‘ಕಾಂಗರೂ’ ಸಿನಿಮಾದ ಚಿತ್ರೀಕರಣ ಪೂರ್ಣ, ಇದೇ ಹೆಸರಿಡಲು ಕಾರಣವೇನು?

Kangaroo Movie: ಕನ್ನಡದಲ್ಲಿ ಹೊಸದೊಂದು ಥ್ರಿಲ್ಲರ್ ಸಿನಿಮಾ ಬರುತ್ತಿದೆ ಸಿನಿಮಾದ ಹೆಸರು ‘ಕಾಂಗರೂ’. ಅಂದಹಾಗೆ ಸಿನಿಮಾಕ್ಕೆ ಆ ಹೆಸರು ಇಟ್ಟಿದ್ದೇಕೆ?

‘ಕಾಂಗರೂ’ ಸಿನಿಮಾದ ಚಿತ್ರೀಕರಣ ಪೂರ್ಣ, ಇದೇ ಹೆಸರಿಡಲು ಕಾರಣವೇನು?
ಕಾಂಗರೂ
Follow us
|

Updated on: Dec 03, 2023 | 9:48 PM

ನಟಿ ರಂಜನಿ ರಾಘವನ್ (Ranjani Raghav) ನಾಯಕಿಯಾಗಿ ಹಾಗೂ ‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ (Adithya) ನಾಯಕರಾಗಿ ನಟಿಸಿರುವ ಥ್ರಿಲ್ಲರ್ ಕತೆ ಹೊಂದಿರುವ ‘ಕಾಂಗರೂ’ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಕನ್ನಡದಲ್ಲಿ ಉತ್ತಮವಾದ ಥ್ರಿಲ್ಲರ್ ಜಾನರ್​ನ ಸಿನಿಮಾಗಳು ಬರುತ್ತಿವೆ. ಅಂಥಹಾ ಒಳ್ಳೆಯ ಕನ್ನಡ ಥ್ರಿಲ್ಲರ್ ಸಿನಿಮಾಗಳ ಪಟ್ಟಿಗೆ ‘ಕಾಂಗರೂ’ ಸಹ ಸೇರುವ ಭರವಸೆ ಮೂಡಿಸಿದೆ. ಈ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಆದಿತ್ಯ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಂಜನಿ ರಾಘವನ್ ಮನೋವೈದ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟರಾದ ಶಿವಮಣಿ, ಕರಿಸುಬ್ಬು, ನಾಗೇಂದ್ರ ಅರಸ್ ಮುಂತಾದವರು ಪ್ರಮುಖ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಬೆಂಗಳೂರು, ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ಮಾಡಿದ್ದಾರೆ. ಸಿನಿಮಾದ ಡಬ್ಬಿಂಗ್ ಕಾರ್ಯ ಸದ್ಯಕ್ಕೆ ಚಾಲ್ತಿಯಲ್ಲಿದೆ.

ಇದನ್ನೂ ಓದಿ: ಆದಿತ್ಯ ರಾಯ್ ಕಪೂರ್-ಅನನ್ಯಾ ಪಾಂಡೆ ಮದುವೆ ಆದ್ರೆ ಇವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ ಆಗುತ್ತೆ?

