ರಾಜ್ಕುಮಾರ್ ಧರಿಸುತ್ತಿದ್ದ ಬಟ್ಟೆಗಳಲ್ಲಿ ಈಗಲೂ ಹಾಗೆಯೇ ಇದೆ ಘಮ
‘ವಾಶ್ ಮಾಡಿಲ್ಲ ಎಂದರೆ ನಮ್ಮ ಬಟ್ಟೆಗಳು ವಾಸನೆ ಆಗುತ್ತವೆ. ಕಲೆಗಳು ಬೀಳುತ್ತವೆ. ಅಣ್ಣಾವ್ರ ಬಟ್ಟೆಗೆ ಯಾವುದೇ ಕಲೆ ಬಿದ್ದಿಲ್ಲ. ಅಣ್ಣಾವ್ರ ಯಾವ ಬಟ್ಟೆಯೂ ವಾಸನೆ ಆಗಿಲ್ಲ. ನನಗೆ ಆ ಬಟ್ಟೆ ಮುಟ್ಟೋ ಯೋಗ್ಯತೆ ಇಲ್ಲ. ಆದರೂ ಹಿಂದಿನ ಜನ್ಮದ ಪುಣ್ಯ. ಕೈಯಲ್ಲಿ ಬಟ್ಟೆ ಹಿಡಿದಾಗ ಕೈ ನಡುಗುತ್ತದೆ’ ಎಂದಿದ್ದಾರೆ ಅನುಶ್ರೀ.
ವರನಟ ಡಾ. ರಾಜ್ಕುಮಾರ್ (Rajkumar) ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ನೂರಾರು ಸಿನಿಮಾಗಳಲ್ಲಿ ನಟಿಸಿ ಅವರು ಹೆಸರು ಮಾಡಿದ್ದರು. ಅವರು ಇಂದು ನಮ್ಮ ಜೊತೆಗೆ ಇಲ್ಲದೇ ಇದ್ದರೂ ಅವರು ಕೊಟ್ಟ ಮಾರ್ಗದರ್ಶನ, ಅವರ ಸಿನಿಮಾಗಳು, ಅವರ ಪಾತ್ರಗಳು, ಅವರ ನಗುಮುಖ ಸದಾ ಜೀವಂತ. ರಾಜ್ಕುಮಾರ್ ಅವರನ್ನು ಭೇಟಿ ಮಾಡೋಕೆ ಆಗಿಲ್ಲ ಅನ್ನೋ ಬೇಸರ ಅನೇಕರಿಗೆ ಇದೆ. ಈ ವಿಚಾರವಾಗಿ ಗಾಯಕ ವಿಜಯ್ ಪ್ರಕಾಶ್ ಅವರು ಮಾತನಾಡಿದ್ದಾರೆ. ಈ ವೇಳೆ ಆ್ಯಂಕರ್ ಅನುಶ್ರೀ ಅವರು ರಾಜ್ಕುಮಾರ್ ಬಗ್ಗೆ ಅಪರೂಪದ ವಿಚಾರ ತೆರೆದಿಟ್ಟಿದ್ದಾರೆ.
‘ಸರೆಗಮಪ 20 ಗ್ಲೋಬಲ್’ ವೇದಿಕೆ ಮೇಲೆ ವಿಜಯ್ ಪ್ರಕಾಶ್ ಅವರು ರಾಜ್ಕುಮಾರ್ ಬಗ್ಗೆ ಮಾತನಾಡಿದ್ದಾರೆ. ‘ಯಾವುದಾದರೂ ವ್ಯಕ್ತಿನ ನೋಡಬೇಕು ಎಂದು ಬಯಸಿ ಭೇಟಿ ಮಾಡೋಕೆ ಆಗಿಲ್ಲ ಎಂದರೆ ಅವರ ಬಗ್ಗೆ ಏನೇ ಮಾತನಾಡಿದರೂ ನಮ್ಮ ಕಿವಿ ಅದನ್ನು ಆಲಿಸುತ್ತಾ ಇರುತ್ತದೆ’ ಎಂದರು ವಿಜಯ್ ಪ್ರಕಾಶ್. ವಿಜಯ್ ಪ್ರಕಾಶ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2008ರಲ್ಲಿ. ‘ಕವಿತೆ.. ಕವಿತೆ..’ ಅವರು ಹಾಡಿದ ಮೊದಲ ಕನ್ನಡ ಹಾಡು. ಅದಾಗಲೇ ರಾಜ್ಕುಮಾರ್ ಮರಣ ಹೊಂದಿ ಎರಡು ವರ್ಷ ಆಗಿತ್ತು.
