ದರ್ಶನ್ ವಿವಾದಗಳು ಒಂದೆರಡಲ್ಲ, ಇಲ್ಲಿವೆ ಹಳೆ ಪ್ರಕರಣಗಳ ವಿವರ

ದರ್ಶನ್ ಹೆಸರು ವಿವಾದಗಳಲ್ಲಿ ಕೇಳಿ ಬರುತ್ತಲೇ ಇರುತ್ತದೆ. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್​ರ ಈ ಹಿಂದಿನ ಕೆಲವು ವಿವಾದಗಳು, ಪ್ರಕರಣಗಳ ಪಟ್ಟಿ ಇಲ್ಲಿದೆ.

ದರ್ಶನ್ ವಿವಾದಗಳು ಒಂದೆರಡಲ್ಲ, ಇಲ್ಲಿವೆ ಹಳೆ ಪ್ರಕರಣಗಳ ವಿವರ
Follow us
|

Updated on:Jun 11, 2024 | 11:11 AM

ನಟ ತೂಗುದೀಪ ದರ್ಶನ್ (Darshan Thugudeepa) ಅವರನ್ನು ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ರೇಣು ಸ್ವಾಮಿ ಎಂಬುವರನ್ನು ದರ್ಶನ್ ಸೂಚನೆ ಮೇರೆಗೆ ಕೆಲವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೊಲೆ ನಡೆದಾಗ ದರ್ಶನ್ ಸಹ ಸ್ಥಳದಲ್ಲಿ ಹಾಜರಿದ್ದರು ಎನ್ನಲಾಗುತ್ತಿದೆ. ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಮತ್ತೊಮ್ಮೆ ಜೈಲುವಾಸಿಯಾಗಲಿದ್ದಾರೆ. ನಟ ದರ್ಶನ್​ಗೆ ಜೈಲು ವಾಸ, ಪೊಲೀಸ್ ದೂರುಗಳು ಇದು ಮೊದಲಲ್ಲ. ಈ ಹಿಂದೆ ದರ್ಶನ್​ ಮೇಲೆ ದಾಖಲಾಗಿದ್ದ ಪ್ರಕರಣಗಳ ಪಟ್ಟಿ ಇಲ್ಲಿದೆ.

ಪತ್ನಿ ಮೇಲೆ ಹಲ್ಲೆ

2011 ರಲ್ಲಿ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಮೊದಲ ಬಾರಿ ಜೈಲು ಸೇರಿದ್ದರು. ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ಅವರ ಮೇಲೆ ತೀವ್ರ ಹಲ್ಲೆಯನ್ನು ದರ್ಶನ್ ಮಾಡಿದ್ದರು. ವಿಜಯಲಕ್ಷ್ಮಿ ಅವರ ಮುಖಕ್ಕೆ, ಕೈಗೆ ಗಾಯ ಮಾಡಿದ್ದರು. ವಿಜಯಲಕ್ಷ್ಮಿ ಅವರೇ ದರ್ಶನ್ ವಿರುದ್ಧ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ದರ್ಶನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆ ಬಳಿಕ ವಿಜಯಲಕ್ಷ್ಮಿ ಅವರು ದೂರು ವಾಪಸ್ ಪಡೆದರಾದರೂ ಕ್ರಿಮಿನಲ್ ಪ್ರಕರಣವಾಗಿದ್ದರಿಂದ ತನಿಖೆ ಮುಂದುವರೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 28 ದಿನಗಳ ಕಾಲ ದರ್ಶನ್ ಜೈಲಿನಲ್ಲಿದ್ದರು.

ಸಹ ನಟನ ಮೇಲೆ ಹಲ್ಲೆ

2019 ರಲ್ಲಿ ಬಿಡುಗಡೆ ಆದ ‘ಯಜಮಾನ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿಯೂ ಸಹ ದರ್ಶನ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿತ್ತು. ಸಿನಿಮಾದ ಹಾಡೊಂದರ ಶೂಟಿಂಗ್ ನಡೆಯಬೇಕಾದರೆ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡುತ್ತಿದ್ದ ಶಿವಶಂಕರ್ ಹೆಸರಿನ ವ್ಯಕ್ತಿಯೊಬ್ಬರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ದೂರು ದಾಖಲಾಗಿರಲಿಲ್ಲ.

