‘ಜೋಗಿ’ಗೆ 20 ವರ್ಷ; ಪ್ರೇಮ್-ಶಿವಣ್ಣ ಕಾಂಬಿನೇಷನ್​ ಚಿತ್ರದ ಕಲೆಕ್ಷನ್ ಎಷ್ಟಾಗಿತ್ತು?

‘ಜೋಗಿ’ ಚಿತ್ರ 20ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. 2005ರಲ್ಲಿ ಬಿಡುಗಡೆಯಾದ ಈ ಚಿತ್ರವು ಶಿವರಾಜ್ ಕುಮಾರ್ ಮತ್ತು ಅರುಂಧತಿ ನಾಗ್ ಅವರ ಅದ್ಭುತ ಅಭಿನಯದಿಂದಾಗಿ ಸೂಪರ್ ಹಿಟ್ ಆಯಿತು. ಚಿತ್ರದ ತಾಯಿ-ಮಗನ ಸೆಂಟಿಮೆಂಟ್ ಮತ್ತು ಗುರುಕಿರಣ್ ಅವರ ಸಂಗೀತವು ಚಿತ್ರದ ಯಶಸ್ಸಿಗೆ ಕಾರಣವಾಯಿತು. ಇದೀಗ, ಈ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಬೇಕೆಂಬ ಬೇಡಿಕೆ ಅಭಿಮಾನಿಗಳಿಂದ ಕೇಳಿಬರುತ್ತಿದೆ.

‘ಜೋಗಿ’ಗೆ 20 ವರ್ಷ; ಪ್ರೇಮ್-ಶಿವಣ್ಣ ಕಾಂಬಿನೇಷನ್​ ಚಿತ್ರದ ಕಲೆಕ್ಷನ್ ಎಷ್ಟಾಗಿತ್ತು?
ಜೋಗಿ

Updated on: Aug 20, 2025 | 11:50 AM

ಕಲ್ಟ್ ಕ್ಲಾಸಿಕ್ ಸಿನಿಮಾ ಎನಿಸಿಕೊಂಡಿರೋ ‘ಜೋಗಿ’ ಚಿತ್ರ ರಿಲೀಸ್ ಆಗಿ 20 ವರ್ಷಗಳು ಕಳೆದಿವೆ. 2005ರ ಆಗಸ್ಟ್ 19ರಂದು ಸಿನಿಮಾ ಥಿಯೇಟರ್​ನಲ್ಲಿ ಬಿಡುಗಡೆ ಕಂಡಿತು. ಈ ಚಿತ್ರ ಆಗಿನ ಕಾಲಕ್ಕೆ ಸೂಪರ್​-ಡೂಪರ್ ಹಿಟ್ ಆಯಿತು. ಅದೆಷ್ಟೋ ವಾರಗಳು ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಂಡವು. ಈ ಚಿತ್ರದಲ್ಲಿನ ತಾಯಿ ಸೆಂಟಿಮೆಂಟ್ ಜನರಿಗೆ ಹೆಚ್ಚು ಇಷ್ಟ ಆಯಿತು. ಈ ಸಿನಿಮಾ ರೀ-ರಿಲೀಸ್ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಪ್ರೇಮ್ ಅವರು ‘ಜೋಗಿ’ ಚಿತ್ರವನ್ನು ನಿರ್ದೇಶನ ಮಾಡಿದರು. ಶಿವರಾಜ್​ಕುಮಾರ್ ಮಾದೇಶ (ಜೋಗಿ) ಪಾತ್ರದಲ್ಲಿ ಕಾಣಿಸಿದರೆ ಅರುಂಧತಿ ನಾಗ್ ಜೋಗಿ ತಾಯಿ ಭಾಗ್ಯಕ್ಕನ ಪಾತ್ರದಲ್ಲಿ ಕಾಣಿಸಿಕೊಂಡರು. ಜೆನಿಫರ್ ಕೋತ್ವಾಲ್ ಚಿತ್ರಕ್ಕೆ ನಾಯಕಿ. ರಮೇಶ್ ಭಟ್, ಆದಿ ಲೋಕೇಶ್ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದರು. ಈ ಸಿನಿಮಾನ ಪಿ. ಕೃಷ್ಣ ಪ್ರಸಾದ್ ಅವರು ನಿರ್ಮಾಣ ಮಾಡಿದರು.

