Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸ್ ಆಫೀಸ್​​ನಲ್ಲಿ ಮೂರು ಸಿನಿಮಾಗಳ ಮಧ್ಯೆ ದೊಡ್ಡ ಕ್ಲ್ಯಾಶ್

ಈ ವಾರ ದೀಪಾವಳಿ ಹಬ್ಬದ ಪ್ರಯುಕ್ತ, ಕನ್ನಡದ ‘ಬಘೀರ’, ಹಿಂದಿಯ ‘ಸಿಂಗಂ ಅಗೇನ್’ ಮತ್ತು ‘ಭೂಲ್ ಭುಲಯ್ಯಾ 3’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಮೂರು ಚಿತ್ರಗಳ ನಡುವೆ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ. ಸಿನಿಮಾಗಳ ವಿಶೇಷತೆ ಬಗ್ಗೆ ಇಲ್ಲಿದೆ ವಿವರ.

ಬಾಕ್ಸ್ ಆಫೀಸ್​​ನಲ್ಲಿ ಮೂರು ಸಿನಿಮಾಗಳ ಮಧ್ಯೆ ದೊಡ್ಡ ಕ್ಲ್ಯಾಶ್
ಈ ವಾರ ರಿಲೀಸ್ ಪೋಸ್ಟರ್
Follow us
ರಾಜೇಶ್ ದುಗ್ಗುಮನೆ
|

Updated on: Oct 30, 2024 | 2:56 PM

ದೀಪಾವಳಿ ಪ್ರಯುಕ್ತ ಈ ವಾರ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಪೈಕಿ ಮೂರು ಸಿನಿಮಾಗಳ ಮಧ್ಯೆ ದೊಡ್ಡ ಮಟ್ಟದಲ್ಲಿ ಕ್ಲ್ಯಾಶ್ ಏರ್ಪಡುತ್ತಿದೆ. ಕನ್ನಡದ ‘ಬಘೀರ’, ಹಿಂದಿಯ ‘ಭೂಲ್ ಭುಲಯ್ಯ 3’ ಹಾಗೂ ‘ಸಿಂಗಂ ಅಗೇನ್’ ಚಿತ್ರಗಳು ರಿಲೀಸ್ ಆಗುತ್ತಿವೆ. ಈ ಚಿತ್ರಗಳ ಬಗ್ಗೆ, ಈ ಸಿನಿಮಾಗಳ ವಿಶೇಷತೆ ಬಗ್ಗೆ ಇಲ್ಲಿದೆ ವಿವರ.

‘ಬಘೀರ’

‘ಬಘೀರ’ ಸಿನಿಮಾ ಈ ವಾರ (ಅಕ್ಟೋಬರ್ 31) ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಶ್ರೀಮುರಳಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಒಳ್ಳೆಯ ವಿಮರ್ಶೆ ಸಿಕ್ಕರೆ ಚಿತ್ರಕ್ಕೆ ಬಾಕ್ಸ್ ಆಫೀಸ್​​ನಲ್ಲಿ ಜಾಕ್​ಪಾಟ್ ಪಕ್ಕಾ. ಏಕೆಂದರೆ ಈಗ ದೀಪಾವಳಿ ಸಮಯ. ಹೀಗಾಗಿ ಸಾಲು ಸಾಲು ರಜೆಗಳು ಸಿಗುತ್ತಿವೆ. ಒಂದೊಮ್ಮೆ ಸಿನಿಮಾ ಮೆಚ್ಚುಗೆ ಪಡೆದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಾರೆ.

ಈ ಚಿತ್ರದಲ್ಲಿ ಶ್ರೀಮುರಳಿ, ಪ್ರಕಾಶ್ ರೈ, ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ರಾಮಚಂದ್ರ ರಾಜು, ರಂಗಾಯಣ ರಘು ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದರೆ, ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ.

ಬಾಲಿವುಡ್​ನಲ್ಲಿ ಕ್ಲ್ಯಾಶ್

ಬಾಲಿವುಡ್​ನಲ್ಲಿ ಈ ಬಾರಿ ದೊಡ್ಡ ಕ್ಲ್ಯಾಶ್ ಏರ್ಪಡುತ್ತಿದೆ. ‘ಸಿಂಗಂ ಅಗೇನ್’ ಹಾಗೂ ‘ಭೂಲ್​ ಭುಲಯ್ಯ 3’ ಸಿನಿಮಾಗಳು ತೆರೆಗೆ ಬರುತ್ತಿವೆ. ‘ಸಿಂಗಂ ಅಗೇನ್’ ಚಿತ್ರದಲ್ಲಿ ದೊಡ್ಡ ಪಾತ್ರವರ್ಗವೇ ಇದೆ. ಅಜಯ್ ದೇವಗನ್, ಕರೀನಾ ಕಪೂರ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಅಜಯ್ ದೇವಗನ್, ಜ್ಯೋತಿ ದೇಶಪಾಂಡೆ, ಜಿಯೋ ಸ್ಟುಡಿಯೋ, ರೋಹಿತ್ ಶೆಟ್ಟಿ, ರಿಲಾಯನ್ಸ್​ ಎಂಟರ್​ಟೇನ್​ಮೆಂಟ್, ಸಿನೆರ್ಜಿ ಬಂಡವಾಳ ಹೂಡಿದೆ. ಈ ಚಿತ್ರ ನವೆಂಬರ್ 1ರಂದು ತೆರೆಗೆ ಬರುತ್ತಿದೆ.

‘ಭೂಲ್​ ಭುಲಯ್ಯ 3’ ಚಿತ್ರ ಕೂಡ ನವೆಂಬರ್ 1ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ತೃಪ್ತಿ ದಿಮ್ರಿ, ಮಾಧುರಿ ದೀಕ್ಷಿತ್, ವಿಜಯ್ ರಾಜ್, ರಾಜ್​ಪಾಲ್ ಯಾದವ್ ಮೊದಲಾದವರು ನಟಿಸುತ್ತಿದ್ದಾರೆ. ಅನೀಸ್​ ಬಾಜ್ಮಿ ನಿರ್ದೇಶನದ ಈ ಚಿತ್ರಕ್ಕೆ ಭೂಷಣ್ ಕುಮಾರ್, ಕೃಷ್ಣ ಕುಮಾರ್, ಮುರದ್ ಖೇತಾನಿ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: ಬಘೀರನೇ ರಕ್ಷಕ-ರಾಕ್ಷಸ; ಗಮನ ಸೆಳೆದ ಶ್ರೀಮುರಳಿ ಸಿನಿಮಾದ ಟ್ರೇಲರ್

ಉಳಿದಂತೆ ತಮಿಳಿನಲ್ಲಿ ಶಿವಕಾರ್ತಿಕೇಯ ನಟನೆಯ ‘ಅಮರನ್’ (ಅಕ್ಟೋಬರ್ 31), ಮಲಯಾಳಂನಲ್ಲಿ ದುಲ್ಖರ್ ಸಲ್ಮಾನ್ ನಟನೆಯ ‘ಲಕ್ಕಿ ಭಾಸ್ಕರ್’ (ಅಕ್ಟೋಬರ್ 31), ತೆಲುಗಿನಲ್ಲಿ ‘ಕಾ’ (ಅಕ್ಟೋಬರ್ 31) ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.