ರಿಷಿ-ಪ್ರಕಾಶ್ ಬೆಳವಾಡಿ ಚಿತ್ರಕ್ಕೆ ‘ಅನಂತ ಪದ್ಮನಾಭ’ ಟೈಟಲ್; ಶೀರ್ಷಿಕೆಯಲ್ಲೇ ಕಥೆಯ ಎಳೆ ರಿವೀಲ್
ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ‘ಅನಂತ ಪದ್ಮನಾಭ’ ಎಂದು ಟೈಟಲ್ ಇಡಲಾಗಿದೆ. ರಿಷಿ ಹಾಗೂ ಪ್ರಕಾಶ್ ಬೆಳವಾಡಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಕಾಮಿಡಿ ಡ್ರಾಮಾ ಸಿನಿಮಾ ಟ್ರಾವೆಲ್ ಕಥೆಯನ್ನು ಒಳಗೊಂಡಿದೆ. ಎರಡು ಹಾಡುಗಳ ಹೊರತುಪಡಿಸಿ ಬಹುತೇಕ ಚಿತ್ರೀಕರಣ ಮುಗಿದಿದ್ದು, ಬೆಂಗಳೂರು, ಸಾಗರ, ತೀರ್ಥಹಳ್ಳಿ ಭಾಗದಲ್ಲಿ ಶೂಟಿಂಗ್ ನಡೆದಿದೆ.

ಸಂಭಾಷಣೆಕಾರರು ಸಿನಿಮಾ ನಿರ್ದೇಶಕರಾಗಿ ಬಡ್ತಿ ಪಡೆದ ಸಾಕಷ್ಟು ಉದಾಹರಣೆ ಇದೆ. ಈಗ ಇದಕ್ಕೆ ಹೊಸ ಸೇರ್ಪಡೆ ಆಗಿದೆ.‘ಅಧ್ಯಕ್ಷ’, ‘ವಿಕ್ಟರಿ’, ‘ರನ್ನ’, ‘ಪೊಗರು’, ‘ತೀರ್ಥರೂಪ ತಂದೆಯವರಿಗೆ’, ‘ಅಣ್ಣ ಫ್ರಂ ಮೆಕ್ಸಿಕೋ’ ರೀತಿಯ ಸಿನಿಮಾಗಳಿಗೆ ಸಂಭಾಷಣೆ ಬರೆದ ಪ್ರಶಾಂತ್ ರಾಜಪ್ಪ ಈಗ ನಿರ್ದೇಶನ ಮಾಡುತ್ತಿದ್ದಾರೆ. ಅವರ ಮೊದಲ ಸಿನಿಮಾಗೆ ‘ಅನಂತ ಪದ್ಮನಾಭ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ರಿಷಿ ಹಾಗೂ ಪ್ರಕಾಶ್ ಬೆಳವಾಡಿ (Prakash Belavadi) ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾದ ಟೈಟಲ್ ರಿವೀಲ್ ಮಾಡುವ ಪೋಸ್ಟರ್ ರಿವೀಲ್ ಆಗಿದೆ. ಈ ಪೋಸ್ಟರ್ನಲ್ಲಿ ಕಾರಿನ ಎದುರು ರಿಷಿ ಹಾಗೂ ಪ್ರಕಾಶ್ ಕುಳಿತಿದ್ದಾರೆ. ಕಾರಿನ ಮೇಲೆ ಬ್ಯಾಗ್ಗಳು ಇವೆ. ಇದನ್ನು ನೋಡಿದರೆ ಇದೊಂದು ಟ್ರಾವೆಲ್ ಕಥೆಯ ಸಿನಿಮಾ ಇರಬಹುದು ಎಂದು ಪ್ರೇಕ್ಷಕರು ಊಹಿಸುತ್ತಿದ್ದಾರೆ. ಟೈಟಲ್ ಪೋಸ್ಟರ್ ಮೂಲಕ ಸಿನಿಮಾ ಮೇಲಿನ ಕುತೂಹಲ ಹೆಚ್ಚಿದೆ.
ಎರಡು ಜನರೇಷನ್ ಬಗ್ಗೆ ಇರೋ ಕಥೆಯನ್ನು ಚಿತ್ರ ಹೊಂದಿದೆ ಎನ್ನಲಾಗಿದೆ. ರಿಷಿ ಅವರು ನಟನೆ ಮೂಲಕ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ ನಟನೆಯಲ್ಲಿ ಸಾಕಷ್ಟು ಪಳಗಿದವರು. ಇವರ ಕಾಂಬಿನೇಷನ್ ನೋಡಲು ಪ್ರೇಕ್ಷಕರು ಕಾದಿದ್ದಾರೆ.
ಇದನ್ನೂ ಓದಿ: ‘ಹಿಕೋರಾ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ಪ್ರಕಾಶ್ ಬೆಳವಾಡಿ
ಕಾಮಿಡಿ ಡ್ರಾಮ ಇರೋ ‘ಅನಂತ ಪದ್ಮನಾಭ’ ಸಿನಿಮಾವನ್ನ ಅಮ್ರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದಾರೆ. ಸದ್ಯ ತಂಡ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದ್ದು, ಬಹುತೇಕ ಶೂಟಿಂಗ್ ಪೂರ್ಣಗೊಳಿಸಿಕೊಂಡಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ.‘ಅನಂತ ಪದ್ಮನಾಭ’ ಚಿತ್ರಕ್ಕೆ ಬೆಂಗಳೂರು, ಸಾಗರ, ತೀರ್ಥಹಳ್ಳಿ ಭಾಗದಲ್ಲಿ ಶೂಟಿಂಗ್ ನಡೆದಿದೆ. ಅಶ್ವಿನ್ ಪಿ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.ಶೀಘ್ರವೇ ತಂಡ ರಿಲೀಸ್ ದಿನಾಂಲ ರಿವೀಲ್ ಮಾಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




