ಏಪ್ರಿಲ್​ನಲ್ಲಿ ರಿಲೀಸ್​ ಆಗಲಿದೆ ಸಮಂತಾ ಹೊಸ ಚಿತ್ರ; ಈ ಬಾರಿ ಅಭಿಮಾನಿಗಳಿಗೆ ಏನಿದೆ ಸರ್ಪ್ರೈಸ್​?

| Updated By: ಮದನ್​ ಕುಮಾರ್​

Updated on: Feb 03, 2022 | 8:48 AM

‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದಲ್ಲಿ ಸಮಂತಾ ಜೊತೆ ವಿಜಯ್​ ಸೇತುಪತಿ ಮತ್ತು ನಯನತಾರಾ ಕೂಡ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿಘ್ನೇಶ್​ ಶಿವನ್​ ನಿರ್ದೇಶನ ಮಾಡಿದ್ದಾರೆ.

ಏಪ್ರಿಲ್​ನಲ್ಲಿ ರಿಲೀಸ್​ ಆಗಲಿದೆ ಸಮಂತಾ ಹೊಸ ಚಿತ್ರ; ಈ ಬಾರಿ ಅಭಿಮಾನಿಗಳಿಗೆ ಏನಿದೆ ಸರ್ಪ್ರೈಸ್​?
ನಯನತಾರಾ, ವಿಜಯ್​ ಸೇತುಪತಿ, ಸಮಂತಾ
Follow us on

ನಟಿ ಸಮಂತಾ (Samantha) ಅವರಿಗೆ ವೃತ್ತಿಜೀವನದಲ್ಲೀಗ ಬ್ಯಾಕ್​ ಟು ಬ್ಯಾಕ್​ ಯಶಸ್ಸು ಸಿಗುತ್ತಿದೆ. ಅನೇಕ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಅವರ ಆಯ್ಕೆಗಳು ಬದಲಾಗಿವೆ. ವೈಯಕ್ತಿಕ ಖುಷಿಗೆ ಅವರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ದೇಶ-ವಿದೇಶ ಸುತ್ತುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೊಸ ಹೊಸ ಸಾಹಸಗಳನ್ನು ಸಮಂತಾ ಮಾಡುತ್ತಿದ್ದಾರೆ. ಅದರ ಜೊತೆಗೆ ಹೆಚ್ಚು ಬೋಲ್ಡ್​ ಆದಂತಹ ಸಿನಿಮಾ ಮತ್ತು ಪಾತ್ರಗಳನ್ನು ಕೂಡ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಸಮಂತಾ ಅವರು ನಟಿಸಿರುವ ಹೊಸ ತಮಿಳು ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ‘ಕಾದು ವಾಕುಲ ರೆಂಡು ಕಾದಲ್​’ (Kaathu Vaakula Rendu Kaadhal) ಶೀರ್ಷಿಕೆಯ ಈ ಚಿತ್ರದಿಂದ ಹೊಸ ಅಪ್​ಡೇಟ್​ ನೀಡಲಾಗಿದೆ. ಖ್ಯಾತ ನಟಿ ನಯನತಾರಾ ಅವರ ಪ್ರಿಯಕರ ವಿಘ್ನೇಶ್​ ಶಿವನ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಪೋಸ್ಟರ್​ಗಳು ಗಮನ ಸೆಳೆದಿವೆ. ಫೆ.2ರಂದು ವಿಘ್ನೇಶ್​ ಶಿವನ್ (Vignesh Shivan)​ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಈ ಸಿನಿಮಾ ಏಪ್ರಿಲ್​ನಲ್ಲಿ ಬಿಡುಗಡೆ ಆಗಲಿದೆ.

‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದಲ್ಲಿ ಸಮಂತಾ ಜೊತೆ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ. ಸಮಂತಾ, ವಿಜಯ್​ ಸೇತುಪತಿ ಮತ್ತು ನಯನತಾರಾ ಅವರ ಕಾಂಬಿನೇಷನ್​ ಕಾರಣದಿಂದ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಸಮಂತಾ ಅವರು ಹೆಚ್ಚು ಹೆಚ್ಚು ಬೋಲ್ಡ್​ ಪಾತ್ರಗಳನ್ನು ಮಾಡುತ್ತಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಅವರು ಕಾಣಿಸಿಕೊಂಡ ಪರಿಗೆ ಎಲ್ಲರೂ ಅಚ್ಚರಿಪಟ್ಟಿದ್ದರು. ಇನ್ನು, ‘ಪುಷ್ಪ’ ಚಿತ್ರದ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ವಾಮ..’ ಹಾಡಿನಲ್ಲಿ ಅವರು ಸಖತ್​ ಗ್ಲಾಮರಸ್​ ಆಗಿ ಕಾಣಿಸಿಕೊಂಡರು.

ಪ್ರತಿಬಾರಿಯೂ ತಮ್ಮ ಪಾತ್ರದ ಮೂಲಕ ಪ್ರೇಕ್ಷಕರಿಗೆ ಸರ್ಪ್ರೈಸ್​ ನೀಡುತ್ತಿರುವ ಸಮಂತಾ ಅವರು ‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದಲ್ಲಿ ಯಾವ ರೀತಿಯ ಪಾತ್ರವನ್ನು ನಿಭಾಯಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಅಭಿಮಾನಿಗಳಲ್ಲಿ ಮನೆ ಮಾಡಿದೆ. ತಮ್ಮ ನೆಚ್ಚಿನ ನಟಿ ಯಾವ ರೀತಿ ಸರ್ಪ್ರೈಸ್​ ನೀಡುತ್ತಾರೆ ಎಂಬುದನ್ನು ತಿಳಿಯಲು ಏಪ್ರಿಲ್​ವರೆಗೂ ಕಾಯಬೇಕಿದೆ. ಫೆ.11ರಂದು ಈ ಸಿನಿಮಾದ ಟೀಸರ್​ ಬಿಡುಗಡೆ ಮಾಡುವುದಾಗಿ ವಿಘ್ನೇಶ್​ ಶಿವನ್​ ಘೋಷಿಸಿದ್ದಾರೆ. ಅದಕ್ಕಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ.

ಇನ್ನೊಂದು ಐಟಂ ಡ್ಯಾನ್ಸ್​?

ಸಮಂತಾ ಅವರು ‘ಊ ಅಂಟಾವಾ ಮಾವ. ಊಊ ಅಂಟಾವಾ ಮಾವ..’ ಅಂತ ಮೈ ಚಳಿ ಬಿಟ್ಟು ಕುಣಿದಿದ್ದರಿಂದ ಆ ಸಾಂಗ್​ ಸೂಪರ್​ ಹಿಟ್​ ಆಯಿತು. ‘ಪುಷ್ಪ’ ಚಿತ್ರದ ಭಾರಿ ಯಶಸ್ಸಿನ ಹಿಂದೆ ಆ ಹಾಡಿನ ಕೊಡುಗೆ ದೊಡ್ಡದಿದೆ. ಇದೇ ಸೂತ್ರವನ್ನು ಬಳಸಿಕೊಳ್ಳಲು ಇನ್ನೂ ಕೆಲವು ಸಿನಿಮಾ ತಂಡಗಳು ಪ್ಲ್ಯಾನ್​ ಮಾಡಿವೆ. ವಿಜಯ್​ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಜೋಡಿಯ ‘ಲೈಗರ್​’ ಸಿನಿಮಾದಲ್ಲೂ ಸಮಂತಾ ಇಂಥದ್ದೊಂದು ಐಟಂ ಸಾಂಗ್​ ಮಾಡಲಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಆ ಕುರಿತು ಚಿತ್ರತಂಡದಿಂದ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ:

Samantha: ಸಮಂತಾ ಶರ್ಟ್​ ಮೇಲೆ ಎಫ್ ವರ್ಡ್​​; ಇದು ಯಾರಿಗೆ ಕೊಟ್ಟ ಉತ್ತರ?

Samantha: ಅಬ್ಬಬ್ಬಾ, ಸಮಂತಾ ಖರೀದಿಸಿದ ಈ ಎರಡು ಜಾಕೆಟ್​ನ ಬೆಲೆ ಇಷ್ಟೊಂದಾ?