ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವ; ಮದುವೆ ಆಮಂತ್ರಣ ಪತ್ರ ವೈರಲ್

ದರ್ಶನ್ ಮತ್ತು ವಿಜಯಲಕ್ಷ್ಮೀ ಅವರ 22ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಅವರ ಹಳೆಯ ವಿವಾಹ ಆಮಂತ್ರಣ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2003ರಲ್ಲಿ ಧರ್ಮಸ್ಥಳದಲ್ಲಿ ಸರಳ ವಿವಾಹ ನೆರವೇರಿತು. ದರ್ಶನ್ ಅವರ ಚಲನಚಿತ್ರ 'ಡೆವಿಲ್' ಶೂಟಿಂಗ್‌ನಲ್ಲಿದ್ದಾರೆ. ವಿಜಯಲಕ್ಷ್ಮೀ ಅವರು ತಮ್ಮ ಪತಿಯನ್ನು ಎಲ್ಲಾ ಸಂದರ್ಭಗಳಲ್ಲೂ ಬೆಂಬಲಿಸಿದ್ದಾರೆ.

ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವ; ಮದುವೆ ಆಮಂತ್ರಣ ಪತ್ರ ವೈರಲ್
ದರ್ಶನ್

Updated on: May 19, 2025 | 9:00 AM

ನಟ ದರ್ಶನ್ (Darshan) ಹಾಗೂ ವಿಜಯಲಕ್ಷ್ಮೀ ದಂಪತಿಗೆ ಇಂದು (ಮೇ 19) ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಇವರ ದಾಂಪತ್ಯಕ್ಕೆ ಈಗ 22 ವರ್ಷ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಪತಿ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಈ ಸಂದರ್ಭದಲ್ಲಿ ಅವರ ವಿವಾಹ ಆಮಂತ್ರಣಪತ್ರ ವೈರಲ್ ಆಗಿದೆ. ಇದಕ್ಕೆ ದರ್ಶನ್  ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

2003ರ ಮೇ 19ರಂದು ವಿಜಯಲಕ್ಷ್ಮೀ ಅವರನ್ನು ದರ್ಶನ್​ ಧರ್ಮಸ್ಥಳದಲ್ಲಿ ಮದುವೆ ಆದರು. ಈ ಮದುವೆ ಸರಳವಾಗಿ ನಡೆಯಿತು. ಯಾವುದೇ ಆಡಂಬರಕ್ಕೆ ದರ್ಶನ್ ಅವಕಾಶ ನೀಡಲಿಲ್ಲ. ವಿಜಯಲಕ್ಷ್ಮೀ ಕೆಮಿಕಲ್​ ಇಂಜಿನಿಯರ್ ಪದವೀಧರೆ​. ದರ್ಶನ್ ನಟ. ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ದರ್ಶನ್​-ವಿಜಯಲಕ್ಷ್ಮಿ ಪುತ್ರನ ಹೆಸರು ವಿನೀಶ್​.

ಇದನ್ನೂ ಓದಿ
ಪ್ರಚಾರಕ್ಕಾಗಿ ಇನ್ನೂ ಏನೇನು ಮಾಡ್ತಾರೋ?; ರಾಹುಲ್ ವೈದ್ಯ ಹೊಸ ಕಥೆ
ಪ್ರತಿಷ್ಠಿತ ಕಾನ್ಸ್ ಫಿಲ್ಮ್​ ಚಿತ್ರೋತ್ಸವದಲ್ಲಿ ಲಕ್ಷ್ಮೀ ನಿವಾಸ ನಟಿ ದಿಶಾ
ಸಿನಿಮಾ ರಿಲೀಸ್​ಗೂ ಮೊದಲೇ ಸೋಲಿನ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ
ಸಿನಿಮಾ ರಂಗದ ಹರಿಕಾರ ದಾದಾಸಾಹೇಬ್ ಫಾಲ್ಕೆ ಬಯೋಪಿಕ್​ನಲ್ಲಿ ಜೂ.ಎನ್​ಟಿಆರ್?

‘ದರ್ಶನ್ ಅವರ ವಿವಾಹ ಆಮಂತ್ರಣ ಪತ್ರ ವೈರಲ್​ ಆಗಿದೆ. 19-05-2003ರ ಸೋಮವಾರ ಬೆಳಿಗ್ಗೆ 9:10ರಿಂದ 9:50ರವರೆಗಿನ ಮಿಥುನ ಲಗ್ನದಲ್ಲಿ ನಾವು ವಿವಾಹವಾಗುತ್ತಿದ್ದೇವೆ. ಧರ್ಮಸ್ಥಳದ ವಸಂತ್​ ಮಹಲ್​ನಲ್ಲಿ ಮದುವೆ ನಡೆಯಲಿದೆ. ಎಲ್ಲರೂ ಮದುವೆಗೆ ಆಗಮಿಸಬೇಕು ಎಂದು ಆಮಂತ್ರಣ ಕೋರುತ್ತಿದ್ದೇನೆ’ ಎಂಬುದಾಗಿ ಆಮಂತ್ರಣ ಪತ್ರದಲ್ಲಿ ಬರೆಯಲಾಗಿತ್ತು.

ದರ್ಶನ್ ಹಾಗೂ ವಿಜಯಲಕ್ಷ್ಮೀ ದಾಂಪತ್ಯ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ. ಆದರೆ, ವಿಜಯಲಕ್ಷ್ಮೀ ಎಲ್ಲಾ ಹಂತದಲ್ಲೂ ಪತಿಯ ಪರವಾಗಿ ನಿಂತಿದ್ದಾರೆ. ಪತಿಯಿಂದ ಎಷ್ಟೇ ನೋವಾದರೂ ಪತಿಯ ಪರವಾಗಿ ಮಾತನಾಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಬಂಧನಕ್ಕೆ ಒಳಗಾದರು. ಅವರನ್ನು ಹೊರಕ್ಕೆ ತರೋಕೆ ವಿಜಯಲಕ್ಷ್ಮೀ ಅವರು ಸಾಕಷ್ಟು ಪ್ರಯತ್ನ ಮಾಡಿದರು. ಆರು ತಿಂಗಳ ಬಳಿಕ ದರ್ಶನ್​ಗೆ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿತು. ಆ ಬಳಿಕ ದರ್ಶನ್ ಅವರು ವಿಜಯಲಕ್ಷ್ಮೀ ಜೊತೆಯೇ ಇದ್ದಾರೆ.

ಇದನ್ನೂ ಓದಿ: ‘ಎಲ್ಲರೂ ನನ್ನ ಹೆಸರು ಕೂಗೋಕೆ ದರ್ಶನ್ ಕಾರಣ’; ಗುರುವನ್ನು ನೆನೆದ ರಚಿತಾ ರಾಮ್

ಸಿನಿಮಾ ವಿಚಾರಕ್ಕೆ ಬರೋದಾದರೆ ದರ್ಶನ್ ಅವರು ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದ ಬಗ್ಗೆ ನಿರಿಕ್ಷೆ ಇದೆ. ‘ಮಿಲನಾ’ ಪ್ರಕಾಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.