ಮೇಕಿಂಗ್ ಮೂಲಕ ಗಮನ ಸೆಳೆದ ‘ಮಾರಿಗೆ ದಾರಿ’ ಸಿನಿಮಾ; ಟೀಸರ್ ಹೇಗಿದೆ ನೋಡಿ..

ಅಗಸ್ತ್ಯ ಅವರು ‘ಮಾರಿಗೆ ದಾರಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ಸಖತ್ ಮಾಸ್ ಆಗಿದೆ. ಅದರ ಮೇಕಿಂಗ್ ಕೂಡ ಗಮನ ಸೆಳೆದಿದೆ. ಸದ್ಯದಲ್ಲೇ ‘ಮಾರಿಗೆ ದಾರಿ’ ಸಿನಿಮಾ ಸೆನ್ಸಾರ್ ಪ್ರಕ್ರಿಯೆಗೆ ಹೋಗಲಿದೆ.

ಮೇಕಿಂಗ್ ಮೂಲಕ ಗಮನ ಸೆಳೆದ ‘ಮಾರಿಗೆ ದಾರಿ’ ಸಿನಿಮಾ; ಟೀಸರ್ ಹೇಗಿದೆ ನೋಡಿ..
Maarige Daari Movie Poster

Updated on: Apr 27, 2026 | 6:04 PM

ಸಿಕ್ಕಾಪಟ್ಟೆ ಮಾಸ್ ಕಥಾಹಂದರ ಇರುವ ‘ಮಾರಿಗೆ ದಾರಿ’ (Maarige Daari) ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈಗ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಮೇಕಿಂಗ್ ಮೂಲಕ ಈ ಟೀಸರ್ ಗಮನ ಸೆಳೆಯುತ್ತಿದೆ. ಒಂದೂವರೆ ನಿಮಿಷದ ಈ ಟೀಸರ್​​ನಲ್ಲಿ ಇಡೀ ಸಿನಿಮಾದ ಝಲಕ್ ಕಾಣಿಸಿದೆ. ಸಿನಿಮಾ (Cinema) ಹೇಗಿರಬಹುದು ಎಂಬುದರ ಸುಳಿವು ಸಿಕ್ಕಿದೆ. ಈ ಚಿತ್ರದಲ್ಲಿ ಅಗಸ್ತ್ಯ (Agastya) ಅವರು ಹೀರೋ ಆಗಿ ನಟಿಸಿದ್ದಾರೆ. ಅಲ್ಲದೇ ಚಿತ್ರದ ಹಲವು ವಿಭಾಗಗಳಲ್ಲಿ ಅವರು ಕೆಲಸ ಮಾಡಿದ್ದಾರೆ.

‘ಮಾರಿಗೆ ದಾರಿ’ ಟೀಸರ್ ನೋಡಿದ ಬಳಿಕ ಪ್ರೇಕ್ಷಕರಿಗೆ ಈ ಸಿನಿಮಾ ಮೇಲೆ ಭರವಸೆ ಮೂಡಿದೆ. ಈ ಟೀಸರ್​ನಲ್ಲಿ ಆ್ಯಕ್ಷನ್ ಅಬ್ಬರ ಇದೆ. ಮಾಸ್ ಸಿನಿಮಾ ಬಯಸುವ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುವಂತಾಗಿದೆ. ಹಾಗಂತ ಕಥೆಯ ಬಗ್ಗೆ ಹೆಚ್ಚು ಸುಳಿವು ಬಿಟ್ಟು ಕೊಟ್ಟಿಲ್ಲ. ಆ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲಾಗಿದೆ.

Maarige Daari Movie Team

ಟೀಸರ್ ನೋಡಿದವರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿರುವುದು ‘ಮಾರಿಗೆ ದಾರಿ’ ಚಿತ್ರತಂಡಕ್ಕೆ ಸಂತಸ ತಂದಿದೆ. ಹೀರೋ ಅಗಸ್ತ್ಯ ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿರುವುದು ಮಾತ್ರವಲ್ಲದೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ‘ರಾಧ ಫಿಲ್ಮ್ಸ್’ ಬ್ಯಾನರ್ ಮೂಲಕ ರಾಧ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚೇತನ್‌ ಚಂದ್ರ ಮತ್ತು ಸತೀಶ್ ಕೃಷ್ಣ ಶೆಟ್ಟಿ ಸಹ-ನಿರ್ಮಾಪಕರಾಗಿದ್ದಾರೆ.

‘ಮಾರಿಗೆ ದಾರಿ’  ಸಿನಿಮಾದ ಟೀಸರ್:

ಸುದ್ದಿಗೋಷ್ಠಿಯಲ್ಲಿ ಅಗಸ್ತ್ಯ ಅವರು ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಈ ಸಿನಿಮಾ ತುಂಬಾ ರಾ ಆದಂತಹ ಅಂಶಗಳನ್ನು ಒಳಗೊಂಡಿದೆ. ಇಷ್ಟು ಮಾತ್ರ ಹೇಳಬಹುದು. ಟೀಸರ್ ನೋಡಿದವರು ಚೆನ್ನಾಗಿ ಮೂಡಿಬಂದಿದೆ, ಯಾವಾಗ ಬಿಡುಗಡೆ ಅಂತ ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಾಹಿತಿ ನೀಡುತ್ತೇವೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ ನೋಡಿ..

‘ಮಾರಿಗೆ ದಾರಿ’ ಸಿನಿಮಾದಲ್ಲಿ ‘ಲಕ್ಷೀ ನಿವಾಸ’ ಧಾರಾವಾಹಿ ಖ್ಯಾತಿಯ ನಟಿ ಮಹಾಲಕ್ಷೀ ಅವರು ನಾಯಕಿಯಾಗಿ ನಟಿಸಿದ್ದಾರೆ. ಕಾಕ್ರೋಚ್ ಸುಧಿ, ಬಲರಾಜವಾಡಿ, ಬೆನಕ ನಂಜಪ್ಪ, ಪ್ರದೀಪ್‌ ಪೂಜಾರಿ, ವರ್ಧನ್, ಅನಂತ ಕುಮಾರ್, ತಾರಕ ರಾಮ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಿಯೋ ಆಂಟೋನಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಗದೀಶ್ ಗೌಡ ಅವರ ಛಾಯಾಗ್ರಹಣ ಮತ್ತು ಸಂಕಲನ ಈ ಚಿತ್ರಕ್ಕಿದೆ. ಸೈಕ್ ಸೂರಿ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us