ದರ್ಶನ್​ಗೆ ಮಧ್ಯಂತರ ಜಾಮೀನು; ಪತ್ನಿ ವಿಜಯಲಕ್ಷ್ಮೀ ರಿಯಾಕ್ಷನ್ ಏನು?

ವೈದ್ಯಕೀಯ ವರದಿಯ ಆಧಾರದ ಮೇಲೆ ನಟ ದರ್ಶನ್ ಅವರಿಗೆ ಜಾಮೀನು ಮಂಜೂರಾಗಿದೆ. ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ದರ್ಶನ್​ ಅವರ ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲಿದ್ದಾರೆ. ಆ ಬಳಿಕ ಮತ್ತೆ ಮರಳಿ ಜೈಲು ಸೇರಬೇಕಾಗಿ ಬರಬಹುದು.

ದರ್ಶನ್​ಗೆ ಮಧ್ಯಂತರ ಜಾಮೀನು; ಪತ್ನಿ ವಿಜಯಲಕ್ಷ್ಮೀ ರಿಯಾಕ್ಷನ್ ಏನು?
ದರ್ಶನ್-ವಿಜಯಲಕ್ಷ್ಮೀ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 30, 2024 | 11:45 AM

ವೈದ್ಯಕೀಯ ವರದಿ ಆಧರಿಸಿ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇಷ್ಟು ದಿನಗಳ ಕಾಲ ದರ್ಶನ್​ ಪರವಾಗಿ ನಿಂತಿದ್ದು ಅವರ ಪತ್ನಿ ವಿಜಯಲಕ್ಷ್ಮೀ. ನಿರಂತರವಾಗಿ ಅವರು ದರ್ಶನ್ ಪರ ಹೋರಾಡತ್ತಲೇ ಇದ್ದರು. ಅನೇಕ ದೇವಾಲಯಗಳಿಗೆ ಅವರು ಭೇಟಿ ಕೊಟ್ಟಿದ್ದರು. ಈಗ ದರ್ಶನ್​​ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಇದಕ್ಕೆ ವಿಜಯಲಕ್ಷ್ಮೀ ಅವರು ರಿಯಾಕ್ಟ್ ಮಾಡಿದ್ದಾರೆ.

ದರ್ಶನ್ ಬಂಧನ ಆಗುತ್ತಿರುವ ವಿಚಾರ ಕೇಳುತ್ತಿದ್ದಂತೆ ವಿಜಯಲಕ್ಷ್ಮೀ ಶಾಕ್​ಗೆ ಒಳಗಾದರು. ಆ ಬಳಿಕ ಅವರು ಇನ್​ಸ್ಟಾಗ್ರಾಮ್​​ನ ಡಿ-ಆ್ಯಕ್ಟಿವೇಟ್ ಕೂಡ ಮಾಡಿದ್ದರು. ‘ನನ್ನ ಮಗ ನಾನು ಅಷ್ಟೇ ಸಾಕು’ ಎಂದು ಅವರು ಹೇಳಿದ್ದಾಗಿ ವರದಿ ಆಗಿತ್ತು. ಆ ಬಳಿಕ ಅವರು ಇನ್​ಸ್ಟಾಗ್ರಾಮ್​ಗೆ ಮರಳಿದ್ದರು. ಅಲ್ಲಿಂದಲೇ ದರ್ಶನ್ ಅಭಿಮಾನಿಗಳ ಬಳಿ ಅವರು ಹಲವು ರೀತಿಯ ಮನವಿಗಳನ್ನು ಮಾಡಿಕೊಳ್ಳುತ್ತಾ ಬರುತ್ತಿದ್ದರು.

ದರ್ಶನ್​ಗೆ ಆರು ವಾರಗಳ ಷರತ್ತುಬದ್ಧ ಜಾಮೀನು ಸಿಗುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮೀ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಕಾಮಕ್ಯ ದೇವಸ್ಥಾನದ ಫೋಟೋ ಹಾಕಿ ಕೃತಜ್ಞತೆ ಸಲ್ಲಿಸಿದ್ದಾರೆ. ದೇವಿ  ಆಶೀರ್ವಾದಿಂದ ಬೇಲ್ ಸಿಕ್ಕಿದೆ ಎಂದು ವಿಜಯಲಕ್ಷ್ಮೀ ದೇವರಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಶೂಟಿಂಗ್ ಮಾಡುವಂತಿಲ್ಲ, ಪಾಸ್​​ಪೋರ್ಟ್ ಸರೆಂಡರ್​ ಮಾಡಬೇಕು; ದರ್ಶನ್​ಗೆ ಕೋರ್ಟ್ ಹಾಕಿದ ಷರತ್ತುಗಳಿವು

ದರ್ಶನ್ ಅವರು ಇಂದೇ ಬಿಡುಗಡೆ ಆಗೋ ಸಾಧ್ಯತೆ ಇದೆ. ಹಾಗದಲ್ಲಿ ದರ್ಶನ್ ಅವರನ್ನು ಹೊರಕ್ಕೆ ಬಂದ ಬಳಿಕ ಅವರನ್ನು ಕರೆದುಕೊಂಡು ಬರಲು ವಿಜಯಲಕ್ಷ್ಮಿ ತೆರಳುವ ಸಾಧ್ಯತೆ ಇರುತ್ತದೆ. ದರ್ಶನ್ ಅವರು ಮೊದಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಾದ ಬಳಿಕ ಅವರು ವೈದ್ಯಕೀಯ ಚಿಕಿತ್ಸೆ ಪಡೆಯೋ ಸಾಧ್ಯತೆ ಇದೆ.

ಇದನ್ನೂ ಓದಿ: ಇಂದೇ ಜೈಲಿನಿಂದ ಬಿಡುಗಡೆ ಆಗುತ್ತಾರೆಯೇ ದರ್ಶನ್, ಹೇಗೆ ನಡೆಯಲಿದೆ ಪ್ರಕ್ರಿಯೆ?

ಕಳೆದ ಕೆಲವು ವಾರಗಳಿಂದ ದರ್ಶನ್ ಅವರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು. ಅವರು ಸಂಪೂರ್ಣ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದರು. ಈಗ ವೈದ್ಯಕೀಯ ಗ್ರೌಂಡ್ಸ್​ನಲ್ಲಿಯೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸದ್ಯ ಪಾಸ್​ಪೋರ್ಟ್​ನ ಕೋರ್ಟ್​ಗೆ ಸಲ್ಲಿಕೆ ಮಾಡುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.