ರಜನಿಕಾಂತ್ ಪಾತ್ರಕ್ಕೆ ಧ್ವನಿ ಕೊಟ್ಟ ಸಾಯಿಕುಮಾರ್; ಹೆಚ್ಚಿತು ‘ಲಾಲ್ ಸಲಾಂ ಕ್ರೇಜ್’
ಕನ್ನಡದ ನಟ ಸಾಯಿಕುಮಾರ್ ಅವರು ‘ಲಾಲ್ ಸಲಾಂ’ ಚಿತ್ರದಲ್ಲಿ ರಜನಿಕಾಂತ್ ಮಾಡಿರುವ ಮೊಯಿದೀನ್ ಭಾಯ್ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ರಜನಿಕಾಂತ್ ಏಕೆ ಡಬ್ ಮಾಡಿಲ್ಲ ಎನ್ನುವ ಪ್ರಶ್ನೆ ಮೂಡೋದು ಸಹಜ. ಈ ಪ್ರಶ್ನೆ ಈ ಸ್ಟೋರಿಯಲ್ಲಿದೆ ಉತ್ತರ. ಈ ಸಿನಿಮಾ ಫೆಬ್ರವರಿ 9ರಂದು ರಿಲೀಸ್ ಆಗಲಿದೆ.

‘ಲಾಲ್ ಸಲಾಂ’ ಸಿನಿಮಾ (Laal Salaam Movie) ಫೆಬ್ರವರಿ 9ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಲು ಕಾರಣ ಸೂಪರ್ ಸ್ಟಾರ್ ರಜನಿಕಾಂತ್. ಅವರು ಮೊಯಿದೀನ್ ಭಾಯ್ ಹೆಸರಿನ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ರಿಲೀಸ್ಗೂ ಮೊದಲೇ ಒಂದು ಅಪ್ಡೇಟ್ ಸಿಕ್ಕಿದೆ. ಕನ್ನಡದ ಸಾಯಿಕುಮಾರ್ ಅವರು ರಜನಿಕಾಂತ್ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ರಜನಿಕಾಂತ್ ಏಕೆ ಡಬ್ ಮಾಡಿಲ್ಲ ಎನ್ನುವ ಪ್ರಶ್ನೆ ಮೂಡೋದು ಸಹಜ. ಅದಕ್ಕೂ ಉತ್ತರವಿದೆ.
‘ಲಾಲ್ ಸಲಾಂ’ ತಮಿಳು ಸಿನಿಮಾ. ತಮಿಳಿನ ಜೊತೆಗೆ ತೆಲುಗಿನಲ್ಲೂ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದ ತೆಲುಗು ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ತೆಲುಗು ವರ್ಷನ್ನಲ್ಲಿ ರಜನಿಕಾಂತ್ ಪಾತ್ರಕ್ಕೆ ಸಾಯಿಕುಮಾರ್ ಧ್ವನಿ ನೀಡಿದ್ದಾರೆ. ಅವರ ಖಡಕ್ ವಾಯ್ಸ್ ಪಾತ್ರದ ತೂಕವನ್ನು ಹೆಚ್ಚಿಸಿದೆ. ತಮಿಳಿನ ಜೊತೆ ತೆಲುಗು ವರ್ಷನ್ ಕೂಡ ಫೆಬ್ರವರಿ 9ರಂದೇ ರಿಲೀಸ್ ಆಗಲಿದೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಇರುವ ಕೆಲವು ರಜನಿಕಾಂತ್ ಫ್ಯಾನ್ಸ್ಗೆ ತಂಡದ ನಿರ್ಧಾರ ಬೇಸರ ಮೂಡಿಸಿದೆ. ತೆಲುಗು ಭಾಗದಲ್ಲಿ ತಂಡ ಯಾವುದೇ ಪ್ರಚಾರ ಮಾಡಿಲ್ಲ. ಇದು ಚಿತ್ರಕ್ಕೆ ಹಿನ್ನಡೆ ಆಗೋ ಸಾಧ್ಯತೆ ಇದೆ. ಇಷ್ಟು ವರ್ಷಗಳ ಕಾಲ ರಜನಿಕಾಂತ್ ಸಿನಿಮಾಗಳು ತೆಲುಗಿಗೆ ಡಬ್ ಆದಾಗ ಅವರ ಪಾತ್ರಕ್ಕೆ ಗಾಯಕ ಮನೋ ಅವರು ಧ್ವನಿ ನೀಡುತ್ತಿದ್ದರು. ಅವರ ವಾಯ್ಸ್ಗೆ ಅಲ್ಲಿನ ಫ್ಯಾನ್ಸ್ ಅಡ್ಜಸ್ಟ್ ಆಗಿದ್ದರು. ಈಗ ಆ ಜಾಗಕ್ಕೆ ಸಾಯಿಕುಮಾರ್ ಅವರನ್ನು ತಂದಿದ್ದು ಕೆಲವರಿಗೆ ಬೇಸರ ಇದೆ. ಇನ್ನೂ ಕೆಲವರಿಗೆ ಸಾಯಿ ಕುಮಾರ್ ಅವರ ಖಡಕ್ ವಾಯ್ಸ್ನಲ್ಲಿ ಡೈಲಾಗ್ ಕೇಳಿ ಖುಷಿ ಆಗಿದೆ.
‘ಲಾಲ್ ಸಲಾಂ’ ಸಿನಿಮಾ ಹಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ರಜನಿಕಾಂತ್ ಅವರ ಪಾತ್ರ 40 ನಿಮಿಷಗಳ ಕಾಲ ತೆರೆಮೇಲೆ ಬರಲಿದೆ. ರಜನಿಕಾಂತ್ ಜೊತೆ ವಿಷ್ಣು ವಿಶಾಲ್, ವಿಕ್ರಾಂತ್ ಮೊದಲಾದ ಕಲಾವಿದರು ಈ ಚಿತ್ರಲ್ಲಿ ಅಭಿನಯಿಸಿದ್ದಾರೆ. ರೆಹಮಾನ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೊದಲ ಬಾರಿಗೆ ಕಥೆ ಕೇಳಿದಾಗ ಇದು ಬೋರಿಂಗ್ ಸಿನಿಮಾ ಆಗಬಹುದು ಎಂದು ಅವರಿಗೆ ಅನಿಸಿತ್ತು. ಆದರೆ, ಸಿನಿಮಾ ನೋಡಿದ ಬಳಿಕ ರೆಹಮಾನ್ ಅಭಿಪ್ರಾಯ ಬದಲಾಯಿತು. ಅವರು ಚಿತ್ರವನ್ನು ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ: ಲಾಲ್ ಬಾಗ್ನಲ್ಲಿ ದೈತ್ಯ ಲಾಂಟಾನ ಆನೆಗಳ ಹಿಂಡು; ಮಾರ್ಚ್ 3ರ ವರೆಗೆ ಮಾತ್ರ ಪ್ರದರ್ಶನ
‘ಲೈಕಾ ಪ್ರೊಡಕ್ಷನ್ಸ್’ ಮೂಲಕ ‘ಲಾಲ್ ಸಲಾಂ’ ಚಿತ್ರ ಮೂಡಿಬಂದಿದೆ. ಸುಭಾಸ್ಕರನ್ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ 40 ನಿಮಿಷ ನಟಿಸಲು ರಜನಿಕಾಂತ್ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Thu, 8 February 24