ಇದನ್ನೂ ಓದಿ
‘ಕ್ವಾಟ್ಲೆ ಕಿಚನ್’ ಶೋ​ನಿಂದ ದಿಢೀರ್​ ಹೊರ ನಡೆದ ಕೆಂಪಮ್ಮ; ಇಲ್ಲಿದೆ ವಿವರ
ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲವೂ ಕಬ್ಬಿಣ; ಕೈ ಕೊಟ್ಟ ಅದೃಷ್ಟ
ಸಲ್ಮಾನ್ ಖಾನ್ ಬಿಗ್ ಬಾಸ್ ಸಂಭಾವನೆಗೆ ಕತ್ತರಿ; ಕಿಚ್ಚನ ವಿಚಾರದಲ್ಲಿ ಏನು?
ವಿಮರ್ಶೆಯಲ್ಲಿ ಸೋತ ‘ಕೂಲಿ’ಗೆ ಮೊದಲ ಆಘಾತ ಕೊಟ್ಟ ಪ್ರೇಕ್ಷಕ

‘ಜೋಗಿ’ ಸಿನಿಮಾ ಹಿಟ್ ಆಗೋಕೆ ಗುರುಕಿರಣ್ ಸಂಗೀತದ ಮೋಡಿ ಕೂಡ ಸಾಕಷ್ಟಿದೆ. ‘ಬಿನ್ ಲಾಡೆನ್..’, ‘ಹೊಡಿ ಮಗ..’, ‘ಚುಕು ಬುಕು ರೈಲು..’ ಸೇರಿದಂತೆ ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆದವು. ಇದು ಸಿನಿಮಾದ ಮೈಲೇಜ್ ಹೆಚ್ಚಿಸಿತು. ಈ ಚಿತ್ರ ಪರಭಾಷೆಗಳಿಗೂ ರಿಮೇಕ್ ಆಯಿತು.

‘ಜೋಗಿ’ ಸಿನಿಮಾ ರಿಲೀಸ್ ಆಗಿದ್ದು 20 ವರ್ಷಗಳ ಹಿಂದೆ. ಆಗಿನ ಕಾಲಕ್ಕೇ ಈ ಚಿತ್ರ ಸುಮಾರು 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ. ಇದು ಚಿತ್ರದ ಹೆಚ್ಚುಗಾರಿಕೆ. ಈ ಚಿತ್ರವನ್ನು ರೀ-ರಿಲೀಸ್ ಮಾಡಬೇಕು ಎಂಬ ಕೂಗು ಅಭಿಮಾನಿಗಳ ವಲಯದಲ್ಲಿ ಜೋರಾಗಿದೆ. ಒಳ್ಳೆಯ ಸಮಯ ನೋಡಿ ಸಿನಿಮಾ ರೀ-ರಿಲೀಸ್ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ, ಸದ್ಯ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆ ಕಾಣುತ್ತಿವೆ. ಸಿನಿಮಾಗಳು ಇಲ್ಲದ ಸಮಯದಲ್ಲಿ ಇದನ್ನು ರಿಲೀಸ್ ಮಾಡಿದರೆ ಉತ್ತಮ ಎಂಬುದು ಅನೇಕರ ಅಭಿಪ್ರಾಯ.

ಇದನ್ನೂ ಓದಿ: ಕುಟುಂಬ ಸಮೇತ ತಿರುಪತಿಗೆ ಭೇಟಿ ಕೊಟ್ಟ ಶಿವರಾಜ್​ಕುಮಾರ್

ಪ್ರೇಮ್ ಅವರು ‘ಜೋಗಿ’ ಬಳಿಕ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ, ‘ಜೋಗಿ’ ಹಂತಕ್ಕೆ ತೆರಳಲು ಯಾವ ಚಿತ್ರದ ಬಳಿಯೂ ಸಾಧ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:48 am, Wed, 20 August 25