀತ ನಿರ್ದೇಶಕ ಇಳಯರಾಜ್ ಸಂತಾಪ
‘ಸಾವಿತ್ರಿ ಅವರಿಗೆ ಸುಶೀಲ ಅವರ ಧ್ವನಿಯೆಂದರೆ ಇಷ್ಟ. ಆಕೆಯ ಅಭಿನಯಕ್ಕೆ ಸುಶೀಲ ಅವರೇ ಸೂಕ್ತ ಎಂದು ಅವರ ಅಭಿಪ್ರಾಯವಿತ್ತು. ಅದಕ್ಕಾಗಿಯೇ ನಾನು ಹಾಡುತ್ತೇನೆ ಎಂದಾಗ ಅವರು ಒಪ್ಪುತ್ತಿರಲಿಲ್ಲ. ಹಾಗಾಗಿಯೇ ‘ನೀ ಲೀಲ ಪಾಡೇದ’ ಎಂಬ ಹಾಡನ್ನು ಕೂಡ ನಾನು ಹಾಡುವುದಿಲ್ಲ ಎಂದು ಹೇಳಿದ್ದೆ. ಅದು ಸಾವಿತ್ರಿ ಅವರ ಸಿನಿಮಾ ಆಗಿದ್ದರಿಂದ ಆ ಹಾಡನ್ನು ಹಾಡಲು 3 ತಿಂಗಳು ತಡೆಹಿಡಿದಿದ್ದೆ. ಕೊನೆಗೆ ಆ ಹಾಡಿನಲ್ಲಿ ಸಾವಿತ್ರಿ ನಟಿಸುತ್ತಿಲ್ಲ ಎಂದು ನಿರ್ದೇಶಕರು ಮತ್ತು ನಿರ್ಮಾಪಕರು ಹೇಳಿದ ನಂತರವೇ ನಾನು ಹಾಡಲು ಒಪ್ಪಿಕೊಂಡೆ. ಆದರೆ ಅಂತಿಮವಾಗಿ ಆ ಹಾಡಿನಲ್ಲಿ ಸಾವಿತ್ರಿಯೇ ನಟಿಸಿದರು’ ಎಂದು ತಿಳಿಸಿದ್ದರು.
ಸಾವಿತ್ರಿ ಅವರು ತೆಲುಗು ಚಿತ್ರರಂಗದ ಲಿಜೆಂಡರಿ ನಟಿ. ಈಗ ಅವರನ್ನು ‘ಮಹಾನಟಿ’ ಎಂದೇ ಕರೆಯಲಾಗುತ್ತದೆ. ತೆಲುಗಿನಲ್ಲಿ ನಟರಲ್ಲಿ ಎನ್ಟಿಆರ್ ಅವರಿಗಿರುವ ಸ್ಥಾಯಿಯೇ ನಟಿಯರಲ್ಲಿ ಸಾವಿತ್ರಿ ಅವರಿಗಿದೆ. ಆದರೆ ಆ ನಟಿಗೆ ಧ್ವನಿ ನೀಡಲು ನಿರಾಕರಿಸಿ, ಸ್ವಾಭಿಮಾನ ಮೆರೆದಿದ್ದರು ಜಾನಕಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




