ಭಿನ್ನ ಕಥೆ ಹೇಳೋಕೆ ಬಂದ ‘ಬೆಂಗಳೂರು ಬಾಯ್ಸ್​’; ಸಿನಿಪ್ರಿಯರಿಗೆ ನೆನಪಾಯ್ತು ‘ಓಂ’ ಸಿನಿಮಾ

. ಒಂದು ನಿಮಿಷದ ಹದಿಮೂರು ಸೆಕೆಂಡ್ ಇರುವ ಈ ಟೀಸರ್ 90ರ ದಶಕದ ಸೂಪರ್ ಹಿಟ್ ಸಿನಿಮಾಗಳಾದ ‘ಅಂತ‘, ‘ರಣಧೀರ’, ‘ಓಂ’ ಹಾಗೂ ‘ಎ’ ಸಿನಿಮಾಗಳನ್ನು ನೆನಪಿಸಿದೆ.

ಭಿನ್ನ ಕಥೆ ಹೇಳೋಕೆ ಬಂದ ‘ಬೆಂಗಳೂರು ಬಾಯ್ಸ್​’; ಸಿನಿಪ್ರಿಯರಿಗೆ ನೆನಪಾಯ್ತು ‘ಓಂ’ ಸಿನಿಮಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 11, 2022 | 8:08 PM

ಚಿತ್ರರಂಗದಲ್ಲಿ (Cinema Industry) ನಿತ್ಯ ಹೊಸಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಭಿನ್ನ ಚಿತ್ರಗಳನ್ನು ಪ್ರೇಕ್ಷಕರ ಎದುರು ಇಡಲು ಚಿತ್ರ ನಿರ್ಮಾತೃರು ಪ್ರಯತ್ನಿಸುತ್ತಿರುತ್ತಾರೆ. ಈಗಾಗಲೇ ಈ ರೀತಿಯ ಹಲವು ಪ್ರಯತ್ನಗಳು ನಡೆದಿವೆ. ಈಗ ‘ಬೆಂಗಳೂರು ಬಾಯ್ಸ್’ ಸಿನಿಮಾ (Bangalore Boys Movie) ತಂಡ ಕೂಡ ಇದೇ ಮಾದರಿಯ ಪ್ರಯತ್ನಕ್ಕೆ ಮುಂದಾಗಿದೆ. ಈ ಸಿನಿಮಾದ ಟೀಸರ್ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಅಷ್ಟೇ ಅಲ್ಲ, ಸ್ಯಾಂಡಲ್​ವುಡ್​ನಲ್ಲಿ(Sandalwood)  ಸಾಕಷ್ಟು ಹವಾ ಸೃಷ್ಟಿಸಿದ ಸಿನಿಮಾಗಳ ಪಾತ್ರಗಳನ್ನು ಈ ಚಿತ್ರದ ಟೀಸರ್ ನೆನಪಿಸಿದೆ. ಹಾಗಾದರೆ, ‘ಬೆಂಗಳೂರ ಬಾಯ್ಸ್​’ನಲ್ಲಿ ಅಂತಹ ವಿಶೇಷತೆ ಏನಿದೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ವಿ ಮೇಕರ್ಸ್ ‘ಬೆಂಗಳೂರು ಬಾಯ್ಸ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಒಂದು ನಿಮಿಷದ ಹದಿಮೂರು ಸೆಕೆಂಡ್ ಇರುವ ಈ ಟೀಸರ್ 90ರ ದಶಕದ ಸೂಪರ್ ಹಿಟ್ ಸಿನಿಮಾಗಳಾದ ‘ಅಂತ‘, ‘ರಣಧೀರ’, ‘ಓಂ’ ಹಾಗೂ ‘ಎ’ ಸಿನಿಮಾಗಳನ್ನು ನೆನಪಿಸಿದೆ. ಚಿತ್ರದ ಸೂಪರ್ ಹಿಟ್ ಸಿನಿಮಾ ಪಾತ್ರಗಳಲ್ಲಿ ನಾಯಕರಾದ ಸಚಿನ್ ಚೆಲುವರಾಯ ಸ್ವಾಮಿ, ಅಭಿಷೇಕ್ ದಾಸ್, ರೋಹಿತ್ ಕಾಣಿಸಿಕೊಂಡಿದ್ದಾರೆ. ಇವರ ಜತೆ ವೈನಿಧಿ ಜಗದೀಶ್, ಸೋನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಹಾಗಾದರೆ, ಈ ಚಿತ್ರದಲ್ಲಿ ರೌಡಿಸಂ ಬಗ್ಗೆ ಹೇಳಲಾಗುತ್ತಿದೆಯೇ? ಖಂಡಿತವಾಗಿಯೂ ಇಲ್ಲ. ‘ಬೆಂಗಳೂರು ಬಾಯ್ಸ್’ ರೋಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದ ಸಿನಿಮಾ. ಕಾಲೇಜು ಕಥೆ, ಲವ್ ಸ್ಟೋರಿ, ಎಮೋಷನ್-ಸೆಂಟಿಮೆಂಟ್ ಚಿತ್ರದ ಪ್ರಮುಖ ಅಂಶಗಳು. ಟೀಸರ್​ನಲ್ಲಿ ಬರುವ ‘ಎ’ ಚಿತ್ರದ ಡೈಲಾಗ್ ಸಖತ್ ಹೈಲೈಟ್ ಆಗಿದೆ.

ರ‍್ಯಾಪ್ ಸಾಂಗ್ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ ಅಲೋಕ್. ಅವರು ಈ ಚಿತ್ರಕ್ಕೆ  ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಧರ್ಮ ವಿಷ್ ಸಂಗೀತ ಸಂಯೋಜನೆ ಸಿನಿಮಾಗಿದೆ. ವಿಕ್ರಮ್ ಕೆ.ವೈ. ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪ್ರಶಾಂತ್ ರಾವ್ ಪುರಂ ನಿರ್ಮಾಣದಲ್ಲಿ ವಿಕ್ರಮ್​ಗೆ ಸಾಥ್ ನೀಡಿದ್ದಾರೆ. ‘ಅಂಬಿ ನಿಂಗ್​ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ ಗಾಣಿಗ ಕ್ರಿಯೇಟಿವ್ ಡೈರೆಕ್ಟರ್ ಆಗಿ ‘ಬೆಂಗಳೂರು ಬಾಯ್ಸ್’ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ, ಶೀಘ್ರವೇ ಸಿನಿಮಾ ತೆರೆಗೆ ತರುವ ಆಲೋಚನೆಯಲ್ಲಿದೆ.

ಇದನ್ನೂ ಓದಿ: ‘ಕೆಜಿಎಫ್​ 2’ ಬೇರೆ ವರ್ಷನ್​ಗೆ ಧ್ವನಿ ಕೊಡಲ್ಲ ಅಂದ್ರು ಯಶ್​; ಕಾರಣವೇನು?

ಹೊರಬಿತ್ತು ‘ಕೆಜಿಎಫ್​ ಚಾಪ್ಟರ್​ 2’ ಸಿನಿಮಾದ ಮೊದಲ ವಿಮರ್ಶೆ; ಐದಕ್ಕೆ ಐದು ಸ್ಟಾರ್​

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?