Sreeleela: ವಿಜಯ್ ದೇವರಕೊಂಡಗೆ ಜೊತೆಯಾದ ಶ್ರೀಲೀಲಾ; ಫೋಟೋ ನೋಡಿ ಶುಭಕೋರಿದ ಅಭಿಮಾನಿಗಳು
Vijay Devarakonda: ನಟಿ ಶ್ರೀಲೀಲಾ ಅವರಿಗೆ ಮಸ್ತ್ ಆಫರ್ ಸಿಕ್ಕಿದೆ. ಅವರ ಆಯ್ಕೆ ಬಗ್ಗೆ ಟಾಲಿವುಡ್ ಪ್ರೇಕ್ಷಕರಿಗೆ ಖುಷಿ ಇದೆ. ಮುಹೂರ್ತದ ಫೋಟೋಗಳು ವೈರಲ್ ಆಗಿವೆ.
Updated on: May 03, 2023 | 4:07 PM

ಕನ್ನಡದ ನಟಿ ಶ್ರೀಲೀಲಾ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ತೆಲುಗು ಚಿತ್ರರಂಗದಲ್ಲಿ ಅವರು ಸಖತ್ ಶೈನ್ ಆಗುತ್ತಿದ್ದಾರೆ. ಈಗ ಅವರ ಹೊಸ ಸಿನಿಮಾ ಸೆಟ್ಟೇರಿದೆ.

ಟಾಲಿವುಡ್ನ ಖ್ಯಾತ ನಟ ವಿಜಯ್ ದೇವರಕೊಂಡ ಅಭಿನಯದ 12ನೇ ಸಿನಿಮಾಗೆ ಶ್ರೀಲೀಲಾ ನಾಯಕಿ ಆಗಿದ್ದಾರೆ. ಇಂದು (ಮೇ 3) ಈ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ಮುಹೂರ್ತದ ಫೋಟೋಗಳು ವೈರಲ್ ಆಗಿವೆ.

ಸಿತಾರಾ ಎಂಟರ್ಟೇನ್ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ತಾತ್ಕಾಲಿಕವಾಗಿ ‘ವಿಡಿ 12’ ಎಂದು ಕರೆಯಲಾಗುತ್ತಿದೆ.

ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಶ್ರೀಲೀಲಾ ಅವರು ಈಗಾಗಲೇ ಜನಪ್ರಿಯತೆ ಪಡೆದಿದ್ದಾರೆ. ಅವರ ಆಯ್ಕೆ ಬಗ್ಗೆ ಟಾಲಿವುಡ್ ಪ್ರೇಕ್ಷಕರಿಗೆ ಖುಷಿ ಇದೆ. ಮುಹೂರ್ತದ ಫೋಟೋ ಕಂಡು ಫ್ಯಾನ್ಸ್ ಶುಭ ಕೋರಿದ್ದಾರೆ.

ಗೌತಮ್ ತಿನ್ನನುರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಹೈದರಾಬಾದ್ನಲ್ಲಿ ಸರಳವಾಗಿ ಮುಹೂರ್ತ ನಡೆದಿದೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಶ್ರೀಲೀಲಾ ಜೊತೆ ಇನ್ನೂ ಯಾರೆಲ್ಲ ನಟಿಸಲಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಬಹಿರಂಗವಾಗಿಲ್ಲ.



















