AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರಿನಲ್ಲಿ ‘ಕೆಜಿಎಫ್​ 2’ ಪ್ರದರ್ಶನಕ್ಕೆ ಅವಕಾಶ; ಪ್ರತಿಭಟನೆಗೆ ಸಿಕ್ತು ಪ್ರತಿಫಲ

ಚಿಕ್ಕಮಗಳೂರಿನಲ್ಲಿ ಒಟ್ಟು ಮೂರು ಚಿತ್ರಮಂದಿರಗಳಿವೆ. ಆದರೆ, ಯಾವ ಚಿತ್ರಮಂದಿರದಲ್ಲೂ ‘ಕೆಜಿಎಫ್​ 2’ ಪ್ರದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಇದು ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಚಿಕ್ಕಮಗಳೂರಿನಲ್ಲಿ ‘ಕೆಜಿಎಫ್​ 2’ ಪ್ರದರ್ಶನಕ್ಕೆ ಅವಕಾಶ; ಪ್ರತಿಭಟನೆಗೆ ಸಿಕ್ತು ಪ್ರತಿಫಲ
ಯಶ್-ಸಂಜಯ್ ದತ್
TV9 Web
| Edited By: |

Updated on: Apr 13, 2022 | 5:06 PM

Share

‘ಕೆಜಿಎಫ್​ 2’ ಸಿನಿಮಾ (KGF Chapter 2) ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ವಿಶ್ವಾದ್ಯಂತ ಸಿನಿಮಾ ತೆರೆಗೆ ಬರುತ್ತಿದೆ. ಬೆಂಗಳೂರು ಒಂದರಲ್ಲೇ 500ಕ್ಕೂ ಅಧಿಕ ಶೋಗಳು ಪ್ರದರ್ಶನ ಕಾಣಲಿದೆ. ಯಶ್ (Yash) ಅಭಿಮಾನಿಗಳು ರಾಜ್ಯದ ಮೂಲೆಮೂಲೆಯಲ್ಲಿದ್ದಾರೆ. ಹೀಗಾಗಿ, ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ‘ಕೆಜಿಎಫ್​ ಚಾಪ್ಟರ್​ 2’ ಪ್ರದರ್ಶನ ಕಾಣಲಿದೆ. ಆದರೆ, ಚಿಕ್ಕಮಗಳೂರು ಮಂದಿಗೆ ಮಾತ್ರ ‘ಕೆಜಿಎಫ್​ 2’ ಸಿನಿಮಾ ನೋಡುವ ಭಾಗ್ಯ ಇರಲಿಲ್ಲ. ಥಿಯೇಟರ್​ ಹಾಗೂ ವಿತರಕರ ನಡುವೆ ಮಾತುಕತೆ ಫೈನಲ್ ಆಗಿರಲಿಲ್ಲ. ಈ ಕಾರಣಕ್ಕೆ, ಚಿಕ್ಕಮಗಳೂರಿನಲ್ಲಿ ‘ಕೆಜಿಎಫ್​ 2’ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡ ಫ್ಯಾನ್ಸ್​ ಪ್ರತಿಭಟನೆ ನಡೆಸಿದ್ದರು. ಈಗ ಸಿನಿಮಾ ಪ್ರದರ್ಶನಕ್ಕೆ ಒಪ್ಪಿಗೆ ನೀಡಲಾಗಿದೆ.

ಚಿಕ್ಕಮಗಳೂರಿನಲ್ಲಿ ಒಟ್ಟು ಮೂರು ಚಿತ್ರಮಂದಿರಗಳಿವೆ. ಆದರೆ, ಯಾವ ಚಿತ್ರಮಂದಿರದಲ್ಲೂ ‘ಕೆಜಿಎಫ್​ 2’ ಪ್ರದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಇದು ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ನಗರದಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ಆಗ್ರಹ ಮಾಡಿದ್ದರು. ನಾಗಲಕ್ಷ್ಮಿ ಥಿಯೇಟರ್ ಮುಂಭಾಗದಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ ಜೋರಾಗಿತ್ತು.

ಪ್ರತಿಭಟನೆ ನಡೆಯೋ ಸ್ಥಳಕ್ಕೆ ಶಾಸಕ ಸಿ.ಟಿ.ರವಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಥಿಯೇಟರ್ ಮಾಲೀಕರ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಆ ಬಳಿಕ ಪ್ರತಿಭಟನಾಕಾರರ ಮನವೊಲಿಸಲು ಶಾಸಕ ಸಿ.ಟಿ.ರವಿ. ಯಶಸ್ವಿಯಾಗಿದ್ದರು. ನಟ ಯಶ್ ಹಾಗೂ ವಿತರಕರ ಜೊತೆ ಮಾತನಾಡಿ, ಏಪ್ರಿಲ್​ 14ರಿಂದ ‘ಕೆಜಿಎಫ್ 2’ ಪ್ರದರ್ಶನಕ್ಕೆ ಅವಕಾಶ ಕೊಡಿಸುವ ಭರವಸೆ ನೀಡಿದ್ದರು.

ಹುಟ್ಟೂರಿಗೆ ವಿಜಯ್:

‘ಕೆಜಿಎಫ್ ಚಾಪ್ಟರ್​ 2’ ಸಿನಿಮಾ ತೆರೆಗೆ ಬರೋಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಚಿತ್ರವನ್ನು ಸ್ವಾಗತಿಸೋಕೆ ಭರ್ಜರಿ ಸಿದ್ಧತೆ ನಡೆದಿದೆ. ಕರ್ನಾಟಕ ಸೇರಿ ಇಡೀ ವಿಶ್ವಾದ್ಯಂತ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತಿದೆ. ಜನರು ಈ ಸಿನಿಮಾ ಕಣ್ತುಂಬಿಕೊಳ್ಳಲು ಕಾದು ಕೂತಿದ್ದಾರೆ. ಮಧ್ಯರಾತ್ರಿಯುಂದಲೇ ಶೋಗಳು ಪ್ರದರ್ಶನ ಕಾಣುತ್ತಿವೆ. ಇನ್ನು, ಇಷ್ಟು ದಿನ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದ ಇಡೀ ಟೀಂ ಈಗ ಸ್ವಲ್ಪ ರಿಲ್ಯಾಕ್ಸ್​ ಆಗಿದೆ. ನಿರ್ಮಾಪಕ ವಿಜಯ್ ಅವರ ಊರು ಕಿರಗಂದೂರು. ಕಿರಗಂದೂರಿನ ಮನೆಗೆ ಯಶ್ , ಪ್ರಶಾಂತ್ ನೀಲ್ ಹಾಗೂ ವಿಜಯ್ ಅವರು ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ ತೆಗೆದ ಫೋಟೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: Sulthana lyrical video: ಅಬ್ಬರಿಸಲು ಬಂದ ‘ಸುಲ್ತಾನ’: ಹೊಸ ಹಾಡು​ ಬಿಡುಗಡೆ ಮಾಡಿದ ‘ಕೆಜಿಎಫ್​: ಚಾಪ್ಟರ್​ 2’ ತಂಡ

ಪುಣೆಯಲ್ಲಿ ‘ಕೆಜಿಎಫ್​ 2’ ಟಿಕೆಟ್​ ಸಿಗದೇ ವಿಮಾನ ಹತ್ತಿ ಬೆಂಗಳೂರಿಗೆ ಬಂದ ಲೇಡಿ ಫ್ಯಾನ್ಸ್​​: ಆಹಾ ಅಭಿಮಾನ

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