ಇತ್ತೀಚೆಗೆ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಬಂದಿವೆ. ಆದರೆ ನಮ್ಮ ಸಿನಿಮಾ ಸ್ವಲ್ಪ ಭಿನ್ನ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ ಗಾಗಿ ಮಾಡಿರುವ ಸಿನಿಮಾ ಇದು. ಸಿನಿಮಾಕ್ಕೆ “ಕಾಂಗರೂ” ಎಂದು ಹೆಸರಿಟ್ಟಿರುವುದಕ್ಕೆ ಕಾರಣವಿದೆ. “ಕಾಂಗರೂ” ಒಂದು ಮುಗ್ಧ ಪ್ರಾಣಿ, ಅದು ಯಾರಿಗೂ ಏನು ಮಾಡುವುದಿಲ್ಲ, ಮತ್ತು ಈ ಕಾಂಗರೂ ತನ್ನ ಮರಿಗೆ ಜನ್ಮ ನೀಡಿದ ನಂತರ ಅದರ ಹೊಟ್ಟೆಯ ಮೇಲ್ಬಾಗದಲ್ಲಿ ಇರುವ ಚೀಲದಲ್ಲಿ ಆ ಮರಿಯನ್ನು ಇಟ್ಟು ಕಾಪಾಡುತ್ತದೆ, ಅಂತ ಸಮಯದಲ್ಲಿ ತನ್ನ ಮರಿಯ ತಂಟೆಗೆ ಯಾರಾದರೂ ಹೋದರೆ ಅದು ಯಾರನ್ನು ಬಿಡುವುದಿಲ್ಲ. ಈ ಪ್ರಾಣಿಯ ನಡವಳಿಕೆಯನ್ನು ಹೋಲುವ ಕಥೆಯನ್ನು ಈ ಸಿನಿಮಾ ಒಳಗೊಂಡಿರಲಿದೆ ಎಂದು ನಿರ್ದೇಶಕರು ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ರಾಮಚಂದ್ರಯ್ಯ ಈ ಚಿತ್ರವನ್ನು ನಿರ್ಮಾಣ‌ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕ ಕಿಶೋರ್ ಮೇಗಳಮನೆ ಅವರೆ ಬರದಿದ್ದಾರೆ, ಉದಯ್ ಲೀಲ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂದು ಹೇಳಿದ್ದು ನಾನು: ದೇವೇಗೌಡ
ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂದು ಹೇಳಿದ್ದು ನಾನು: ದೇವೇಗೌಡ
ಸಿಎಂ ಲೋಕಾಯುಕ್ತ ಅಧಿಕಾರಿಗಳ ಮುಂದೆ ಕೈಕಟ್ಟಿ ಕೂರೋದು ನಾಚಿಕೆಗೇಡು: ಅಶೋಕ
ಸಿಎಂ ಲೋಕಾಯುಕ್ತ ಅಧಿಕಾರಿಗಳ ಮುಂದೆ ಕೈಕಟ್ಟಿ ಕೂರೋದು ನಾಚಿಕೆಗೇಡು: ಅಶೋಕ
ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಎಂದ ಹೆಬ್ಬಾಳ್ಕರ್
ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಎಂದ ಹೆಬ್ಬಾಳ್ಕರ್
CM ರಾಜೀನಾಮೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ BJP ನಾಯಕರು ಪೊಲೀಸ್​ ವಶಕ್ಕೆ
CM ರಾಜೀನಾಮೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ BJP ನಾಯಕರು ಪೊಲೀಸ್​ ವಶಕ್ಕೆ
ಮುಖ್ಯಮಂತ್ರಿ ಪತ್ನಿಯ ವಿಚಾರಣೆ ಈಗಾಗಲೇ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು
ಮುಖ್ಯಮಂತ್ರಿ ಪತ್ನಿಯ ವಿಚಾರಣೆ ಈಗಾಗಲೇ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು
ಧರಣಿ ವೇದಿಕೆಯಲ್ಲೇ ರಾತ್ರಿ ಊಟ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಧರಣಿ ವೇದಿಕೆಯಲ್ಲೇ ರಾತ್ರಿ ಊಟ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಹಳಿ ಮೇಲೆ ಬಿದ್ದ ಯುವತಿ
ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಹಳಿ ಮೇಲೆ ಬಿದ್ದ ಯುವತಿ
ಬಿಗ್ ಬಾಸ್ ಪೇಮೆಂಟ್ ಬಗ್ಗೆ ಓಪನ್ ಆಗಿ ಮಾತನಾಡಿದ ಮಾನಸಾ
ಬಿಗ್ ಬಾಸ್ ಪೇಮೆಂಟ್ ಬಗ್ಗೆ ಓಪನ್ ಆಗಿ ಮಾತನಾಡಿದ ಮಾನಸಾ
ಬಿಗ್ ಬಾಸ್ ಮನೆಯಲ್ಲಿ ಸೇವೆ ಭಾಗ್ಯ; ಕಂಡ ಕಂಡಿದ್ದನ್ನೆಲ್ಲ ಮಾಡಿಸಿಕೊಂಡ್ರು
ಬಿಗ್ ಬಾಸ್ ಮನೆಯಲ್ಲಿ ಸೇವೆ ಭಾಗ್ಯ; ಕಂಡ ಕಂಡಿದ್ದನ್ನೆಲ್ಲ ಮಾಡಿಸಿಕೊಂಡ್ರು
ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಟಿಯಿಂದ ಹೇಗೆ ಕಾಪಾಡುತ್ತೆ?
ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಟಿಯಿಂದ ಹೇಗೆ ಕಾಪಾಡುತ್ತೆ?