ಕನ್ನಡದಲ್ಲಿ ಯಾವ ಮ್ಯೂಸಿಕ್ ಡೈರೆಕ್ಟರ್​ಗಳೂ ಕೇಳದಷ್ಟು ಸಂಭಾವನೆ ಪಡೆದ ಅನಿರುದ್ಧ್ ರವಿಚಂದರ್

Toxic Movie: ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ. ಅವರು ಈ ಚಿತ್ರಕ್ಕೆ ದೊಡ್ಡ ಮಟ್ಟದ ಸಂಭಾವನೆಯಾಗಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಅವರ ಮೊದಲ ಕನ್ನಡ ಚಿತ್ರವಾಗಿದ್ದು, ಈ ಬೃಹತ್ ಸಂಭಾವನೆ ಚರ್ಚೆಗೆ ಕಾರಣವಾಗಿದೆ.

ಕನ್ನಡದಲ್ಲಿ ಯಾವ ಮ್ಯೂಸಿಕ್ ಡೈರೆಕ್ಟರ್​ಗಳೂ ಕೇಳದಷ್ಟು ಸಂಭಾವನೆ ಪಡೆದ ಅನಿರುದ್ಧ್ ರವಿಚಂದರ್
ಅನಿರುದ್ಧ್-ಯಶ್

Updated on: Jul 14, 2025 | 9:07 AM

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಸದ್ಯ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಈ ಸಿನಿಮಾಗೆ ಅನಿರುದ್ಧ್ ರವಿಚಂದರ್ ಅವರು ಮ್ಯೂಸಿಕ್ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿ ಹಾಗೂ ಅಚ್ಚರಿಗೊಂಡಿದ್ದಾರೆ. ಈ ಬೆನ್ನಲ್ಲೇ ಸಿನಿಮಾ ಸಂಭಾವನೆ ವಿಚಾರ ಕೂಡ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಈ ಚಿತ್ರಕ್ಕಾಗಿ ಅನಿರುದ್ಧ್ (Anirudh Ravichandar) ಅವರು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಿದ್ದಾರಂತೆ. ಇದನ್ನು ಕೇಳಿ ಫ್ಯಾನ್ಸ್ ಹುಬ್ಬೇರಿಸಿದ್ದಾರೆ.

ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅನಿರುದ್ಧ್ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿ ಆಯ್ಕೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ತಂಡದವರು ಖಚಿತಪಡಿಸಿಲ್ಲ. ಹೀಗಿರುವಾಗಲೇ ಇವರ ಸಂಭಾವನೆ ವಿಚಾರ ಜೋರಾಗಿದೆ.

ಇದನ್ನೂ ಓದಿ
ಈ ನಟಿ ಜೊತೆ ಕದ್ದು ಮುಚ್ಚಿ ಓಡಾಡಿದ್ದ ಸಲ್ಮಾನ್ ಖಾನ್?
ಸೂತಕದ ಮನೆಯಲ್ಲೂ ಸೆಲ್ಫಿ ಹುಚ್ಚು; ತಾಳ್ಮೆ ಕಳೆದುಕೊಂಡು ಕೂಗಾಡಿದ ರಾಜಮೌಳಿ
ಕೋಟಾ ಶ್ರೀನಿವಾಸ್ ರಾವ್ ಕನ್ನಡದಲ್ಲಿ ನಟಿಸಿದ್ದ ಸಿನಿಮಾಗಳು ಯಾವುವು ಗೊತ್ತೆ?
ಹಿರಿಯ ನಟ ಕೋಟ ಶ್ರೀನಿವಾಸ ರಾವ್ ನಿಧನ; ಅನಾರೋಗ್ಯದಿಂದ ವಿಧಿವಶ

ಅನಿರುದ್ಧ್ ಬಗ್ಗೆ ಮಾಡಲಾದ ಪೋಸ್ಟ್

ಅನಿರುದ್ಧ್ ಅವರು ಪ್ರತಿ ಚಿತ್ರಕ್ಕೆ ಮ್ಯೂಸಿಕ್ ಮಾಡಲು ಬರೋಬ್ಬರಿ 10 ಕೋಟಿ ರೂಪಾಯಿ ಪಡೆಯುತ್ತಾರೆ. ಅವರ ಹಿನ್ನೆಲೆ ಸಂಗೀತ ಹಾಗೂ ಅವರ ಹಾಡುಗಳಿಂದಲೇ ಸಿನಿಮಾಗಳು ಹಿಟ್ ಆದ ಉದಾಹರಣೆ ಇದೆ. ಈಗ ಯಶ್ ಅವರ ‘ಟಾಕ್ಸಿಕ್’ ಚಿತ್ರಕ್ಕೆ ಮ್ಯೂಸಿಕ್ ನೀಡಲು ಆಹ್ವಾನ ಕೊಡಲಾಗಿದೆ. ಅವರು ಇದನ್ನು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಅವರು ಹೆಚ್ಚುವರಿಯಾಗಿ ಎರಡು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಕೆವಿಎನ್ ಸಂಸ್ಥೆ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅಂದರೆ ಅವರು ಈ ಚಿತ್ರಕ್ಕೆ 12 ಕೋಟಿ ರೂಪಾಯಿ ಪಡೆಯಲಿದ್ದಾರೆ.

ಇದನ್ನೂ ಓದಿ: ಸಂಗೀತದಿಂದಲೇ ಸಿನಿಮಾಗಳನ್ನು ಗೆಲ್ಲಿಸುತ್ತಿರುವ ಸಂಗೀತ ನಿರ್ದೇಶಕ ಅನಿರುದ್ಧ್ ಪಡೆವ ಸಂಭಾವನೆ ಎಷ್ಟು?

ಅನಿರುದ್ಧ್ ಅವರು ‘ಟಾಕ್ಸಿಕ್​’ಗೆ ಮ್ಯೂಸಿಕ್ ಕೊಡೋದು ನಿಜವಾದಲ್ಲಿ ಹೆಚ್ಚಿನದ್ದನ್ನು ನಿರೀಕ್ಷಿಸಬಹುದು. ಈ ಮೊದಲು ಸಿನಿಮಾಗೆ ರವಿ ಬಸ್ರೂರು ಸಂಗೀತ ಮಾಡುತ್ತಾರೆ ಎನ್ನಲಾಗಿತ್ತು. ಕೆಜಿಎಫ್ ಚಿತ್ರದಲ್ಲಿ ಯಶ್ ಹಾಗೂ ರವಿ ಬಸ್ರೂರು ಅವರು ಒಟ್ಟಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದರು. ಆದರೆ, ಈಗ ಅವರ ಬದಲು ಟ್ರೆಂಡ್​ನಲ್ಲಿರೋ ಅನಿರುದ್ಧ್​ಗೆ ಮಣೆ ಹಾಕಲಾಗಿದೆ. ಇದು ಅವರ ಮೊದಲ ಕನ್ನಡ ಸಿನಿಮಾ ಆಗಲಿದೆ. ಈ ಚಿತ್ರದಲ್ಲಿ ತಮಿಳಿನ ನಯನತಾರಾ, ಹಿಂದಿಯ ಕಿಯಾರಾ ಅಡ್ವಾಣಿ ಕೂಡ ನಟಿಸಿದ್ದಾರೆ. ಅನಿರುದ್ಧ್ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ‘ಜೈಲರ್’, ‘ದೇವರ’, ‘ಜವಾನ್’ ಸಿನಿಮಾಗಳಿಗೆ ಸಂಗೀತ ಕೊಟ್ಟ ಅವರು ಜನಪ್ರಿಯತೆ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.