AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವನಾ ಹೊಸ ಪ್ರಯೋಗ, ‘ಹಂಸಗೀತೆ’ಯ ನೃತ್ಯರೂಪಕ

Bhavana Ramanna: ಎರಡು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಭಾವನಾ ತಮ್ಮನ್ನು ತಾವು ಹಲವು ಪ್ರಯೋಗಗಳಿಗೆ ಒಡ್ಡಿಕೊಂಡಿದ್ದಾರೆ. ಇದೀಗ ಹೊಸ ಪ್ರಯೋಗದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಭಾವನಾ ಹೊಸ ಪ್ರಯೋಗ, ‘ಹಂಸಗೀತೆ’ಯ ನೃತ್ಯರೂಪಕ
ಮಂಜುನಾಥ ಸಿ.
|

Updated on:Jan 22, 2024 | 11:02 PM

Share

ಭಾವನಾ (Bhavana) ಎಂದೊಡನೆ ‘ಚಂದ್ರಮುಖಿ ಪ್ರಾಣಸಖಿ’ ಸಿನಿಮಾ ನೆನಪು ಬರುತ್ತದೆ. ‘ಚಂದ್ರಮುಖಿ ಪ್ರಾಣಸಖಿ’ ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಭಾವನಾ ರಾಮಣ್ಣ ರಾಜಕಾರಣಿಯೂ ಹೌದು. ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಕನ್ನಡ ಚಿತ್ರರಂಗದಲ್ಲಿರುವ ಭಾವನಾ ಹಲವು ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಇದೀಗ ಒಂದು ಹೊಸ ಪ್ರಯತ್ನಕ್ಕೆ ಭಾವನಾ ತಮ್ಮನ್ನು ಒಡ್ಡಿಕೊಳ್ಳಲು ಮುಂದಾಗಿದ್ದಾರೆ. ಒಳ್ಳೆ ಡ್ಯಾನ್ಸರ್ ಸಹ ಆಗಿರುವ ಭಾವನಾ, ಜಿ.ವಿ.ಅಯ್ಯರ್ ಅವರು ಚಲನಚಿತ್ರವಾಗಿಸಿದ್ದ ತ.ರಾ.ಸುಬ್ಬರಾಯರ ‘ಹಂಸಗೀತ’ ಕಾದಂಬರಿಕಾರಿಯನ್ನು ಈಗ ನಟಿ ಭಾವನ ನೃತ್ಯ ರೂಪಕವಾಗಿ ತರುತ್ತಿದ್ದಾರೆ.

ತಾವು ಚಿತ್ರರಂಗಕ್ಕೆ ಬರಲು ಕಾರಣರಾದವರನ್ನು ನೆನೆದು ಭಾವುಕರಾಗಿ ಮಾತು ಆರಂಭಿಸಿದ ಭಾವನ, ಹಿಂದೆ ತಮ್ಮ ‘ಹೋಮ್ ಟೌನ್’ ಬ್ಯಾನರ್​ನಲ್ಲಿ ‘ನಿರುತ್ತರ’ ಚಿತ್ರವನ್ನು ನಿರ್ಮಿಸಿದ್ದನ್ನು ನೆನಪಿಸಿಕೊಂಡರು. ಮುಂದೆ ಕೂಡ ಚಿತ್ರ ನಿರ್ಮಿಸುವ ಆಸೆ ವ್ಯಕ್ತಪಡಿಸಿದ ಭಾವನಾ, ಹೂವು ಫೌಂಡೇಶನ್ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವದಾಗಿಯೂ ಹೇಳಿದರು. ನಂತರ ‘ಹಂಸಗೀತೆ’ ನೃತ್ಯ ಕಾವ್ಯದ ಬಗ್ಗೆ ಭಾವನ ಮಾಹಿತಿ ನೀಡಿದರು. ತ.ರಾ.ಸು ಅವರ ‘ಹಂಸಗೀತೆ’ಯ ಬಗ್ಗೆ ಇವತ್ತಿನ ಪೀಳಿಗೆಗೆ ತಿಳಿಸಿಕೊಡಬೇಕು. ಹಾಗಾಗಿ ಈ ಪ್ರಯತ್ನ ಮಾಡುತ್ತಿದ್ದೇನೆ. ಜನವರಿ 30ರ ಸಂಜೆ 6.30ಕ್ಕೆ ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವೀಣಾ ಮೂರ್ತಿ ಅವರ ನೃತ್ಯ ನಿರ್ದೇಶನದಲ್ಲಿ ಈ ನೃತ್ಯಕಾವ್ಯ ಮೂಡಿಬರಲಿದೆ.

ಇದನ್ನೂ ಓದಿ:ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್: ಸಿಎಂ ಯಾರಾಗಬೇಕು? ನಟಿ ಭಾವನ ಹೇಳಿದ್ದು ಹೀಗೆ

ಭಾವನ ಅವರೆ ಒಂದೂವರೆ ಗಂಟೆಗಳ ಕಾಲ ನಡೆಸಿಕೊಡುವ ಏಕ ವ್ಯಕ್ತಿ ಪ್ರದರ್ಶನದ ಈ ನೃತ್ಯ ಕಾವ್ಯದಲ್ಲಿ ಹಾಡು, ನೃತ್ಯ ಹಾಗೂ ಸಂಭಾಷಣೆಗಳು ಇರುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಂತ್ರಿಗಳಾದ ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ ಅವರು ಇದರಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಚಿತ್ರರಂಗದಿಂದ ಗುರುಗಳಾದ ಡಾ.ಬರಗೂರು ರಾಮಚಂದ್ರಪ್ಪ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತಾರಾ ಅನುರಾಧ ಅವರನ್ನೂ ಆಹ್ವಾನಿಸಿರುವುದಾಗಿ ಭಾವನಾ ರಾಮಣ್ಣ ತಿಳಿಸಿದ್ದಾರೆ. ಇದು ಮೊದಲ ಪ್ರಯತ್ನ. ಮುಂದೆ ಬೇರೆಬೇರೆ ಕಡೆಗಳಲ್ಲೂ ಈ ನೃತ್ಯಕಾವ್ಯವನ್ನು ಮಾಡುವ ಯೋಜನೆಯಿದೆ ಎಂದಿದ್ದಾರೆ ಭಾವನಾ ರಾಮಣ್ಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:02 pm, Mon, 22 January 24

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!