‘ಬೇರೆ ನಟರನ್ನು ನಿಂದಿಸಬೇಡಿ’; ದರ್ಶನ್ ಅಭಿಮಾನಿಗಳಿಗೆ ಬಂತು ವಿಶೇಷ ಮನವಿ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್ ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನನ್ನು ನೀಡಿದೆ. ಅವರ ಅಭಿಮಾನಿ ಸಂಘಟನೆಗಳು ಒಂದು ಕೋರಿಕೆ ಇಟ್ಟಿದ್ದಾರೆ.
ನಟ ದರ್ಶನ್ ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈಗ ಸಿಕ್ಕಿರುವುದು ಆರು ವಾರಗಳ ಮಧ್ಯಂತರ ಜಾಮೀನು. ಇದಕ್ಕೆ ಸಾಕಷ್ಟು ಷರತ್ತುಗಳನ್ನು ಕೂಡ ಹಾಕಲಾಗಿದೆ. ಈ ಮಧ್ಯೆ ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್ ಕಡೆಯಿಂದ ಮನವಿ ಒಂದು ಬಂದಿದೆ.
ದರ್ಶನ್ ಬಂಧನಕ್ಕೆ ಒಳಗಾದಾಗಿನಿಂದಲೂ ಅವರ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಅಗ್ರೆಸ್ಸಿವ್ ಆಗಿ ಪೋಸ್ಟ್ ಮಾಡುತ್ತಾ ಬರುತ್ತಿದ್ದಾರೆ. ಬೇರೆ ಕಲಾವಿದರನ್ನು, ಮಾಧ್ಯಮದವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕೆಲಸ ಮುಂದುವರಿದಿದೆ. ಇದಕ್ಕೆ ತಡೆ ಬಿದ್ದಿಲ್ಲ. ಈಗ ದರ್ಶನ್ಗೆ ಜಾಮೀನು ಸಿಕ್ಕಿದೆ. ಅವರು ಈ ಖುಷಿಯಲ್ಲಿ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುವ ಭಯ ಇದೆ. ಹೀಗಾಗಿ, ಫ್ಯಾನ್ಸ್ ಕಡೆಯಿಂದಲೇ ಇತರ ಅಭಿಮಾನಿಗಳಿಗೆ ಮನವಿ ಮಾಡಲಾಗಿದೆ.
ದರ್ಶನ್ ಅವರ ಅಧಿಕೃತ ಫ್ಯಾನ್ಪೇಜ್ ಆದ ‘ಡಿ ಕಂಪನಿ’ ಈ ಬಗ್ಗೆ ಪೋಸ್ಟ್ ಮಾಡಿದೆ. ‘ಎಲ್ಲಾ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಈ ಮೂಲಕ ತಿಳಿಸುವುದು ಏನೆಂದರೆ, ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರವರಿಗೆ ಜಾಮೀನು ಸಿಕ್ಕಿದೆ. ಈ ಸಂತೋಷದ ಸಂಭ್ರಮದಲ್ಲಿ ಅಭಿಮಾನಿಗಳು ಯಾವುದೇ ಕಾರಣಕ್ಕೂ ಮಾಧ್ಯಮದವರು, ರಾಜಕಾರಣಿಗಳು, ಬೇರೆ ನಟರು ಹಾಗೂ ಕಾನೂನಿನ ಬಗ್ಗೆ ನಿಂದನೆ ಬೇಡ’ ಎಂದು ಕೋರಲಾಗಿದೆ.
View this post on Instagram
ಇದನ್ನೂ ಓದಿ: ಶೂಟಿಂಗ್ ಮಾಡುವಂತಿಲ್ಲ, ಪಾಸ್ಪೋರ್ಟ್ ಸರೆಂಡರ್ ಮಾಡಬೇಕು; ದರ್ಶನ್ಗೆ ಕೋರ್ಟ್ ಹಾಕಿದ ಷರತ್ತುಗಳಿವು
ಸದ್ಯ ದರ್ಶನ್ಗೆ ಸಿಕ್ಕಿರುವುದು ಮಧ್ಯಂತರ ಜಾಮೀನು ಅಷ್ಟೇ. ಅನಾರೋಗ್ಯದ ಕಾರಣಕ್ಕೆ ಈ ಜಾಮೀನು ಕೊಡಲಾಗಿದೆ. ಅವರಿಗೆ ಕೋರ್ಟ್ ಕಡೆಯಿಂದ ಆರು ವಾರಗಳ ಸಮಾಯವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ಅವರು ಚಿಕಿತ್ಸೆ ಪಡೆದು ಬರಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.