Samantha: ಮದುವೆ ಹೆಣ್ಣಿಗೆ ಮೇಕಪ್​ ಮಾಡ್ತಾರೆ ಸಮಂತಾ; ಬುಕಿಂಗ್​ ಓಪನ್​ ಆಗಿದೆ ಎಂದ ನಟಿ

ಸಮಂತಾ ಮತ್ತೆ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್​ ಬಿಡುವಿನ ಸಂದರ್ಭದಲ್ಲಿ ಅವರು ಕೀಟಲೆ ಒಂದನ್ನು ಮಾಡಿದ್ದಾರೆ. ಮಹಿಳೆ ಒಬ್ಬರಿಗೆ ಸಮಂತಾ ಮೇಕಪ್​ ಮಾಡಿದ್ದಾರೆ.

Samantha: ಮದುವೆ ಹೆಣ್ಣಿಗೆ ಮೇಕಪ್​ ಮಾಡ್ತಾರೆ ಸಮಂತಾ; ಬುಕಿಂಗ್​ ಓಪನ್​ ಆಗಿದೆ ಎಂದ ನಟಿ
ಸಮಂತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 18, 2021 | 6:03 PM

ಸಮಂತಾ (Samantha) ವಿಚ್ಛೇದನ ಪಡೆದ ನಂತರ ಒಂದು ತಿಂಗಳು ಮಂಕಾಗಿದ್ದರು. ಸಿನಿಮಾ ಕೆಲಸಗಳಿಗೆ ಬ್ರೇಕ್​ ಕೊಟ್ಟಿದ್ದರು. ಕ್ಯಾಮರಾ ಎದುರಿಸೋಕೆ ಸಾಧ್ಯವೇ ಇಲ್ಲ ಎಂಬುದು ಅವರಿಗೆ ಖಚಿತವಾಗಿತ್ತು. ಈ ಕಾರಣಕ್ಕೆ ಅವರು ಒಂದು ಗ್ಯಾಪ್​ ತೆಗೆದುಕೊಂಡಿದ್ದರು. ಈ ಮಧ್ಯೆ ಅವರು ರಿಷಿಕೇಷ ಹಾಗೂ ದುಬೈಗೆ ಪ್ರವಾಸಕ್ಕೆ ತೆರಳಿದ್ದರು. ಇದರಿಂದ ಅವರ ಮನಸ್ಸು ಸ್ವಲ್ಪ ಸಮಸ್ಥಿತಿಗೆ ಬಂದಿದೆ. ವಿಚ್ಛೇದನ ಪಡೆದರೂ ಬಣ್ಣ ಹಚ್ಚುವುದನ್ನು ಮುಂದುವರಿಸಲೇಬೇಕು. ಈ ಕಾರಣಕ್ಕೆ ಅವರು ನಟನೆಗೆ ಮರಳಿದ್ದಾರೆ. ಸಾಲುಸಾಲು ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಖ್ಯಾತ ನಿರ್ದೇಶಕ ಸುಕುಮಾರ್ ಅವರು ಆ್ಯಕ್ಷನ್​ ಕಟ್​ ಹೇಳುತ್ತಿರುವ ‘ಪುಷ್ಪ’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಅವರು ಹೆಜ್ಜೆ ಹಾಕುತ್ತಿದ್ದಾರೆ. ಈ ಮಧ್ಯೆ ಸಮಂತಾ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಸ್ಟೇಟಸ್​ ಒಂದನ್ನು ಹಂಚಿಕೊಂಡಿದ್ದಾರೆ. ಅವರು ಮದುವೆ ಹೆಣ್ಣಿಗೆ ಮೇಕಪ್​ ಮಾಡುತ್ತಾರೆ! ಈ ವಿಚಾರವನ್ನು ಅವರು ಬಹಿರಂಗ ಮಾಡಿದ್ದಾರೆ.

ಸಮಂತಾ ಮತ್ತೆ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್​ ಬಿಡುವಿನ ಸಂದರ್ಭದಲ್ಲಿ ಅವರು ಕೀಟಲೆ ಒಂದನ್ನು ಮಾಡಿದ್ದಾರೆ. ಮಹಿಳೆ ಒಬ್ಬರಿಗೆ ಸಮಂತಾ ಮೇಕಪ್​ ಮಾಡಿದ್ದಾರೆ. ಅವರು ಮಾಡಿದ ಮೇಕಪ್​ ತುಂಬಾನೇ ಕೆಟ್ಟದಾಗಿತ್ತು. ಇದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ, ಮದುವೆ ಆಗುವ ಹೆಣ್ಣುಮಕ್ಕಳಿಗೆ ಮೇಕಪ್​ ಮಾಡಲು ಬುಕಿಂಗ್​ ತೆರೆದಿದೆ ಎನ್ನುವ ಕ್ಯಾಪ್ಶನ್​ ನೀಡಿದ್ದಾರೆ.

ಇದನ್ನು ಸಮಂತಾ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ, ಅವರು ಮತ್ತೆ ಮೊದಲಿನ ಸ್ಥಿತಿಗೆ ಬಂದಿದ್ದು ಎಲ್ಲರಿಗೂ ಖುಷಿ ನೀಡಿದೆ. ಸಮಂತಾ ಅವರು ಹೀಗೆ ಖುಷಿಯಿಂದ ನಗುತ್ತಲೇ ಇರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇನ್ನೂ ಕೆಲವರು ನನಗೂ ಮೇಕಪ್​ ಮಾಡಿ ಎಂದು ಕೋರಿದ್ದಾರೆ.

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರಕ್ಕೆ ಖ್ಯಾತ ನಿರ್ದೇಶಕ ಸುಕುಮಾರ್​ ಅವರು ನಿರ್ದೇಶನ ಮಾಡಿದ್ದಾರೆ. ಅವರ ಬಹುತೇಕ ಸಿನಿಮಾಗಳಲ್ಲಿ ಒಂದು ಐಟಂ ಸಾಂಗ್​ ಇರುತ್ತದೆ. ಅದೇ ರೀತಿ ‘ಪುಷ್ಪ’ ಸಿನಿಮಾದಲ್ಲೂ ಒಂದು ಭರ್ಜರಿ ಐಟಂ ಸಾಂಗ್​ ಇಟ್ಟಿದ್ದಾರಂತೆ. ಈ ಹಾಡಿನಲ್ಲಿ ನರ್ತಿಸಲು ಈ ಮೊದಲು ಪೂಜಾ ಹೆಗ್ಡೆ ಮತ್ತು ಸನ್ನಿ ಲಿಯೋನ್​ ಅವರಿಗೆ ಆಫರ್​ ನೀಡಲಾಗಿತ್ತು. ಆದರೆ ಆ ನಟಿಯರು ಒಪ್ಪಿಕೊಂಡಿಲ್ಲ. ಅಂತಿಮವಾಗಿ ಸಮಂತಾ ಅವರು ಒಪ್ಪಿಕೊಂಡಿದ್ದಾರೆ. ಈ ಹಾಡಿಗಾಗಿ ಅವರು ಒಂದೂವರೆ ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಮಾಹಿತಿ ಹಬ್ಬಿದೆ.

ಇದನ್ನೂ ಓದಿ: Samantha: ‘ಪುಷ್ಪ’ ಚಿತ್ರದ ಐಟಂ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಲು ಸಮಂತಾ ಕೇಳಿದ ಸಂಬಳ ಎಷ್ಟು ಕೋಟಿ?

Published On - 6:03 pm, Thu, 18 November 21