ವಿಜಯ್ ಪ್ರಕಾಶ್ ಮುಖದಲ್ಲಿ ಇರುವ ಬೇಸರ ಅರ್ಥ ಮಾಡಿಕೊಂಡ ಅನುಶ್ರೀ ಅವರು ಒಂದು ಸಲಹೆ ನೀಡಿದರು. ‘ನಿಮಗೆ ಅವರು ಅಷ್ಟು ಇಷ್ಟ ಎಂದರೆ ಸಮಯ ಸಿಕ್ಕಾಗ ರಾಘಣ್ಣನ ಮನೆಗೆ ಹೋಗಿ. ಅಣ್ಣಾವ್ರು ಬಳಸುತ್ತಿದ್ದ ಬಟ್ಟೆ, ಬಾಚಣಿಕೆ, ಕ್ರೀಮ್ ಎಲ್ಲವನ್ನೂ ಅವರು ಹಾಗೆಯೇ ಇಟ್ಟಿದ್ದಾರೆ. ಅಗಲಿದ ದಿನದಿಂದ ಇಲ್ಲಿಯವರೆಗೆ ಅದನ್ನು ವಾಶ್ ಮಾಡಿಲ್ಲ. ಹಾಗೆಯೇ ಇದೆ. ಬಟ್ಟೆ ಒಗೆಯದೇ ಇದ್ದರೂ ಈಗಲೂ ಘಮ್ ಎನ್ನುತ್ತದೆ’ ಎಂದು ಅಚ್ಚರಿಯ ಮಾಹಿತಿ ಹಂಚಿಕೊಂಡರು ಅನುಶ್ರೀ.
ರಾಜ್ಕುಮಾರ್ ಬಗ್ಗೆ ಅನುಶ್ರೀ ಆಡಿದ ಮಾತುಗಳು
View this post on Instagram
‘ವಾಶ್ ಮಾಡಿಲ್ಲ ಎಂದರೆ ನಮ್ಮ ಬಟ್ಟೆಗಳೆಲ್ಲ ವಾಸನೆ ಆಗುತ್ತವೆ, ಕಲೆಗಳು ಬೀಳುತ್ತವೆ. ಅಣ್ಣಾವ್ರ ಬಟ್ಟೆಗೆ ಯಾವುದೇ ಕಲೆ ಬಿದ್ದಿಲ್ಲ. ಅಣ್ಣಾವ್ರ ಯಾವ ಬಟ್ಟೆಯೂ ವಾಸನೆ ಆಗಿಲ್ಲ. ನನಗೆ ಆ ಬಟ್ಟೆ ಮುಟ್ಟೋ ಯೋಗ್ಯತೆ ಇಲ್ಲ. ಆದರೂ ಹಿಂದಿನ ಜನ್ಮದ ಪುಣ್ಯ. ಕೈಯಲ್ಲಿ ಬಟ್ಟೆ ಹಿಡಿದಾಗ ಕೈ ನಡುಗುತ್ತದೆ’ ಎಂದಿದ್ದಾರೆ ಅನುಶ್ರೀ.
ಇದನ್ನೂ ಓದಿ: ದೇವರ ಪ್ರತಿಷ್ಠಾಪನೆಗೆ ಸಿಂಪಲ್ ಆಗಿ ಬಂದ ಅಶ್ವಿನಿ ಪುನೀತ್ ರಾಜ್ಕುಮಾರ್
ಈ ವೇಳೆ ಸಂಗೀತ ಸಂಯೋಜಕ ಹಂಸಲೇಖ ಅವರು ಒಂದು ಆಸಕ್ತಿಕರ ವಿಚಾರ ಹಂಚಿಕೊಂಡರು. ‘ಜೀಸಸ್ ಕ್ರೈಸ್ಟ್ ಡೆಡ್ ಬಾಡಿ ಮೇಲೆ ಶಾಲನ್ನು ಹೊದಿಸಲಾಗಿತ್ತು. ಆ ಶಾಲಿನಲ್ಲಿ ಕಾಸ್ಮಿಕ್ ರೇಸ್ ಈಗಲೂ ಇದೆ ವಿಜ್ಞಾನ ಸ್ಪಷ್ಟಪಡಿಸಿದೆ’ ಎಂದರು ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:47 pm, Tue, 27 February 24