ಪ್ರಣಿತಾ ಸುಭಾಷ್ ಪ್ರೆಗ್ನೆಂಟ್; ಪತಿ ಜತೆಗಿನ ವಿಶೇಷ ಫೋಟೋ ಹಂಚಿಕೊಂಡು ವಿಷಯ ತಿಳಿಸಿದ ನಟಿ
Pranitha Subhash: ಬಹುಭಾಷಾ ನಟಿ, ಕನ್ನಡತಿ ಪ್ರಣಿತಾ ಸುಭಾಷ್ ಅವರು ತಾಯಿ ಆಗುತ್ತಿದ್ದಾರೆ. ಸ್ಪೆಷಲ್ ಫೋಟೋ ಮೂಲಕ ಅವರು ಈ ಗುಡ್ ನ್ಯೂಸ್ ನೀಡಿದ್ದಾರೆ.
ಖ್ಯಾತ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಗುಡ್ ನ್ಯೂಸ್ ನೀಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಇತ್ತೀಚಿನ ದಿನಗಳಲ್ಲಿ ಕುಟುಂಬದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಈಗ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತಾವು ಪ್ರೆಗ್ನೆಂಟ್ (Pranitha Subhash Pregnant) ಎಂಬ ಸುದ್ದಿಯನ್ನು ಪ್ರಣಿತಾ ಸುಭಾಷ್ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪತಿ ಜೊತೆಗಿನ ಸ್ಪೆಷಲ್ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಈ ಸಿಹಿ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ. ‘ನನ್ನ ಪತಿಯ 34ನೇ ವರ್ಷದ ಜನ್ಮದಿನಕ್ಕೆ ಏಂಜೆಲ್ಗಳು ನಮಗೆ ಉಡುಗೊರೆ ನೀಡಲಿವೆ’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ಸ್ನೇಹಿತರು ಪ್ರಣಿತಾ ಸುಭಾಷ್ಗೆ ಅಭಿನಂದನೆ ತಿಳಿಸುತ್ತಿದ್ದಾರೆ. 2021ರ ಮೇ ತಿಂಗಳಲ್ಲಿ ಉದ್ಯಮಿ ನಿತಿನ್ ರಾಜು (Pranitha Subhash Husband Nitin Raju) ಜೊತೆ ಪ್ರಣಿತಾ ಹಸೆಮಣೆ ಏರಿದರು. ಕೊವಿಡ್ ಮುಂಜಾಗ್ರತೆ ಕ್ರಮವಾಗಿ ಕೇವಲ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ಸಮಾರಂಭ ನಡೆದಿತ್ತು. ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಪ್ರಣಿತಾ ಸುಭಾಷ್ ಅವರನ್ನು ಪತಿ ನಿತಿನ್ ರಾಜು ಎತ್ತಿಕೊಂಡಿದ್ದಾರೆ. ಖುಷಿಯಲ್ಲಿ ತೇಲುತ್ತಿರುವ ಪ್ರಣಿತಾ ಕೈಯಲ್ಲಿ ಸ್ಕ್ಯಾನಿಂಗ್ ಕಾಪಿ ಇದೆ. ಇನ್ನೊಂದು ಫೋಟೋದಲ್ಲಿ ದಂಪತಿಗಳು ಪ್ರೆಗ್ನೆನ್ಸಿ ಟೆಸ್ಟಿಂಗ್ ಕಿಟ್ ಹಿಡಿದು ಪೋಸ್ ನೀಡಿದ್ದಾರೆ. ಈ ಪೋಸ್ಟ್ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ‘ಪೊರ್ಕಿ’ ಸಿನಿಮಾ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಸಿನಿಮಾದಲ್ಲಿ ಅವರಿಗೆ ಭರ್ಜರಿ ಖ್ಯಾತಿ ಸಿಕ್ಕಿತು. ಅನೇಕ ಸ್ಟಾರ್ ಹೀರೋಗಳ ಜೊತೆಗೆ ಅವರು ತೆರೆ ಹಂಚಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ಪ್ರಣಿತಾ ಸುಭಾಷ್ ನಟಿಸಿದ್ದಾರೆ. ಆ ಮೂಲಕ ಅವರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.
For the husband’s 34th birthday I think we have a present from the angels above .. ? pic.twitter.com/dbmATPDm3D
— Pranitha Subhash (@pranitasubhash) April 11, 2022
ಕನ್ನಡದಲ್ಲಿ ಪ್ರಣಿತಾ ಸುಭಾಷ್ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಪೊರ್ಕಿ, ಭೀಮಾ ತೀರದಲ್ಲಿ, ಸ್ನೇಹಿತರು, ಬ್ರಹ್ಮ, ಸೆಕೆಂಡ್ ಹ್ಯಾಂಡ್ ಲವರ್, ಜಗ್ಗುದಾದ, ಮಾಸ್ ಲೀಡರ್ ಮುಂತಾದ ಚಿತ್ರಗಳಲ್ಲಿ ಅವರ ನಟನೆಗೆ ಅಭಿಮಾನಿಗಳು ಮನ ಸೋತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಪ್ರಣಿತಾ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಈಗ ತಾಯಿ ಆಗುತ್ತಿರುವುದರಿಂದ ಸಹಜವಾಗಿ ಒಂದಷ್ಟು ತಿಂಗಳ ಕಾಲ ಅವರು ನಟನೆಯಿಂದ ಬ್ರೇಕ್ ಪಡೆಯಲಿದ್ದಾರೆ.
ಇದನ್ನೂ ಓದಿ:
‘ಶೀಘ್ರವೇ ಮಹತ್ವದ ಘೋಷಣೆ ಮಾಡುತ್ತೇನೆ ಎಂದ ಕಾಜಲ್ ಅಗರ್ವಾಲ್’; ನಟಿ ಪ್ರೆಗ್ನೆಂಟ್ ಎಂದ ಅಭಿಮಾನಿಗಳು
ಡೈರೆಕ್ಟರ್ ಜತೆ ಖ್ಯಾತ ನಟಿಯ ಸೀಕ್ರೆಟ್ ಅಫೇರ್ ಬಯಲು; ಪ್ರೆಗ್ನೆನ್ಸಿ ವಿಷಯ ಕೇಳಿ ಕಣ್ಣೀರು ಹಾಕಿದ ಕಂಗನಾ
Published On - 2:37 pm, Mon, 11 April 22