TikTok Star Suicide: ಟಿಕ್‌ಟಾಕ್ ಸ್ಟಾರ್ ಸಮೀರ್ ಗಾಯಕ್ವಾಡ್ ಆತ್ಮಹತ್ಯೆ, 21 ವರ್ಷದ ಯುವಕನ ಸಾವಿಗೆ ಕಾರಣವೇನು?
Sameer Gaikwad: ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಕ್ರಿಯರಾಗಿದ್ದ ಸಮೀರ್ ಗಾಯಕ್ವಾಡ್ ಅಪಾರ ಪ್ರಮಾಣದ ಅಭಿಮಾನಿಗಳನ್ನೂ ಗಳಿಸಿದ್ದರು. ಇದೀಗ ಅವರ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.
ಮುಂಬೈ: ಟಿಕ್‌ಟಾಕ್ (TikTok) ಮೂಲಕ ಪ್ರಸಿದ್ಧಿಯಾಗಿದ್ದ ಮಹಾರಾಷ್ಟ್ರ ಮೂಲದ 22 ವರ್ಷದ ಯುವಕ ಸಮೀರ್ ಗಾಯಕ್ವಾಡ್ (Sameer Gaikwad) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಕ್ರಿಯರಾಗಿದ್ದ ಸಮೀರ್ ಗಾಯಕ್ವಾಡ್ ಅಪಾರ ಪ್ರಮಾಣದ ಅಭಿಮಾನಿಗಳನ್ನೂ ಗಳಿಸಿದ್ದರು. ಇದೀಗ ಅವರ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದ್ದು, ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.
ಲೋನಿಕಂದ್ ಪೊಲೀಸರು ತಿಳಿಸಿರುವ ಪ್ರಕಾರ ಸಮೀರ್ ಆತ್ಮಹತ್ಯೆ ಕುರಿತಾಗಿ ಆತನ ಸ್ನೇಹಿತರು ಸೋದರ ಸಂಬಂಧಿ ಪ್ರಫುಲ್ಲ ಗಾಯಕ್ವಾಡ್ಗೆ ಮೊದಲು ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಎಚ್ಚೆತ್ತ ಪ್ರಫುಲ್ಲ ಗಾಯಕ್ವಾಡ್ ಪೊಲೀಸರಿಗೆ ಮಾಹಿತಿ ನೀಡಿ ವಾಘೋಲಿಯ ಕೇಸ್ನಂದ್ ರಸ್ತೆಯಲ್ಲಿರುವ ಸಮೀರ್ ಅವರ ಫ್ಲಾಟ್ಗೆ ಆಗಮಿಸಿದ್ದಾರೆ. ನಂತರ ತುರ್ತಾಗಿ ಸಮೀರ್ ಅವರನ್ನು ಲೈಫ್ಲೈನ್ ಆಸ್ಪತ್ರೆಗೆ ಕರೆದೊಯ್ಯಯಲಾಯಿತಾದರೂ ಅಲ್ಲಿನ ವೈದ್ಯರು ಸಮೀರ್ ಅದಾಗಲೇ ಸಾವಿಗೀಡಾಗಿರುವುದನ್ನು ದೃಢಪಡಿಸಿದ್ದಾರೆ.
ಸಮೀರ್ ಗಾಯಕ್ವಾಡ್ ಅವರ ರೆಡ್ಲೈಟ್ ಡೈರೀಸ್ ಎಂಬ ಬ್ಲಾಗ್ ಸೀರಿಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದ್ದು, ಆತನ ಪ್ರತಿಭೆಯನ್ನು ಅನೇಕರು ಮೆಚ್ಚಿಕೊಂಡಿದ್ದರು. ಸಾವಿಗೆ ಒಂದು ದಿನ ಮುಂಚೆಯೂ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಳೆಯ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದ ಸಮೀರ್, ಉತ್ತಮ ಪ್ರತಿಕ್ರಿಯೆ ಪಡೆದಿದ್ದರು. ಇನ್ಸ್ಟಾಗ್ರಾಂನಲ್ಲಿ ಸುಮಾರು 2,73,090 ಜನ ಹಿಂಬಾಲಕರನ್ನು ಹೊಂದಿದ್ದ ಯುವಕ ಟಿಕ್‌ಟಾಕ್ ಬ್ಯಾನ್ ನಂತರ ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಅಭಿಮಾನಿಗಳನ್ನು ತಲುಪುತ್ತಿದ್ದರು.
ಮರಾಠಿ ಭಾಷೆಯಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದ ಈ ಯುವಕ ಹೀಗೆ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಯಾವುದೇ ನಿಖರ ಮಾಹಿತಿಗಳು ಲಭ್ಯವಾಗಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆಯೇ ಕಂಡುಬರುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಶೀಘ್ರವೇ ಆತನ ಕುಟುಂಬಸ್ಥರು ಮತ್ತು ಆಪ್ತರಿಂದ ಮಾಹಿತಿ ಕಲೆ ಹಾಕಲಾಗುವುದು ಎಂದು ಲೋನಿಕಂದ್ ಪೊಲೀಸರು ಮಾಹಿತಿ ನೀಡಿದ್ದಾರೆ.
View this post on Instagram
View this post on Instagram
View this post on Instagram
ಇದನ್ನೂ ಓದಿ: 18ನೇ ವಯಸ್ಸಿಗೆ ನೇಣಿಗೆ ಶರಣಾದ ಟಿಕ್‌ಟಾಕ್ ತಾರೆ ಡಜಾರಿಯಾ ಕ್ವಿಂಟ್, ಆತ್ಮಹತ್ಯೆಗೆ ಕಾರಣವೇನು?
Published On - 11:17 am, Mon, 22 February 21