AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್- ಸಂದೀಪ್ ರೆಡ್ಡಿ ವಂಗಾ ಸಿನಿಮಾ ಸೆಟ್ಟೇರೋದು ಯಾವಾಗ?

ಸಲ್ಮಾನ್ ಖಾನ್ ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. 'ಅನಿಮಲ್' ಯಶಸ್ಸಿನ ನಂತರ ವಂಗಾ ಅವರ ಡಾರ್ಕ್ ಶೈಲಿಯಲ್ಲಿ ಸಲ್ಮಾನ್ ಅವರನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ, ವಂಗಾ ಮುಂದಿನ 3-4 ವರ್ಷಗಳ ಕಾಲ 'ಸ್ಪಿರಿಟ್', 'ಅನಿಮಲ್ ಪಾರ್ಕ್', ಮತ್ತು ಅಲ್ಲು ಅರ್ಜುನ್ ಪ್ರಾಜೆಕ್ಟ್‌ಗಳೊಂದಿಗೆ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಈ ಕನಸಿನ ಪ್ರಾಜೆಕ್ಟ್ ಕಾರ್ಯರೂಪಕ್ಕೆ ಬರುವುದು ಅಸಾಧ್ಯ ಎನ್ನಲಾಗಿದೆ.

ಸಲ್ಮಾನ್ ಖಾನ್- ಸಂದೀಪ್ ರೆಡ್ಡಿ ವಂಗಾ ಸಿನಿಮಾ ಸೆಟ್ಟೇರೋದು ಯಾವಾಗ?
ಸಲ್ಮಾನ್-ಸಂದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 11, 2026 | 8:12 AM

Share

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ (Salman Khan) ಮತ್ತು ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿರುವ ಸ್ಟಾರ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾವೊಂದು ಬರಲಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ‘ಅನಿಮಲ್’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಸಂದೀಪ್ ವಂಗಾ ಅವರ ಡಾರ್ಕ್ ಮತ್ತು ಇಂಟೆನ್ಸ್ ಸಿನಿಮ್ಯಾಟಿಕ್ ಜಗತ್ತಿನಲ್ಲಿ ಸಲ್ಮಾನ್ ಖಾನ್ ಅವರನ್ನು ನೋಡಲು ಅಭಿಮಾನಿಗಳು ಕ್ಯೂರಿಯಾಸಿಟಿಯಿಂದ ಕಾಯುತ್ತಿದ್ದಾರೆ. ಆದರೆ, ಈ ಪ್ರಾಜೆಕ್ಟ್ ಸದ್ಯಕ್ಕೆ ಸೆಟ್ಟೇರುವುದು ಅಸಾಧ್ಯ ಎನ್ನಲಾಗುತ್ತಿದೆ.

ಸದ್ಯ ಸಲ್ಮಾನ್ ಖಾನ್ ಅವರು ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ನೀಡಲು ಸೌತ್‌ನ ಮೋಸ್ಟ್ ವಾಂಟೆಡ್ ಮತ್ತು ಟ್ರೆಂಡಿಂಗ್‌ನಲ್ಲಿರುವ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ. ಈಗಾಗಲೇ ತಮಿಳಿನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಜೊತೆ ‘ಸಿಕಂದರ್’ ಸಿನಿಮಾ ಮಾಡಿರೋ ಅವರು ಈಗ ಸಂದೀಪ್ ರೆಡ್ಡಿ ವಂಗಾ ಅವರ ಮೇಲೂ ಕಣ್ಣಿಟ್ಟಿದ್ದಾರೆ. ಆದರೆ ಚಿತ್ರರಂಗದ ಒಳಗಿನ ಮಾಹಿತಿ ಪ್ರಕಾರ, ಈ ಕಾಂಬಿನೇಷನ್ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯರೂಪಕ್ಕೆ ಬರುವುದು ಅನುಮಾನ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಮುಂಬರುವ ಸಿನಿಮಾಗಳ ಲೈನಪ್ ನೋಡಿದರೆ, ಮುಂದಿನ ಕೆಲವು ವರ್ಷಗಳ ಕಾಲ ಅವರು ಬೇರೆ ಯಾವುದೇ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳಲು ಸಾಧ್ಯವೇ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ. ಸದ್ಯ ಅವರು ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದ ಕೆಲಸಗಳಲ್ಲಿ ಸಂಪೂರ್ಣವಾಗಿ ಮುಳುಗಿದ್ದಾರೆ. ಇದು ಅವರ ಮೊದಲ ಆದ್ಯತೆಯಾಗಿದ್ದು, ಭಾರಿ ನಿರೀಕ್ಷೆ ಮೂಡಿಸಿರುವ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಆಗಿದೆ.

ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳು:

‘ಸ್ಪಿರಿಟ್’ ಚಿತ್ರ ಮುಗಿಯುತ್ತಿದ್ದಂತೆಯೇ ಸಂದೀಪ್ ವಂಗಾ ಅವರು ರಣಬೀರ್ ಕಪೂರ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ ‘ಅನಿಮಲ್’ನ ಸೀಕ್ವೆಲ್ ಆದ ‘ಅನಿಮಲ್ ಪಾರ್ಕ್’ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದರ ಜೊತೆಗೆ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆಗೂ ಸಂದೀಪ್ ಒಂದು ಬಿಗ್ ಪ್ರಾಜೆಕ್ಟ್‌ಗೆ ಕಮಿಟ್ ಆಗಿದ್ದಾರೆ. ಈ ಎಲ್ಲಾ ಸಿನಿಮಾಗಳ ಕಮಿಟ್‌ಮೆಂಟ್‌ಗಳು ಈಗಾಗಲೇ ಲಾಕ್ ಆಗಿರುವುದರಿಂದ, ಇವೆಲ್ಲವನ್ನೂ ಮುಗಿಸಲು ಅವರಿಗೆ ಕನಿಷ್ಠ 3 ರಿಂದ 4 ವರ್ಷಗಳು ಬೇಕಾಗಬಹುದು.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಕಾಮಿಡಿಯನ್ ಪ್ರಣೀತ್‌ಗೆ ಮೊದಲೇ ವಾರ್ನಿಂಗ್ ನೀಡಿದ್ದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಮತ್ತು ಸಂದೀಪ್ ರೆಡ್ಡಿ ವಂಗಾ ಒಂದಾದರೆ ಬಾಕ್ಸ್ ಆಫೀಸ್ ಧೂಳೀಪಟವಾಗುವುದು ಗ್ಯಾರಂಟಿ. ಆದರೆ, ಸಂದೀಪ್ ಅವರ ಬಿಡುವಿಲ್ಲದ ಶೆಡ್ಯೂಲ್ ಹಾಗೂ ಸಲ್ಮಾನ್ ಖಾನ್ ಅವರ ಇತರೆ ಸಿನಿಮಾಗಳ ದಿನಾಂಕಗಳ ಕಾರಣದಿಂದಾಗಿ ಈ ಕ್ರೇಜಿ ಕಾಂಬಿನೇಷನ್ ಸದ್ಯದ ಮಟ್ಟಿಗಂತೂ ಕೇವಲ ಪೇಪರ್ ಮೇಲಿನ ಸುದ್ದಿಯಾಗಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ. ಆಫೀಷಿಯಲ್ ಅನೌನ್ಸ್‌ಮೆಂಟ್ ಬರುವವರೆಗೂ ಅಭಿಮಾನಿಗಳು ಕಾಯಲೇಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More