ಶಾರುಖ್ ಮನೆ ಮಿಸ್ ಆಯ್ತು, ಸೈಫ್ ಮನೆ ಈಸಿ ಆಯ್ತು; ಆರೋಪಿಯ ರಾದ್ದಾಂತಗಳು ಒಂದೆರಡಲ್ಲ

| Updated By: ರಾಜೇಶ್ ದುಗ್ಗುಮನೆ

Updated on: Jan 17, 2025 | 1:14 PM

ಸೈಫ್ ಅವರು ‘ಸದ್ಗುರು ಬಿಲ್ಡರ್ಸ್​’ ನಿರ್ಮಾಣದ ‘ಸದ್ಗುರು ಶರಣ್’ ಅಪಾರ್ಟ್​ಮೆಂಟ್​ನಲ್ಲಿ ಇದ್ದಾರೆ. ಐದು ಬೆಡ್​ರೂಂ ಮನೆ ಇದಾಗಿದೆ. ನಾಲ್ಕು ಫ್ಲೋರ್​​ನಲ್ಲಿ ಸೈಫ್ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಬೆಲೆ 100 ಕೋಟಿ ರೂಪಾಯಿಗೂ ಅಧಿಕವಾಗಿದೆ. ಆದರೆ, ಈ ಮನೆಗೆ ಭದ್ರತೆ ಮಾತ್ರ ಇಲ್ಲ. ಇದು ಕಳ್ಳನಿಗೆ ಸಹಕಾರಿ ಆಗಿದೆ.

ಶಾರುಖ್ ಮನೆ ಮಿಸ್ ಆಯ್ತು, ಸೈಫ್ ಮನೆ ಈಸಿ ಆಯ್ತು; ಆರೋಪಿಯ ರಾದ್ದಾಂತಗಳು ಒಂದೆರಡಲ್ಲ
ಶಾರುಖ್ ಖಾನ್
Follow us on

ಮನೆ ಒಳಗೆ ನುಗ್ಗಿ, ಹಣಕ್ಕಾಗಿ ಬೇಡಿಕೆ ಇಟ್ಟು ಆ ಬಳಿಕ ಸೈಫ್ ಅಲಿ ಖಾನ್​ಗೆ ಚುಚ್ಚಿ ಹೋಗಿದ್ದ ವ್ಯಕ್ತಿ ಈಗ ಬಂಧನಕ್ಕೆ ಒಳಗಾಗಿದ್ದಾನೆ. ಈತನ ವಿಚಾರಣೆ ವೇಳೆ ಸಾಕಷ್ಟು ಶಾಕಿಂಗ್ ವಿಚಾರಗಳು ಹೊರ ಬೀಳುತ್ತಿವೆ. ಈತ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎಂಬುದು ಒಂದು ಕಡೆಯಾದರೆ, ಈತ ಶಾರುಖ್ ಖಾನ್ ಮನೆಗೂ ನುಗ್ಗಲು ಪ್ರಯತ್ನಿಸಿದ್ದ ಎಂಬ ವಿಚಾರ ರಿವೀಲ್ ಆಗಿದೆ.

ಶಾರುಖ್ ಖಾನ್ ಅವರ ಮನೆ ‘ಮನ್ನತ್’ ಮುಂಬೈನ ಬಾಂದ್ರಾದಲ್ಲಿಯೇ ಇದೆ. ಈ ಮನೆಗೆ ಸಾಕಷ್ಟು ಭದ್ರತೆ ಇದೆ. ಈ ಮನೆಯ ಗೇಟ್​ನ ಭದ್ರತಾ ಸಿಬ್ಬಂದಿ 24 ಗಂಟೆ ಕಾಯುತ್ತಾರೆ. ಇಲ್ಲಿ ಯಾವುದೇ ವ್ಯಕ್ತಿ ಸುಖಾಸುಮ್ಮನೆ ಒಳ ನುಗ್ಗಲು ಸಾಧ್ಯವೇ ಇಲ್ಲ. ಆದಾಗ್ಯೂ ಈ ವ್ಯಕ್ತಿ ಹೀಗೊಂದು ಪ್ರಯತ್ನ ಮಾಡಿದ್ದ.

