ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಸೆಲೆಬ್ರಿಟಿಗಳಲ್ಲಿ ನಟ ಜಗ್ಗೇಶ್ (Jaggesh) ಕೂಡ ಪ್ರಮುಖರು. ಸಿನಿಮಾ ಮಾತ್ರವಲ್ಲದೆ ಹಲವು ವಿಚಾರಗಳನ್ನು ಹಂಚಿಕೊಳ್ಳುವ ಅವರು ಸದಾ ಕಾಲ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಕೊರೊನಾ ಎರಡನೇ ಹಾವಳಿ ಬಳಿಕ ಒಂದಷ್ಟು ದಿನಗಳ ಕಾಲ ಟ್ವಿಟರ್ನಿಂದ (Jaggesh Twitter) ದೂರ ಉಳಿದುಕೊಂಡಿದ್ದ ಜಗ್ಗೇಶ್ ಈಗ ಮತ್ತೆ ಸಕ್ರಿಯರಾಗಿದ್ದಾರೆ. ವಿಶೇಷವೆಂದರೆ ಈ ಬಾರಿ ಅವರು ತಮ್ಮ ಎಸ್ಎಸ್ಎಲ್ಸಿ (SSLC) ಅಂಕಪಟ್ಟಿಯನ್ನು ಹಂಚಿಕೊಂಡಿದ್ದಾರೆ.
ವಿದ್ಯಾಭ್ಯಾಸ ಏನೇ ಇರಲಿ, ಚಿತ್ರರಂಗದಲ್ಲಿ ಉತ್ತುಂಗಕ್ಕೆ ಬೆಳೆದವರು ಜಗ್ಗೇಶ್. ಅವರು ಶಾಲೆಯಲ್ಲಿ ಅಷ್ಟೇನೂ ಚುರುಕಿನ ವಿದ್ಯಾರ್ಥಿ ಆಗಿರಲಿಲ್ಲ. ಬಡತನದ ಕುಟುಂಬದಲ್ಲಿ ಬೆಳೆದ ಅವರು 10ನೇ ತರಗತಿ ಪರೀಕ್ಷೆಯಲ್ಲಿ 600ಕ್ಕೆ 342 ಅಂಕ ಪಡೆದುಕೊಂಡಿದ್ದರು. ಕನ್ನಡದಲ್ಲಿ 150ಕ್ಕೆ ಅವರು 101 ಅಂಕ ಪಡೆದಿದ್ದರು. ಇಂಗ್ಲಿಷ್ನಲ್ಲಿ 100ಕ್ಕೆ 54, ಹಿಂದಿಯಲ್ಲಿ 50ಕ್ಕೆ 20, ಗಣಿತದಲ್ಲಿ 100ಕ್ಕೆ 57, ವಿಜ್ಞಾನದಲ್ಲಿ 100ಕ್ಕೆ 52 ಹಾಗೂ ಸಮಾಜ ವಿಜ್ಞಾನದಲ್ಲಿ 100ಕ್ಕೆ 58 ಮಾರ್ಕ್ಸ್ ಪಡೆದು ಜಗ್ಗೇಶ್ ಪಾಸ್ ಆಗಿದ್ದರು.
ಆ ದಿನಗಳನ್ನು ಟ್ವಿಟರ್ ಮೂಲಕ ಜಗ್ಗೇಶ್ ನೆನಪಿಸಿಕೊಂಡಿದ್ದಾರೆ. ಕಡಿಮೆ ಅಂಕ ಪಡೆದ ಅವರಿಗೆ ಅಂದು ಅವಮಾನ ಆಗಿತ್ತು. ಅದರಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನೂ ಮಾಡಿದ್ದರು. ಈ ಬಗ್ಗೆ ತಮ್ಮದೇ ಧಾಟಿಯಲ್ಲಿ ಅವರು ಟ್ವೀಟ್ ಮಾಡಿದ್ದಾರೆ. ‘ಇಂದಿನ ಜಗ್ಗೇಶ ಶಾಲೆಯ ಈಶ್ವರ. ಭಾಷಾಭಿಮಾನ ಬಾಲ್ಯದಿಂದ ಬಂದಾಗ ಮಾತ್ರ ಅವನು ಸಾಯುವವರೆಗೆ ಕನ್ನಡ ಹೃದಯಬಡಿತದ ಜೊತೆಯಲ್ಲೇ ಉಳಿಯುತ್ತದೆ’ ಎಂದು ಅವರು ಬರಹ ಆರಂಭಿಸಿದ್ದಾರೆ.
‘ಈ ಅಂಕಕ್ಕೆ ಅಪ್ಪ ನಡುರೋಡಲ್ಲಿ ಬೂಟಿನಲ್ಲಿ ಹೊಡೆದಿದ್ದರು. ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದೆ. ಒಂದುವೇಳೆ ಹೋಗಿದ್ದರೆ ಇಂದು ಜಗ್ಗೇಶ ಸತ್ತವರಲ್ಲಿ ಒಬ್ಬ. ಮಕ್ಕಳನ್ನು ತಂದೆ ತಾಯಿ ಹುರಿದುಂಬಿಸಿ. ಸಾಧಕ ಹುಟ್ಟುತ್ತಾನೆ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಇಂದಿನ ಜಗ್ಗೇಶ ಶಾಲೆಯ ಈಶ್ವರ.
ಭಾಷಾಭಿಮಾನ ಬಾಲ್ಯದಿಂದ ಬಂದಾಗಮಾತ್ರ ಅವನು ಸಾಯುವವರೆಗೆ ಕನ್ನಡ ಹೃದಯಬಡಿತದ ಜೊತೆಯಲ್ಲೆ ಉಳಿಯುತ್ತದೆ!
ಈಅಂಕೆಗೆ ಅಪ್ಪ ನಡುರೋಡಲ್ಲಿ ಬೂಟಿನಲ್ಲಿ ಹೊಡೆದಿದ್ದರು!ಮನನೊಂದು ಆತ್ಮಹತ್ಯಗೆ ಯತ್ನಿಸಿದ್ದೆ!ಒಂದುವೇಳೆ ಹೋಗಿದ್ದರೆ ಇಂದು ಜಗ್ಗೇಶ ಸತ್ತವರಲ್ಲಿ ಒಬ್ಬ!
ಮಕ್ಕಳ ತಂದೆತಾಯಿ ಹುರಿದುಂಬಿಸಿ!ಸಾಧಕಹುಟ್ಟುತ್ತಾನೆ! pic.twitter.com/h6zAsXcpRX— ನವರಸನಾಯಕ ಜಗ್ಗೇಶ್ (@Jaggesh2) July 23, 2021
ಸದ್ಯ ಈ ಮಾರ್ಕ್ಸ್ ಕಾರ್ಡ್ ಫೋಟೋ ವೈರಲ್ ಆಗುತ್ತಿದೆ.
ಇದನ್ನೂ ಓದಿ:
ದರ್ಶನ್ ವಿವಾದ: ಫ್ಯಾನ್ಸ್ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್
‘ನಾನು ಚಪ್ಪಲ್ಲಿಯಲ್ಲಿ ಹೊಡೆದೆ ಅಂತ ಜಗ್ಗೇಶ್ ರಾಯರ ಮೇಲೆ ಆಣೆ ಮಾಡಿ ಹೇಳಲಿ’; ವಿಜಯಲಕ್ಷ್ಮಿ ಸವಾಲು
Published On - 4:24 pm, Fri, 23 July 21