AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diwali 2022: ಅಮೂಲ್ಯ ಅವಳಿ ಮಕ್ಕಳಿಗೆ ಮೊದಲ ವರ್ಷದ ದೀಪಾವಳಿ ಸಂಭ್ರಮ; ಖುಷಿ ಹಂಚಿಕೊಂಡ ನಟಿ

Amulya Kids: ಅವಳಿ ಪುತ್ರರ ಜೊತೆ ಅಮೂಲ್ಯ ಪೋಸ್​ ನೀಡಿದ್ದಾರೆ. ಅವರು ಹಂಚಿಕೊಂಡಿರುವ ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

Diwali 2022: ಅಮೂಲ್ಯ ಅವಳಿ ಮಕ್ಕಳಿಗೆ ಮೊದಲ ವರ್ಷದ ದೀಪಾವಳಿ ಸಂಭ್ರಮ; ಖುಷಿ ಹಂಚಿಕೊಂಡ ನಟಿ
ಮಕ್ಕಳ ಜೊತೆ ಅಮೂಲ್ಯ
TV9 Web
| Edited By: |

Updated on: Oct 25, 2022 | 2:39 PM

Share

ನಟಿ ಅಮೂಲ್ಯ (Amulya) ಅವರು ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್​ ಆಗಿರುವ ಅವರು ಮಕ್ಕಳ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಈಗ ಅವರು ತಮ್ಮ ಮನೆಯ ದೀಪಾವಳಿ ಸಂಭ್ರಮದ (Deepavali 2022) ಬಗ್ಗೆ ಅಪ್​ಡೇಟ್​ ನೀಡಿದ್ದಾರೆ. ಅವರ ಪಾಲಿಗೆ ಈ ವರ್ಷದ ಬೆಳಕಿನ ಹಬ್ಬ ಸಖತ್​ ಸ್ಪೆಷಲ್​. ಯಾಕೆಂದರೆ, ಅವರ ಇಬ್ಬರು ಗಂಡು ಮಕ್ಕಳಿಗೆ ಮೊದಲನೇ ವರ್ಷದ ದೀಪಾವಳಿ. ಆ ಸಂಭ್ರಮಕ್ಕಾಗಿ ಅವರು ವಿಶೇಷವಾಗಿ ಫೋಟೋಶೂಟ್​ ಮಾಡಿಸಿದ್ದಾರೆ. ಆ ಫೋಟೋಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಮೂಲ್ಯ-ಜಗದೀಶ್​ ದಂಪತಿಯ ಮುದ್ದಾದ ಮಕ್ಕಳ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ದೀಪಾವಳಿ ಹಬ್ಬದಲ್ಲಿ ಹತ್ತು ಹಲವು ವಿಶೇಷಗಳಿರುತ್ತವೆ. ಹಾಗಾಗಿ ಹಿಂದೂಗಳ ಪಾಲಿಗೆ ಈ ಹಬ್ಬ ಎಂದರೆ ಸಡಗರ ಜೋರಾಗಿಯೇ ಇರುತ್ತದೆ. ತಮ್ಮ ಮಕ್ಕಳು ಮೊದಲ ವರ್ಷದ ದೀಪಾವಳಿ ಹಬ್ಬಕ್ಕೆ ಸಾಕ್ಷಿ ಆಗುತ್ತಿರುವ ಕ್ಷಣವನ್ನು ಅಮೂಲ್ಯ ಅವರು ಫೋಟೋಗಳಲ್ಲಿ ಸೆರೆಯಾಗಿಸಿದ್ದಾರೆ. ಕ್ಯೂಟ್​ ಆದಂತಹ ಅವಳಿ ಪುತ್ರರ ಜೊತೆ ಅವರು ಫೋಟೋಗೆ ಪೋಸ್​ ನೀಡಿದ್ದಾರೆ.

ಇದನ್ನೂ ಓದಿ
Image
Deepavali 2022: ಯಶ್​-ರಾಧಿಕಾ ಪಂಡಿತ್​ ಮನೆಯಲ್ಲಿ ದೀಪಾವಳಿ ಸಡಗರ; ಇಲ್ಲಿದೆ ಸುಂದರ ಫೋಟೋ ಗ್ಯಾಲರಿ
Image
Deepavali 2022: ಅಮೆರಿಕದಲ್ಲೂ ದೀಪಾವಳಿಯ ಸಂಭ್ರಮ: ಶ್ವೇತಭವನದಲ್ಲಿ ದೀಪ ಬೆಳಗಿದ ಅಧ್ಯಕ್ಷ ಜೋ ಬೈಡನ್
Image
ಕ್ಯೂಟ್ ಫೋಟೋ ಹಂಚಿಕೊಂಡು ದೀಪಾವಳಿ ವಿಶ್ ಮಾಡಿದ ನಟಿ ರಮ್ಯಾ
Image
Deepavali 2022: ದೇವರ ಕೋಣೆಯಲ್ಲಿ ಭಕ್ತಿಯಿಂದ ಕುಳಿತ ನಾಯಿ; ಸುಧಾರಾಣಿ ಮನೆಯಲ್ಲಿ ದೀಪಾವಳಿ ಪೂಜೆ ಶುರು

ಅಮೂಲ್ಯ ಹಂಚಿಕೊಂಡಿರುವ ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಫೋಟೋ ಮೂಲಕ ಅಭಿಮಾನಿಗಳಿಗೆ ಅಮೂಲ್ಯ ಅವರು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಸದ್ಯ ಮಕ್ಕಳ ಆರೈಕೆಯ ಕಡೆಗೆ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆ ಕಾರಣದಿಂದ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ.

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ ಅವರು ಬಣ್ಣದ ಲೋಕದಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿದ್ದಾರೆ. ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಅವರು ಹೀರೋಯಿನ್​ ಆಗಿ ಬಡ್ತಿ ಪಡೆದರು. ಆ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. ಬಳಿಕ ಯಶ್​, ‘ನೆನಪಿರಲಿ’​ ಪ್ರೇಮ್​, ಕೃಷ್ಣ ಅಜಯ್​ ರಾವ್​, ದುನಿಯಾ ವಿಜಯ್​ ಮುಂತಾದ ಸ್ಟಾರ್​ ಹೀರೋಗಳ ಜೊತೆ ನಟಿಸಿ ಅವರು ಸೈ ಎನಿಸಿಕೊಂಡರು. ಪ್ರಕಾಶ್​ ರೈ ಜತೆ ನಟಿಸಿದ ‘ನಾನು ನನ್ನ ಕನಸು’ ಸಿನಿಮಾ ಕೂಡ ಗಮನ ಸೆಳೆಯಿತು.

View this post on Instagram

A post shared by Amulya (@nimmaamulya)

2017ರ ಬಳಿಕ ಅಮೂಲ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ಪೂರ್ಣ ಪ್ರಮಾಣದಲ್ಲಿ ಹೀರೋಯಿನ್​ ಆಗಿ ನಟಿಸಿದ ಕೊನೇ ಸಿನಿಮಾ ‘ಮಾಸ್ತಿಗುಡಿ’. 2017ರಲ್ಲಿ ತೆರೆಕಂಡ ‘ಮುಗುಳು ನಗೆ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆನಂತರ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿಲ್ಲ. ಅವರು ಆದಷ್ಟು ಬೇಗ ಅವರು ಕಮ್​ಬ್ಯಾಕ್​ ಮಾಡಲಿ ಎಂಬುದು ಅಭಿಮಾನಿಗಳ ಆಸೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.