ಬಂಧಿತ ಆರೋಪಿ ಜನವರಿ 14ರಂದು ರಾತ್ರಿ ಶಾರುಖ್ ಖಾನ್ ಮನೆ ಪ್ರವೇಶಿಸಲು ಮುಂದಾಗಿದ್ದ. ಆದರೆ, ಅದು ವಿಫಲವಾಗಿತ್ತು. ನಂತರ ಈ ಬಂಗಲೆ ಬಿಟ್ಟು ಆತ ಸೈಫ್ ಅಲಿ ಖಾನ್ ಮನೆ ಒಳಗೆ ಹೋದ. ಅಲ್ಲಿನ ಭದ್ರತಾ ವೈಫಲ್ಯ ಈ ವ್ಯಕ್ತಿಗೆ ಸಹಕಾರಿ ಆಗಿತ್ತು. ಅನಾಯಾಸವಾಗಿ ಆತ ಕಟ್ಟಡ ಪ್ರವೇಶಿಸಿ, ಸೈಫ್ ಮನೆ ಪ್ರವೇಶಿಸಿದ್ದ.

ಸೈಫ್ ಅಲಿ ಖಾನ್ ಅವರು ಸೈಫ್ ಅವರು ‘ಸದ್ಗುರು ಬಿಲ್ಡರ್ಸ್​’ ನಿರ್ಮಾಣದ ‘ಸದ್ಗುರು ಶರಣ್’ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದಾರೆ. ಇಲ್ಲಿ ಸರಿಯಾದ ಭದ್ರತೆ ಇರಲಿಲ್ಲ. ಸೈಫ್ ಮನೆಗೆ ಯಾರು ಬರುತ್ತಾರೆ ಹೋಗುತ್ತಾರೆ ನೋಡಲು ಭದ್ರತಾ ಸಿಬ್ಬಂದಿಯನ್ನೂ ನಿಯೋಜನೆ ಮಾಡಿರಲಿಲ್ಲ. ಬಿಲ್ಡಿಂಗ್ ಪ್ರವೇಶಿಸುವ ವ್ಯಕ್ತಿಯ ಹೆಸರನ್ನು ಬರೆದುಕೊಳ್ಳಲು ಅಲ್ಲಿ ಬುಕ್ ಕೂಡ ಇರಲಿಲ್ಲ.

ಇದನ್ನೂ ಓದಿ: ಸೈಫ್ ಅಲಿ ಖಾನ್​ಗೆ ಚಾಕು ಇರಿದ ವ್ಯಕ್ತಿ ಅರೆಸ್ಟ್; 30 ಗಂಟೆಗಳ ಬಳಿಕ ಬಲೆಗೆ ಬಿದ್ದ ಆರೋಪಿ

ಸೈಫ್ ಅವರ ಫ್ಲಾಟ್ ಒಳಗೆ ನಾಲ್ಕು ಮಹಡಿಗಳಿವೆ. ಇಷ್ಟು ದೊಡ್ಡ ಮನೆ ಇದ್ದರೂ ಸೈಫ್ ಅವರ ಮನೆಯಲ್ಲಿ ಸಿಸಿಟಿವಿ ಇರಲಿಲ್ಲ. ಇದನ್ನು ತಿಳಿದು ಪೊಲೀಸರಿಗೆ ಆಶ್ಚರ್ಯ ಆಗಿದೆ. ಸೈಫ್ ಅಲಿಖಾನ್ ಮೇಲೆ ದಾಳಿ ಮಾಡಿದ ನಂತರ ಕಳ್ಳ ಕಟ್ಟಡದ ಮೆಟ್ಟಿಲುಗಳಿಂದ ಕೆಳಗಿಳಿದಿದ್ದಾನೆ. ಈ ವೇಳೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆತನ ಮುಖ ಸೆರೆಯಾಗಿದೆ. ಆದರೆ ಸೈಫ್ ಅವರ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಇಲ್ಲ ಅನ್ನೋದು ಶಾಕಿಂಗ್ ವಿಚಾರ.  ‘ಇದು ಸೈಫ್-ಕರೀನಾಗೆ ಮಾತ್ರವಲ್ಲ, ಈ ರೀತಿ ನಿರ್ಲ್ಯಕ್ಷ ಮಾಡುವ ಇತರರಿಗೂ ಎಚ್ಚರಿಕೆಯಾಗಿದೆ’ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.