ರೇಟಿಂಗ್ ವಿಧಾನ ಬದಲಿಸಿದ ‘ಬುಕ್ ಮೈ ಶೋ’; ಈಗ ‘ಕಾಂತಾರ’ ಚಿತ್ರಕ್ಕೆ ಸಿಕ್ಕ ರೇಟಿಂಗ್ ಎಷ್ಟು?

‘ಬುಕ್ ಮೈ ಶೋ’ ಆ್ಯಪ್​ನಲ್ಲಿ ಈ ಮೊದಲು ಶೇ.100ಕ್ಕೆ ರೇಟಿಂಗ್ ನೀಡಲಾಗುತ್ತಿತ್ತು. ಈಗ ಅದನ್ನು 10ಕ್ಕೆ ಇಳಿಕೆ ಮಾಡಿದೆ. ಅಂದರೆ, ಪ್ರೇಕ್ಷಕರು 1-10ರ ಮಧ್ಯೆ ಅಂಕ ನೀಡಬೇಕು.

ರೇಟಿಂಗ್ ವಿಧಾನ ಬದಲಿಸಿದ ‘ಬುಕ್ ಮೈ ಶೋ’; ಈಗ ‘ಕಾಂತಾರ’ ಚಿತ್ರಕ್ಕೆ ಸಿಕ್ಕ ರೇಟಿಂಗ್ ಎಷ್ಟು?
ರಿಷಬ್-ಸಪ್ತಮಿ ಗೌಡ
Updated By: ರಾಜೇಶ್ ದುಗ್ಗುಮನೆ

Updated on: Oct 12, 2022 | 4:16 PM

ಪ್ರತಿ ಚಿತ್ರ ರಿಲೀಸ್ ಆದ ನಂತರದಲ್ಲಿ ಅದಕ್ಕೆ ಸಿಗುವ ರೇಟಿಂಗ್ ತುಂಬಾನೇ ಮುಖ್ಯವಾಗುತ್ತದೆ. ಒಳ್ಳೆಯ ರೇಟಿಂಗ್ ಸಿಕ್ಕರೆ ಅಂತಹ ಸಿನಿಮಾಗಳನ್ನು ನೋಡೋಕೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರುತ್ತಾರೆ. ಇತ್ತೀಚೆಗೆ ತೆರೆಗೆ ಬಂದ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ (Kantara Movie) ಸಿನಿಮಾಗೆ ಸಿಕ್ಕ ರೇಟಿಂಗ್​ ಚಿತ್ರಕ್ಕೆ ಬಹಳವೇ ಸಹಕಾರಿ ಆಗಿದೆ. ಟಿಕೆಟ್​ ಬುಕಿಂಗ್ ಆ್ಯಪ್​ ‘ಬುಕ್ ಮೈ ಶೋ’ನಲ್ಲಿ(Book My Show)  ಚಿತ್ರಕ್ಕೆ ಶೇ.99 ರೇಟಿಂಗ್ ಸಿಕ್ಕಿತ್ತು. ಹೀಗಿರುವಾಗಲೇ ಈ ಕಂಪನಿ ರೇಟಿಂಗ್ ನೀಡುವ ವಿಧಾನವನ್ನು ಬದಲಿಸಿದೆ. ಹಾಗಾದರೆ ಕಾಂತಾರ ಚಿತ್ರಕ್ಕೆ ಸಿಕ್ಕ ರೇಟಿಂಗ್ ಎಷ್ಟು? ಇಲ್ಲಿದೆ ಉತ್ತರ.

‘ಬುಕ್ ಮೈ ಶೋ’ ಆ್ಯಪ್​ನಲ್ಲಿ ಈ ಮೊದಲು ಶೇ.100ಕ್ಕೆ ರೇಟಿಂಗ್ ನೀಡಲಾಗುತ್ತಿತ್ತು. ಈಗ ಅದನ್ನು 10ಕ್ಕೆ ಇಳಿಕೆ ಮಾಡಿದೆ. ಅಂದರೆ, ಪ್ರೇಕ್ಷಕರು 1-10ರ ಮಧ್ಯೆ ಅಂಕ ನೀಡಬೇಕು. ‘ಕಾಂತಾರ’ಕ್ಕೆ ಈ ಮೊದಲು ಶೇ. 99 ರೇಟಿಂಗ್ ಇತ್ತು. ಅದನ್ನು ಈಗ 10ಕ್ಕೆ ಕನ್ವರ್ಟ್ ಮಾಡಲಾಗಿದ್ದು, 9.9 ಅಂಕ ಸಿಕ್ಕಿದೆ. ಬರೋಬ್ಬರಿ 66 ಸಾವಿರ ಜನರು ವೋಟಿಂಗ್ ಮಾಡಿದ್ದಾರೆ. ಈ ಮೊದಲು ‘ಬುಕ್​ ಮೈ ಶೋ’ನಲ್ಲಿ ಈ ಪರಿ ಮೆಚ್ಚುಗೆ ಯಾವ ಚಿತ್ರಕ್ಕೂ ಸಿಕ್ಕಿರಲಿಲ್ಲ ಅನ್ನೋದು ಹೆಮ್ಮೆಯ ಸಂಗತಿ.

ಐಎಂಡಿಬಿ ರೇಟಿಂಗ್​ನಲ್ಲೂ ಕಮಾಲ್:

ಇದನ್ನೂ ಓದಿ
Sapthami Gowda: ಜನರ ಮಧ್ಯೆ ‘ಕಾಂತಾರ’ ನಾಯಕಿ ಸಪ್ತಮಿ ಗೌಡ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?
Kantara: ರಿಷಬ್​ ಶೆಟ್ಟಿ ಕಂಬಳದ ಕೋಣ ಓಡಿಸುವುದು ಕಲಿತಿದ್ದು ಹೇಗೆ? ಇಲ್ಲಿದೆ ಮೇಕಿಂಗ್​ ವಿಡಿಯೋ

‘ಕಾಂತಾರ’ ಸಿನಿಮಾ ಐಎಂಡಿಬಿ ರೇಟಿಂಗ್​ನಲ್ಲೂ ಮಿಂಚಿದೆ. ಈ ಚಿತ್ರ ಐಎಂಡಿಬಿಯಲ್ಲಿ 10ಕ್ಕೆ 9.6 ಅಂಕ ಪಡೆದುಕೊಂಡಿದೆ. ಸುಮಾರು 12 ಸಾವಿರ ಜನರು ವೋಟ್​ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೇಟಿಂಗ್​ನಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

ಹೆಚ್ಚಲಿದೆ ‘ಕಾಂತಾರ’ ಕಲೆಕ್ಷನ್?:

‘ಕಾಂತಾರ’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಸಾಲು ಸಾಲು ರಜೆ ಸಿಕ್ಕಿದ್ದು ಚಿತ್ರಕ್ಕೆ ವರದಾನ ಆಗಿದೆ. ಈ ಚಿತ್ರದ ಕಲೆಕ್ಷನ್ ಎಷ್ಟು ಎಂಬುದರ ಪಕ್ಕಾ ಲೆಕ್ಕದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಆದರೆ, ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ ಎಂಬುದಂತೂ ನಿಜ. ಈಗ ಹಿಂದಿಯಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ. ಈ ಸಿನಿಮಾದಿಂದ ಹೊಂಬಾಳೆ ಫಿಲ್ಮ್ಸ್ ಭರಪೂರ ಲಾಭ ಕಂಡಿದೆ.

Published On - 4:15 pm, Wed, 12 October 22