What India Thinks Today: ಟಿವಿ9 ವೇದಿಕೆಯಲ್ಲಿ ‘ಕಾಂತಾರ’ ಸಾಧನೆ ಬಗ್ಗೆ ಆಯುಷ್ಮಾನ್​ ಮಾತು

|

Updated on: Feb 26, 2024 | 4:23 PM

ಭಾರತದ ನಂಬರ್ ಒನ್ ಸುದ್ದಿ ನೆಟ್‌ವರ್ಕ್ ಟಿವಿ9 ಆರಂಭಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಕಾನ್‌ಕ್ಲೇವ್‌ನ 2ನೇ ಆವೃತ್ತಿಯ 2ನೇ ದಿನ ನಟ ಆಯುಷ್ಮಾನ್ ಖುರಾನಾ ಭಾಗವಹಿಸಿದ್ದರು. ಬಹುಮುಖ ಪ್ರತಿಭೆಯಾದ ಅವರು ತಮ್ಮ ಅತ್ಯುತ್ತಮ ನಟನೆಗೆ ಹೆಸರುವಾಸಿಯಾಗಿದ್ದಾರೆ. ಅವರು ಕಾರ್ಯಕ್ರಮದ ವಿಶೇಷ ವಿಭಾಗದಲ್ಲಿ ಪಾಲ್ಗೊಂಡರು. ಈ ವೇಳೆ ಕಲೆ, ಸಂಸ್ಕೃತಿ, ಸಾಮಾಜಿಕ ವಿಚಾರಗಳ ಕುರಿತು ಮಾತನಾಡಿದರು.

What India Thinks Today: ಟಿವಿ9 ವೇದಿಕೆಯಲ್ಲಿ ‘ಕಾಂತಾರ’ ಸಾಧನೆ ಬಗ್ಗೆ ಆಯುಷ್ಮಾನ್​ ಮಾತು
Follow us on

ವಾಟ್ ಇಂಡಿಯಾ ಥಿಂಕ್ಸ್ ಟುಡೇ ಕಾನ್ಕ್ಲೇವ್: ಟಿವಿ9 ನೆಟ್‌ವರ್ಕ್‌ನ ವಾರ್ಷಿಕ ಫ್ಲ್ಯಾಗ್‌ಶಿಪ್ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮ್ಮಿಟ್ 2024’ (What India Thinks Today) ಕಾನ್ಕ್ಲೇವ್‌ನ ಎರಡನೇ ಆವೃತ್ತಿಯ ಎರಡನೇ ದಿನ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಬಾಲಿವುಡ್ ಸ್ಟಾರ್ ಆಯುಷ್ಮಾನ್ ಖುರಾನಾ (Ayushmann Khurrana) ಅವರು ಈವೆಂಟ್‌ನ ‘ಫೈರ್‌ಸೈಡ್ ಚಾಟ್- ಹೊಸ ಭಾರತಕ್ಕಾಗಿ ಸಿನಿಮಾ’ ಎಂಬ ವಿಶೇಷ ವಿಭಾಗದಲ್ಲಿ ಭಾಗವಹಿಸಿದರು. ಈ ವೇಳೆ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಸಿನಿಮಾ ಪಯಣದ ಬಗ್ಗೆ ತಿಳಿಸಿದ ಅವರು, ತಮ್ಮ ವೃತ್ತಿಜೀವನವು ಆರಂಭದಿಂದ ಇಲ್ಲಿಯವರೆಗೆ ಉತ್ತಮವಾಗಿರುವುದು ಅದೃಷ್ಟ ಎಂದು ಹೇಳಿದರು. ಅವರು ತಂದೆ ನೀಡಿದ ಸಲಹೆಯ ಬಗ್ಗೆಯೂ ಹೇಳಿದರು.

