Salman Khan: ‘ರಾಧೆ’ ಪೈರಸಿ ಕಾಪಿ ನೋಡ್ತಿದೀರಾ? ಹಾಗಿದ್ರೆ ಪರಿಣಾಮ ಎದುರಿಸೋಕೆ ಸಿದ್ಧವಾಗಿ

ತಮಿಳ್​ ರಾಕರ್ಸ್​ ಸೇರಿ ಸಾಕಷ್ಟು ವೆಬ್​ಸೈಟ್​ಗಳಲ್ಲಿ ರಾಧೆ ಸಿನಿಮಾ ಲೀಕ್ ಆಗಿತ್ತು. ಇದರ ಬಗ್ಗೆ ಸಲ್ಲು ಅಭಿಮಾನಿಗಳು ಕಿಡಿಕಾರಿದ್ದರು. ಸಿನಿಮಾ ಲೀಕ್​ ಮಾಡಿದವರ ವಿರುದ್ಧ ಸೈಬರ್​ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

Salman Khan: ‘ರಾಧೆ’ ಪೈರಸಿ ಕಾಪಿ ನೋಡ್ತಿದೀರಾ? ಹಾಗಿದ್ರೆ ಪರಿಣಾಮ ಎದುರಿಸೋಕೆ ಸಿದ್ಧವಾಗಿ
ಸಲ್ಮಾನ್​ ಖಾನ್​
Follow us
ರಾಜೇಶ್ ದುಗ್ಗುಮನೆ
|

Updated on: May 16, 2021 | 3:03 PM

 ಸಲ್ಮಾನ್​ ಖಾನ್​ ರಾಧೆ ಚಿತ್ರ ಜೀ5ನಲ್ಲಿ ತೆರೆಕಂಡು ಹೊಸ ದಾಖಲೆ ಸೃಷ್ಟಿ ಮಾಡಿತ್ತು. ಒಂದೇ ದಿನ ಸಿನಿಮಾ 42 ಲಕ್ಷ ವೀಕ್ಷಣೆ ಕಂಡಿತ್ತು. ಈ ಮಧ್ಯೆ ಸಿನಿಮಾ ಆನ್​ಲೈನ್​ನಲ್ಲಿ ಲೀಕ್​ ಆಗಿತ್ತು. ರಿಲೀಸ್​ ಆದ ಕೆಲವೇ ಹೊತ್ತಿಗೆ ಸಿನಿಮಾ ಪೈರಸಿ ಆಗಿತ್ತು. ಈ ಬಗ್ಗೆ ಸಲ್ಮಾನ್​ ಖಾನ್​ ಬೇಸರ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ಪೈರಸಿ ಮಾಡಿದವರಿಗೆ ಎಚ್ಚರಿಕೆ ನೀಡಿದ್ದಾರೆ.

