Bigg Boss Kannada: ಹೇಗಿರಲಿದೆ ‘ಬಿಗ್ ಬಾಸ್ ಸೀಸನ್ 13’? ಯಾವ ಥೀಮ್? ಎಷ್ಟು ಗಂಟೆಗೆ ಆರಂಭ?
Bigg Boss Kannada Season 13 Contestants List, Launch Date: ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13' ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಿಂದ ಸಂಜೆ 7 ಗಂಟೆಗೆ ಶೋ ಪ್ರಸಾರವಾಗಲಿದ್ದು, ಕಿಚ್ಚ ಸುದೀಪ್ ನಿರೂಪಿಸಲಿದ್ದಾರೆ. ಫ್ಲೈಟ್ ಹಾಗೂ ವರ್ಲ್ಡ್ ಟೂರ್ ಥೀಮ್ ಹೊಂದಿರುವ ಈ ಬಾರಿಯ ದೊಡ್ಮನೆಗೆ 18 ಸ್ಪರ್ಧಿಗಳು ಕಾಲಿಡುವ ನಿರೀಕ್ಷೆಯಿದೆ.

ಮುಖ್ಯಾಂಶಗಳು
- ದೊಡ್ಮನೆ ಪ್ರವೇಶಕ್ಕೆ ಕೌಂಟ್‌ಡೌನ್ ಸ್ಟಾರ್ಟ್
- ಸೆಪ್ಟೆಂಬರ್ 6ರಿಂದ ಶುರು ಬಿಗ್ ಬಾಸ್ ರಂಗು
- ಬದಲಾಯ್ತು ಪ್ರಸಾರದ ಸಮಯ
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಸೆಪ್ಟೆಂಬರ್ 6ರಿಂದ ಶೋ ಶುರುವಾಗಲಿದೆ. 16-18 ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸುವ ಸಾಧ್ಯತೆ ಇದೆ. ಈ ಬಾರಿಯ ಶೋ ಮತ್ತಷ್ಟು ರಂಗೇರಲಿದೆ. ಈ ಬಾರಿ ಯಾವ ಸ್ಪರ್ಧಿಗಳು ಬರುತ್ತಾರೆ, ಯಾರು ಫೇವರಿಟ್ ಆಗ್ತಾರೆ, ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ಹಾಗಾದರೆ, ಶೋ ಹೇಗಿರಲಿದೆ ಎಂಬುದರ ವಿವರ ಇಲ್ಲಿದೆ.
ಆರಂಭ ಸಮಯ
ಪ್ರತಿ ಬಾರಿ ಬಿಗ್ ಬಾಸ್ ಸೀಸನ್ ಸಂಜೆ 6 ಗಂಟೆಗೆ ಪ್ರಸಾರ ಆಗುತ್ತಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಆರಂಭ ಆಗ್ತಿರೋದು 7 ಗಂಟೆಗೆ. ಹೌದು, ಭಾನುವಾರ (ಸೆಪ್ಟೆಂಬರ್ 6) ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಪ್ರಸಾರ ಶುರುವಾಗಲಿದೆ. ಈ ಶೋನ ಕಿಚ್ಚ ಸುದೀಪ್ ಅವರು ನಡೆಸಿಕೊಡಲಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ಶೋ ಪ್ರಸಾರ ಕಾಣಲಿದೆ.
View this post on Instagram
ಎಷ್ಟು ಸ್ಪರ್ಧಿಗಳು?
ಈ ಬಾರಿ ‘ಬಿಗ್ ಬಾಸ್’ ಶೋನಲ್ಲಿ 18 ಸ್ಪರ್ಧಿಗಳು ಇರೋ ನಿರೀಕ್ಷೆ ಇದೆ. ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ 4 ಸ್ಪರ್ಧಿಗಳು ಬರೋ ನಿರೀಕ್ಷೆ ಇದೆ. 3 ಸ್ಪರ್ಧಿಗಳು ಜನರು ವೋಟ್ ಮಾಡಿ ಕಳುಹಿಸಿದರೆ, ಇನ್ನೋರ್ವ ಸ್ಪರ್ಧಿಯನ್ನು ಜಡ್ಜ್ಗಳು ಆಯ್ಕೆ ಮಾಡಿ ಕಳುಹಿಸುವ ಸಾಧ್ಯತೆ ಇದೆ.
ವಿವಿಧ ಕ್ಷೇತ್ರದವರು
ಪ್ರತಿ ಬಾರಿ ಬಿಗ್ ಬಾಸ್ನಲ್ಲಿ ವಿವಿಧ ಕ್ಷೇತ್ರದವರನ್ನು ಕರೆಸಲಾಗುತ್ತದೆ. ಈ ಬಾರಿಯೂ ಅದು ಮುಂದುವರಿಯಲಿದೆ. ಮಾಡೆಲಿಂಗ್, ನಟನೆ, ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿದವರು ಬಿಗ್ ಬಾಸ್ ವೇದಿಕೆ ಏರಲಿದ್ದಾರೆ. ಇದರ ಜೊತೆಗೆ ಜನಸಾಮಾನ್ಯರು ಕೂಡ ಇರಲಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ಗೆ ಎಂಟ್ರಿ ಕೊಡೋ ಸ್ಪರ್ಧಿಗಳು ಇವರೇ ನೋಡಿ; ವಿಡಿಯೋದಲ್ಲೇ ರಿವೀಲ್
ಯಾವ ಥೀಮ್?
ಈ ಬಾರಿ ಫ್ಲೈಟ್ ಥೀಮ್ನೊಂದಿಗೆ ಬಿಗ್ ಬಾಸ್ ಬರುತ್ತಿದೆ. ವರ್ಲ್ಡ್ ಟೂರ್ ಥೀಮ್ ಇರಲಿದ್ದು, ವಿಶ್ವದ ಅದ್ಭುತಗಳನ್ನು ದೊಡ್ಮನೆಯಲ್ಲಿ ನಿರ್ಮಾಣ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




