AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಾದಲ್ಲಿ ಕನ್ನಡ ಸಿನಿಮಾ ನಟ-ನಟಿಯರಿಗೆ ಅವಮಾನ

Suresh Kondeti: ಗೋವಾದಲ್ಲಿ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆಂದು ತೆರಳಿದ್ದ ಕನ್ನಡದ ನಟ-ನಟಿಯರಿಗೆ ಅಪಮಾನ ಮಾಡಿದ್ದಾರೆ ಎನ್ನಲಾಗಿದೆ.

ಗೋವಾದಲ್ಲಿ ಕನ್ನಡ ಸಿನಿಮಾ ನಟ-ನಟಿಯರಿಗೆ ಅವಮಾನ
ಸ್ಯಾಂಡಲ್​ವುಡ್
ಮಂಜುನಾಥ ಸಿ.
|

Updated on: Dec 03, 2023 | 6:47 PM

Share

ಪ್ರಶಸ್ತಿ ಕಾರ್ಯಕ್ರಮಕ್ಕೆಂದು ಕನ್ನಡದ ಕೆಲವು ಸಿನಿಮಾ ನಟ-ನಟಿಯರನ್ನು ಗೋವಾಕ್ಕೆ (Goa) ಆಹ್ವಾನಿಸಿ ಅವಮಾನ ಮಾಡಿರುವ ಘಟನೆ ನಡೆದಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ಮಾಧ್ಯಮ ಸಲಹೆಗಾರ ಎಂದು ಹೇಳಲಾಗುತ್ತಿರುವ ತೆಲುಗು ಚಿತ್ರರಂಗದ ‘ಕುಖ್ಯಾತ’ ಸಿನಿಮಾ ಪತ್ರಕರ್ತ ಸುರೇಶ್ ಕೊಂಡೇಟಿ ಸಂತೋಷಂ ಸಿನಿಮಾ ಅವಾರ್ಡ್ಸ್ ಕಾರ್ಯಕ್ರಮ ಆಯೋಜಿಸಿ ಅದಕ್ಕೆ ಕೆಲವು ಕನ್ನಡ ಸಿನಿಮಾ ನಟರನ್ನು ಆಹ್ವಾನಿಸಿದ್ದರು. ಆದರೆ ಅಲ್ಲಿಗೆ ಹೋದ ನಟರಿಗೆ ಅಪಮಾನ ಮಾಡಲಾಗಿದೆ.

ಸಂತೋಷಂ ಅವಾರ್ಡ್ಸ್ ಸಮಾರಂಭಕ್ಕೆ ಕನ್ನಡದ ಹಲವು ನಟ-ನಟಿಯರು ಕನ್ನಡ ಚಿತ್ರರಂಗದಿಂದ ತೆರಳಿದ್ದರು. ಆದರೆ ಅಲ್ಲಿಗೆ ಹೋದಾಗ ನಟ-ನಟಿಯರಿಗೆ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ಹೋಟೆಲ್ ಬುಕಿಂಗ್​ ಆಗಿರಲಿಲ್ಲ, ಕನ್ನಡ ಚಿತ್ರರಂಗದವರನ್ನು ಸ್ವಾಗತಿಸುವವರೂ ಸಹ ಇರಲಿಲ್ಲ. ಈ ಅವ್ಯವಸ್ಥೆಗಳಿಂದ ಬೇಸತ್ತ ಕನ್ನಡ ಚಿತ್ರರಂಗದ ತಾರೆಯರು ಕಾರ್ಯಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ ಸುರೇಶ್, ಶೈಲಜಾ ನಾಗ್ ಮುಂತಾದವರು , ಸುಮಾರು 30ರಿಂದ 35 ಮಂದಿ ಕನ್ನಡದ ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಅವರನ್ನು ಸೂಕ್ತವಾಗಿ ನಡೆಸಿಕೊಳ್ಳಲಾಗಿಲ್ಲ. ಭರವಸೆ ನೀಡಿದಂತೆ ವ್ಯವಸ್ಥೆ ಮಾಡಲಾಗಿರಲಿಲ್ಲ. ‘ಕ್ರಾಂತಿ’ ಸಿನಿಮಾಕ್ಕೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ವೇದಿಕೆ ಮೇಲೆ ಪವರ್ ಕಟ್ ಆದ ಘಟನೆಯೂ ಸಹ ನಡೆಯಿತು. ಕೊನೆಗೆ ಕನ್ನಡದ ನಟ-ನಟಿಯರು ಕಾರ್ಯಕ್ರಮವನ್ನು ಬಾಯ್​ಕಾಟ್ ಮಾಡಿ ಅರ್ಧಕ್ಕೆ ಬಿಟ್ಟು ಹೊರನಡೆದರು. ಇಂದು (ಡಿಸೆಂಬರ್ 03) ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ

ಕನ್ನಡದ ನಟರು ಮಾತ್ರವೇ ಅಲ್ಲದೆ ತಮಿಳಿನ ನಟ-ನಟಿಯರು ಸಹ ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ಕೆಲವು ತಮಿಳಿನ ನಟರು ಕಾರ್ಯಕ್ರಮದ ಅವ್ಯವಸ್ಥೆ ಬಗ್ಗೆ ಟೀಕೆ ಮಾಡಿದ್ದಾರೆ.

ಸಂತೋಷಂ ಅವಾರ್ಡ್ಸ್ ಕಾರ್ಯಕ್ರಮವನ್ನು ಸುರೇಶ್ ಕೊಂಡೇಟಿ ಆಯೋಜನೆ ಮಾಡಿದ್ದರು. ಈ ಹಿಂದೆ ಕೆಲವು ಸಿನಿಮಾಗಳನ್ನು ನಿರ್ದೇಶನವೂ ಮಾಡಿದ್ದ ಸುರೇಶ್ ಕೊಂಡೇಟಿ ಕಳೆದ ಕೆಲ ವರ್ಷಗಳಿಂದ ಸಿನಿಮಾ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದಾರೆ. ದೊಡ್ಡ ಸಿನಿಮಾಗಳ ಪ್ರೆಸ್​ಮೀಟ್​ಗೆ ಹೋಗಿ ವೇದಿಕೆ ಮೇಲಿರುವವರಿಗೆ ಕೆಟ್ಟ ಪ್ರಶ್ನೆಗಳನ್ನು, ಒಮ್ಮೊಮ್ಮೆ ನಟ-ನಟಿಯರ ಖಾಸಗಿ ಪ್ರಶ್ನೆಗಳನ್ನು ಕೇಳುವ ಮೂಲಕ ವೈರಲ್ ಆಗಿದ್ದಾರೆ ಸುರೇಶ್ ಕೊಂಡೇಟಿ. ಹಲವು ಸಿನಿಮಾಗಳ ನಟ, ನಿರ್ಮಾಪಕ, ನಿರ್ದೇಶಕರು ಸುರೇಶ್ ಕೊಂಡೇಟಿ ಕೇಳಿರುವ ಖಾಸಗಿ ಪ್ರಶ್ನೆಗಳಿಗೆ ಸಿಟ್ಟಾಗಿ ಜಗಳ ಮಾಡಿದ್ದೂ ಸಹ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