ಸಹೋದರರ ದಿನ 2023: ಸ್ಯಾಂಡಲ್ವುಡ್ನ ಸೆಲೆಬ್ರಿಟಿ ಬ್ರದರ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
Brother‘s Day: ಸ್ಯಾಂಡಲ್ವುಡ್ನಲ್ಲಿ ಸೆಲೆಬ್ರಿಟಿ ಬ್ರದರ್ಸ್ ಇದ್ದಾರೆ. ಒಂದೇ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಇಂದು (ಮೇ 24) ಸಹೋದರರ ದಿನ. ವಿಶ್ವಾದ್ಯಂತ ಇದನ್ನು ಸೆಲೆಬ್ರೇಟ್ ಮಾಡಲಾಗುತ್ತಿದೆ. ಸಹೋದರರಿಗೆ ವಿಶ್ ಮಾಡಿ ಈ ದಿನವನ್ನು ಆಚರಿಸಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಶ್ಗಳು ಹರಿದು ಬಂದಿವೆ. ಸಹೋದರರ ದಿನದಂದು ಅನೇಕರು ಸ್ಯಾಂಡಲ್ವುಡ್ನಲ್ಲಿರುವ (Sandalwood) ಸೆಲೆಬ್ರಿಟಿ ಬ್ರದರ್ಸ್ನ ನೆನಪು ಮಾಡಿಕೊಳ್ಳುತ್ತಿದ್ದಾರೆ. ಒಂದೇ ಕುಟುಂಬದ ಅನೇಕರು ಚಿತ್ರರಂಗದಲ್ಲಿ (Cinema Industry) ಆ್ಯಕ್ಟೀವ್ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
- ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಸಹೋದರರು. ಅವರ ಮಧ್ಯೆ ಇರುವ ಆಪ್ತತೆ ಕಡಿಮೆ ಆಗುವಂಥದ್ದಲ್ಲ. ಈ ದಿನದಂದು ಪುನೀತ್ ರಾಜ್ಕುಮಾರ್ ನಮ್ಮ ಜೊತೆ ಇಲ್ಲ ಅನ್ನೋದು ಬೇಸರದ ವಿಚಾರ. ಈ ನೋವು ಎಂದಿಗೂ ಕಡಿಮೆ ಆಗುವುದಲ್ಲ.
- ಕೋಮಲ್ ಹಾಗೂ ಜಗ್ಗೇಶ್ ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಜಗ್ಗೇಶ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಆ ಬಳಿಕ ಕೋಮಲ್ ಎಂಟ್ರಿ ಆಯಿತು. ಕೋಮಲ್ ಚಿತ್ರರಂಗಕ್ಕೆ ಬರಬಾರದು ಎನ್ನುವ ಉದ್ದೇಶ ಜಗ್ಗೇಶ್ಗೆ ಇತ್ತು.
- ವಿಜಯ್ ರಾಘವೇಂದ್ರ-ಶ್ರೀಮುರಳಿ ಸ್ಯಾಂಡಲ್ವುಡ್ನಲ್ಲಿ ತೊಡಗಿಕೊಂಡಿದ್ದಾರೆ. ಶ್ರೀಮುರಳಿ ಮಾಸ್ ಸಿನಿಮಾ ಮೂಲಕ ಫೇಮಸ್ ಆದರೆ, ವಿಜಯ್ ರಾಘವೇಂದ್ರ ಪ್ರಯೋಗಾತ್ಮಕ ಸಿನಿಮಾ ಮಾಡುತ್ತಿದ್ದಾರೆ.
- ಸಾಯಿಕುಮಾರ್, ರವಿ ಶಂಕರ್ ಹಾಗೂ ಅಯ್ಯಪ್ಪ ಸಹೋದರರು. ಖಡಕ್ ವಿಲನ್ ಆಗಿ ಮೂವರೂ ಫೇಮಸ್ ಆಗಿದ್ದಾರೆ.
- ಅನಂತ್ ನಾಗ್-ಶಂಕರ್ ನಾಗ್ ಒಟ್ಟಾಗಿ ಅನೇಕ ಸಿನಿಮಾ ಮಾಡಿದ್ದರು. ಇವರು ಸಹೋದರರು. ಶಂಕರ್ ನಾಗ್ ಅವರು ಈಗ ನಮ್ಮೊಂದಿಗೆ ಇಲ್ಲ.
- ರಾಜ್ಕುಮಾರ್-ವರದರಾಜ್ ಸಹೋದರರು. ವರದರಾಜ್ ಹೋಂ ಬ್ಯಾನರ್ ನೋಡಿಕೊಳ್ಳುತ್ತಿದ್ದರು. ವಜ್ರೇಶ್ವರಿ ಕಂಬೈನ್ಸ್ ಬೆಳೆಯಲು ಅವರ ಕೊಡಗೆ ದೊಡ್ಡದಿದೆ.
- ಚಿರಂಜೀವಿ ಸರ್ಜಾ-ಧ್ರುವ ಸರ್ಜಾ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಚಿರಂಜೀವಿ ಅವರು ಕೆಲ ವರ್ಷಗಳ ಹಿಂದೆ ಮೃಪಟ್ಟರು. ಆ ಬಳಿಕ ಧ್ರುವ ಸರ್ಜಾಗೆ ನೋವು ಕಾಡಿದೆ.
- ಸಾಧು ಕೋಕಿಲ ಹಾಗೂ ಲಯೇಂದ್ರ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಸಾಧು ಕೋಕಿಲ ಅವರಷ್ಟು ಲಯೇಂದ್ರ ಫೇಮಸ್ ಆಗಿಲ್ಲ.
- ರವಿಚಂದ್ರನ್-ಬಾಲಾಜಿ ಸಹೋದರರು. ನಟನಾಗಿ, ನಿರ್ಮಾಪಕನಾಗಿ ರವಿಚಂದ್ರನ್ ಫೇಮಸ್ ಆಗಿದ್ದಾರೆ. ಬಾಲಾಜಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Wed, 24 May 23