ತಮಿಳ್​ ರಾಕರ್ಸ್​ ಸೇರಿ ಸಾಕಷ್ಟು ವೆಬ್​ಸೈಟ್​ಗಳಲ್ಲಿ ರಾಧೆ ಸಿನಿಮಾ ಲೀಕ್ ಆಗಿತ್ತು. ಇದರ ಬಗ್ಗೆ ಸಲ್ಲು ಅಭಿಮಾನಿಗಳು ಕಿಡಿಕಾರಿದ್ದರು. ಸಿನಿಮಾ ಲೀಕ್​ ಮಾಡಿದವರ ವಿರುದ್ಧ ಸೈಬರ್​ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಈ ವಿಚಾರವನ್ನು ಸಲ್ಮಾನ್​ ಖಾನ್​ ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಸಲ್ಮಾನ್​ ಖಾನ್​, ‘ರಾಧೆ ಸಿನಿಮಾವನ್ನು ನಾವು ಕೇವಲ 249 ರೂಪಾಯಿಗೆ ನೋಡುವ ಅವಕಾಶವನ್ನು ನೀಡಿದ್ದೇವೆ. ಇದರ ಹೊರತಾಗಿಯೂ ಕೆಲವರು ರಾಧೆ ಸಿನಿಮಾವನ್ನು ಅಕ್ರಮವಾಗಿ ಸಿನಿಮಾ ಸ್ಟ್ರೀಮ್​ ಮಾಡುತ್ತಿದ್ದಾರೆ. ಈ ರೀತಿಯ ಪೈರೇಟೆಡ್​ ಸೈಟ್​ಗಳ ವಿರುದ್ಧ ಸೈಬರ್​ ಸೆಲ್​ನವರು ಕ್ರಮ ಕೈಗೊಳ್ಳಬೇಕು. ದಯವಿಟ್ಟು ಇದರಲ್ಲಿ ಭಾಗಿಯಾಗಬೇಡ. ಏಕೆಂದರೆ, ನಿಮ್ಮ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತದೆ. ನೀವು ಭಾರೀ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ರಾಧೆ’ ನೋಡೋಕೆ ಅಭಿಮಾನಿಗಳು ಮುಗಿಬಿದ್ದ ಪರಿಣಾಮ ಜೀ5 ಸರ್ವರ್​ ತಾಂತ್ರಿಕ ತೊಂದರೆ ಅನುಭವಿಸಿತ್ತು. ಜೀ5ನಲ್ಲಿ ಮೇ13ರ ಮಧ್ಯಾಹ್ನ 12 ಗಂಟೆಗೆ ಈ ಸಿನಿಮಾ ರಿಲೀಸ್​ ಆಗಿತ್ತು. ಈ ವೇಳೆ ಸುಮಾರು 12.5 ಲಕ್ಷ ಜನರು ಒಮ್ಮೆಲೇ ಲಾಗಿನ್​ ಆಗಲು ಪ್ರಯತ್ನಿಸಿದ್ದರು. ಇದರ ಪರಿಣಾಮವಾಗಿ ಅನೇಕರಿಗೆ ಜೀ5 ವೆಬ್​ಸೈಟ್ ಮತ್ತು ಆ್ಯಪ್​ ಓಪನ್​ ಆಗಿರಲಿಲ್ಲ. ಈ ಬಗ್ಗೆ ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ.

ಇನ್ನು, ‘ರಾಧೆ’ ಚಿತ್ರ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿಲ್ಲ. ಐಎಂಡಿಬಿ ‘ರಾಧೆ’ ಚಿತ್ರಕ್ಕೆ 10 ಅಂಕಕ್ಕೆ ಕೇವಲ 2.4 ರೇಟಿಂಗ್​ ನೀಡಿದೆ. ಇದರಿಂದ ಸಲ್ಮಾನ್​ ವೃತ್ತಿ ಜೀವನದ ಎರಡನೇ ಅತ್ಯಂತ ಕೆಟ್ಟ ಸಿನಿಮಾ ಎಂಬ ಹಣೆಪಟ್ಟಿ ‘ರಾಧೆ’ಗೆ ಸಿಕ್ಕಿದೆ. ರೇಸ್​ 3 ಚಿತ್ರಕ್ಕೆ ಐಎಂಡಿಬಿ 1.9 ರೇಟಿಂಗ್​ ನೀಡಿತ್ತು. ಇದು ಸಲ್ಲು ವೃತ್ತಿ ಜೀವನದ ಅತ್ಯಂತ ಕಳಪೆ ಚಿತ್ರವಾಗಿತ್ತು. ಈಗ ಈ ಸಾಲಿಗೆ ‘ರಾಧೆ’ ಕೂಡ ಸೇರ್ಪಡೆ ಆಗಿದೆ.

ಇದನ್ನೂ ಓದಿ: Salman Khan: ಕಳಪೆ ವಿಮರ್ಶೆ ಸಿಕ್ಕರೂ ದಾಖಲೆ ಬರೆದ ‘ರಾಧೆ’; ಒಟಿಟಿಯಲ್ಲಿ ಸಲ್ಮಾನ್​ ಖಾನ್​ ಹೊಸ ರೆಕಾರ್ಡ್​

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್