Samantha: ‘ಖುಷಿ’ ಸಿನಿಮಾದ ಹಾಡಿಗೆ ಮನಸೋತ ಪ್ರೇಕ್ಷಕರು; ಯೂಟ್ಯೂಬ್​ನಲ್ಲಿ ಸದ್ದು ಮಾಡುತ್ತಿದೆ ಸಮಂತಾ ಸಾಂಗ್​

|

Updated on: May 11, 2023 | 4:47 PM

Kushi Movie Songs: ವಿಜಯ್​ ದೇವರಕೊಂಡ ಅವರ ಜನ್ಮದಿನದ ಪ್ರಯುಕ್ತ ‘ನಾ ರಾಜ ನುವ್ವೇ..’ ಹಾಡು ಬಿಡುಗಡೆ ಮಾಡಲಾಯಿತು. ಇದರಲ್ಲಿ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಸ್ಕ್ರೀನ್​ ಶೇರ್​ ಮಾಡಿಕೊಂಡಿದ್ದಾರೆ.

Samantha: ‘ಖುಷಿ’ ಸಿನಿಮಾದ ಹಾಡಿಗೆ ಮನಸೋತ ಪ್ರೇಕ್ಷಕರು; ಯೂಟ್ಯೂಬ್​ನಲ್ಲಿ ಸದ್ದು ಮಾಡುತ್ತಿದೆ ಸಮಂತಾ ಸಾಂಗ್​
ವಿಜಯ್ ದೇವರಕೊಂಡ, ಸಮಂತಾ
Follow us on

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ಅವರ ಸಿನಿಮಾಗಳು ಸೋತರೂ ಕೂಡ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಏಪ್ರಿಲ್​ 14ರಂದು ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ತೆರೆಕಂಡು ಸೋತಿತು. ಆ ಸೋಲಿನ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅದರ ಬೆನ್ನಲ್ಲೇ ಅವರು ಮುಂದಿನ ಸಿನಿಮಾದ ಕೆಲಸಗಳತ್ತ ಗಮನ ಹರಿಸಿದರು. ಈಗ ಅವರು ‘ಖುಷಿ’ (Kushi Movie) ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ವಿಜಯ್​ ದೇವರಕೊಂಡ (Vijay Devarakonda) ನಟಿಸುತ್ತಿದ್ದಾರೆ. ಈ ಸಿನಿಮಾದ ಮೊದಲ ಹಾಡು ಇತ್ತೀಚೆಗಷ್ಟೇ ಬಿಡುಗಡೆ ಆಯಿತು. ‘ನಾ ರಾಜ ನುವ್ವೇ..’ ಎಂಬ ಈ ಗೀತೆಗೆ ಪ್ರೇಕ್ಷಕರು ಮನ ಸೋತಿದ್ದಾರೆ. ಯೂಟ್ಯೂಬ್​ನಲ್ಲಿ ಈ ಹಾಡು ಎರಡು ದಿನಕ್ಕೆ 70 ಲಕ್ಷಕ್ಕಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ. ಇದು ಸಮಂತಾ ರುತ್​ ಪ್ರಭು ಅಭಿಮಾನಿಗಳಿಗೆ ಖುಷಿ ನೀಡಿದೆ. ಜನರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ‘ಖುಷಿ’ ಚಿತ್ರಕ್ಕೆ ಹೊಸ ಜೋಶ್​ ಬಂದಂತಾಗಿದೆ.

ಮೇ 9ರಂದು ವಿಜಯ್​ ದೇವರಕೊಂಡ ಅವರ ಜನ್ಮದಿನದ ಪ್ರಯುಕ್ತ ‘ನಾ ರಾಜ ನುವ್ವೇ..’ ಹಾಡು ಬಿಡುಗಡೆ ಮಾಡಲಾಯಿತು. ಇದರಲ್ಲಿ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಸ್ಕ್ರೀನ್​ ಶೇರ್​ ಮಾಡಿಕೊಂಡಿದ್ದಾರೆ. ಹೇಶಮ್​ ಅಬ್ದುಲ್​ ವಹಾಬ್​ ಅವರು ಈ ಹಾಡಿಗೆ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಧ್ವನಿ ನೀಡಿದ್ದಾರೆ ಕೂಡ. ಶಿವ ನಿರ್ವಾಣ ಅವರು ಸಾಹಿತ್ಯ ಬರೆಯುವುದರ ಜೊತೆಗೆ ನೃತ್ಯ ನಿರ್ದೇಶನವನ್ನೂ ಮಾಡಿದ್ದಾರೆ.

ಇದನ್ನೂ ಓದಿ
Samantha Ruth Prabhu: ಮತ್ತೆ ಕೈ ಕೊಟ್ಟಿದೆ ಸಮಂತಾ ರುತ್​ ಪ್ರಭು ಆರೋಗ್ಯ; ಅಭಿಮಾನಿಗಳಿಗೆ ಆತಂಕ
Samantha: ಶಾಕುಂತಲಂ ಸಿನಿಮಾ ಚಿತ್ರೀಕರಣದ ಐದು ಕೆಟ್ಟ ಅನುಭವಗಳ ನೆನೆದ ಸಮಂತಾ
ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ
Samantha: ‘ನಾನು ಇದನ್ನು ಹೇಳಲೇ ಇಲ್ಲ’: ಮಾಜಿ ಗಂಡನ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಮಂತಾ

ಸಂಗೀತ ಪ್ರಿಯರು ಈ ಹಾಡಿಗೆ ಮನಸೋತಿದ್ದಾರೆ. ಎಲ್ಲರಿಂದ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಯೂಟ್ಯೂಬ್​ನಲ್ಲಿ ಅಭಿಮಾನಿಗಳು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟಾಪ್​ 5 ವಿಡಿಯೋಗಳ ಪಟ್ಟಿಯಲ್ಲಿ ಈ ಹಾಡು ಕೂಡ ಸ್ಥಾನ ಪಡೆದುಕೊಂಡಿದೆ. ಇದರಿಂದ ‘ಖುಷಿ’ ಚಿತ್ರದ ಮೇಲೆ ಜನರಿಗೆ ಎಷ್ಟು ನಿರೀಕ್ಷೆ ಇದೆ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: Shaakuntalam: ಸದ್ದಿಲ್ಲದೇ ಒಟಿಟಿಗೆ ಬಂತು ‘ಶಾಕುಂತಲಂ’; ಕನ್ನಡದಲ್ಲೂ ಲಭ್ಯವಿದೆ ಸಮಂತಾ ನಟನೆಯ ಹೊಸ ಸಿನಿಮಾ

ವಿಜಯ್​ ದೇವರಕೊಂಡ ಮತ್ತು ಸಮಂತಾ ರುತ್​ ಪ್ರಭು ಅವರನ್ನು ದೊಡ್ಡ ಪರದೆಯಲ್ಲಿ ಜೊತೆಯಾಗಿ ನೋಡಬೇಕು ಎಂದು ಫ್ಯಾನ್ಸ್ ಕಾದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಕೆಲಸಗಳು ತಡವಾದವು. ಸೆಪ್ಟೆಂಬರ್​ 1ರಂದು ಸಿನಿಮಾ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.