ಸಿನಿಮಾ ಇಂದು ಯಾವುದೇ ಭಾಷೆಗೆ, ರಾಜ್ಯಕ್ಕೆ ಸೀಮಿತವಾಗಿಲ್ಲ ಎಂದು ಆಯುಷ್ಮಾನ್​ ಖುರಾನಾ ಅಭಿಪ್ರಾಯಪಟ್ಟಿದ್ದಾರೆ. ಈ ವೇಳೆ ಅವರು ಕನ್ನಡದ ‘ಕಾಂತಾರ’ ಸಿನಿಮಾದ ಬಗ್ಗೆ ಪ್ರಸ್ತಾಪಿಸಿದರು. ‘ಕನ್ನಡ ಸಿನಿಮಾಗಳು ಚೆನ್ನಾಗಿ ಓಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಆ ಸಂದರ್ಭದಲ್ಲಿ ಕಾಂತಾರ ಸಿನಿಮಾ ಸೂಪರ್​ ಹಿಟ್​ ಆಯಿತು’ ಎಂದು ಅವರು ಹೇಳಿದ್ದಾರೆ. ‘ಈಗ ಅನೇಕ ವಿಚಾರಗಳು ಬದಲಾಗಿವೆ. ನಮ್ಮ ಅಂಧಾಧುನ್​ ಸಿನಿಮಾ ಚೀನಾದಲ್ಲಿ ಉತ್ತಮವಾಗಿ ಪ್ರದರ್ಶನ ಕಂಡಿತು. ಕಲೆ ಎಂಬುದು ಭಾಷೆ ಮತ್ತು ಸಂಸ್ಕೃತಿಯ ಗಡಿಯನ್ನು ಮೀರಿದ್ದು’ ಎಂದು ಅವರು ತಿಳಿಸಿದ್ದಾರೆ.

ಮೊದಲ ಸಿನಿಮಾದಲ್ಲೇ ಸಿಕ್ಸರ್​ ಹೊಡೆಯಬೇಕು ಎಂಬುದು ಆಯುಷ್ಮಾನ್​ ಖುರಾನಾ ಅವರ ಗುರಿ ಆಗಿತ್ತು. ಅದಕ್ಕಾಗಿ ಅವರು ಮೊದಲ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ಹಲವು ಕಥೆಯನ್ನು ರಿಜೆಕ್ಟ್​ ಮಾಡಿದ್ದರು. ಒಮ್ಮೆ ಅವಕಾಶ ತಪ್ಪಿಸಿಕೊಂಡರೆ ಎರಡನೇ ಅವಕಾಶ ಸಿಗುವುದಿಲ್ಲ ಎಂಬುದು ಗೊತ್ತಿತ್ತು, ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ. ‘ನನ್ನ ಪ್ರಯಾಣವು ತುಂಬಾ ಅದ್ಭುತವಾಗಿದೆ. ‘ವಿಕ್ಕಿ ಡೋನರ್’ ಸಿನಿಮಾಗಿಂತಲೂ ಮೊದಲು 6 ಚಿತ್ರಗಳಿಗೆ ನೋ ಹೇಳಿದ್ದೆ. ನಾನು ಕೂಡ ಕಷ್ಟಪಟ್ಟೆ. ಎಲ್ಲರೂ ಪ್ರಯ್ನಿಸುತ್ತಾರೆ. ಆದರೆ ಅದೃಷ್ಟ ನನ್ನ ಕೈ ಹಿಡಿಯಿತು’ ಎಂದು ಆಯುಷ್ಮಾನ್​ ಖುರಾನಾ ಹೇಳಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್​ಗೆ ಟಿವಿ9 ನಕ್ಷತ್ರ ಅವಾರ್ಡ್: ‘ಪುಷ್ಪ’ ಹೇಳಿದ್ದೇನು?

ಈ ವೇಳೆ, ಆಯುಷ್ಮಾನ್ ಖುರಾನಾ ಅವರ ತಮ್ಮ ಯಶಸ್ಸನ್ನು ತಂದೆಗೆ ಅರ್ಪಿಸಿದರು. ‘ನೀನು ಸೂಪರ್ ಸ್ಟಾರ್ ಆಗಬೇಕಾದರೆ ಸೂಪರ್ ಸ್ಕ್ರಿಪ್ಟ್ ಇರಬೇಕು ಎಂದು ನನ್ನ ತಂದೆ ಹೇಳಿದ್ದರು. ನನ್ನ ತಂದೆ ನನ್ನನ್ನು ಆಶೀರ್ವದಿಸಿದರು. ನಾನು ಅವರಿಂದ ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ. ನಾನು ಕಲಾವಿದನಾಗಿ ನನ್ನ ಕೆಲಸವನ್ನು ಮಾಡುತ್ತಿದ್ದೇನೆ, ನನಗೆ ವಿಭಿನ್ನ ಪಾತ್ರಗಳು ಸಿಕ್ಕಿರುವುದು ನನ್ನ ಅದೃಷ್ಟ’ ಎಂದಿದ್ದಾರೆ ಆಯುಷ್ಮಾನ್​ ಖುರಾನಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.