ಉಮಾಪತಿ-ದರ್ಶನ್ ವಿವಾದ

‘ರಾಬರ್ಟ್’ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ನಡುವೆ 2021 ರಲ್ಲಿ ಮೊದಲ ಬಾರಿಗೆ ವಿವಾದ ಭುಗಿಲೆದ್ದಿತ್ತು. ಉಮಾಪತಿ ಶ್ರೀನಿವಾಸ್, ತಮ್ಮ ಹೆಸರು ಬಳಸಿಕೊಂಡು 25 ಕೋಟಿ ರೂಪಾಯಿ ಸಾಲ ಪಡೆದು ವಂಚನೆಗೆ ಯತ್ನಿಸಿದ್ದಾರೆ ಎಂದು ದರ್ಶನ್ ಆರೋಪ ಮಾಡಿದ್ದರು. ದೂರು ಸಹ ದಾಖಲಿಸಿದ್ದರು. ಆದರೆ ಉಮಾಪತಿ ಶ್ರೀನಿವಾಸ್ ಆ ಆರೋಪವನ್ನು ತಳ್ಳಿ ಹಾಕಿದ್ದಲ್ಲದೆ ತಮ್ಮ ಪರವಾಗಿ ಸಾಕ್ಷ್ಯಗಳನ್ನು ಸಹ ಬಿಡುಗಡೆ ಮಾಡಿದ್ದರು. ಆ ಘಟನೆ ಬಳಿಕ ಉಮಾಪತಿ ಅವರು ದರ್ಶನ್​ರಿಂದ ಅಂತರ ಕಾಯ್ದುಕೊಂಡರು.

ದಲಿತ ವ್ಯಕ್ತಿ ಮೇಲೆ ಹಲ್ಲೆ ಆರೋಪ

ದರ್ಶನ್ ಕುರಿತಾಗಿ ಸತತ ವಿವಾದಗಳು ನಡೆಯುತ್ತಿರುವ ಸಮಯದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್, ದರ್ಶನ್, ದಲಿತ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಮಾಡಿದರು. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್​ನಲ್ಲಿ ದಲಿತ ಸಪ್ಲೈಯರ್ ಒಬ್ಬನ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಯ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್​ಗೆ ಭೇಟಿ ನೀಡಿ ತನಿಖೆಯನ್ನು ಸಹ ನಡೆಸಿದರು. ಆದರೆ ದರ್ಶನ್, ಹಲ್ಲೆ ಆರೋಪವನ್ನು ತಳ್ಳಿ ಹಾಕಿದರು.

ಸಂದೇಶ್ ನಾಗರಾಜ್ ಆಡಿಯೋ ಲೀಕ್

ದರ್ಶನ್​ಗೆ ಆಪ್ತವಾಗಿದ್ದ ನಿರ್ಮಾಪಕ ಸಂದೇಶ್ ನಾಗರಾಜ್, ನಿರ್ದೇಶಕ ಇಂದ್ರಜಿತ್ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಲೀಕ್ ಆಗಿತ್ತು. ಆಡಿಯೋನಲ್ಲಿ, ಸ್ವತಃ ಸಂದೇಶ್ ನಾಗರಾಜ್, ದರ್ಶನ್ ತಮ್ಮ ಹೋಟೆಲ್​ನಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆ ಘಟನೆ ಬಳಿಕ ಸಂದೇಶ್ ಹಾಗೂ ದರ್ಶನ್ ಪರಸ್ಪರ ದೂರಾದರು.

ದರ್ಶನ್ ಫಾರಂ ಹೌಸ್​ ಮೇಳೆ ದಾಳಿ

ದರ್ಶನ್​ರ ಮೈಸೂರಿನ ಫಾರಂ ಹೌಸ್​ ಮೇಲೆ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಕಾನೂನು ಬಾಹಿರವಾಗಿ ಸಾಕುತ್ತಿದ್ದ ಬಾರ್ ಹೆಡೆಡ್ ಗೂಸ್ ಹೆಸರಿನ ಪಕ್ಷಿಗಳನ್ನು ರಕ್ಷಿಸಿದ್ದರು. ಆ ಪಕ್ಷಿಗಳನ್ನು ಸಾಕಲು ದರ್ಶನ್ ಅರಣ್ಯ ಇಲಾಖೆಯ ಅನುಮತಿ ಪಡೆದುಕೊಂಡಿರಲಿಲ್ಲ.

ದರ್ಶನ್ ವಿರುದ್ಧ ಮಹಿಳಾ ಸಂಘಗಳ ದೂರು

‘ಕಾಟೇರ’ ಸಿನಿಮಾದ ಸಕ್ಸಸ್ ಮೀಟ್​ನಲ್ಲಿ ಮಾತನಾಡಿದ್ದ ನಟ ದರ್ಶನ್, ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆಂದು ಆರೋಪಿಸಿ ಕೆಲ ಮಹಿಳಾಪರ ಸಂಘಟನೆಗಳು ದರ್ಶನ್ ವಿರುದ್ಧ ದೂರು ದಾಖಲಿಸಿದ್ದವು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ತುಚ್ಛ ಪದಗಳನ್ನು ಬಳಸಿ ನಿಂದಿಸಿದ್ದರು.

ಜೆಟ್​ಲ್ಯಾಗ್ ಪಬ್ ಪ್ರಕರಣ

‘ಕಾಟೇರ’ ಸಿನಿಮಾದ ಸಂಭ್ರಮದ ಪಾರ್ಟಿ ವಿಚಾರವಾಗಿಯೂ ದರ್ಶನ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿ, ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು ದರ್ಶನ್. ಜೆಟ್​ಲ್ಯಾಗ್ ಪಬ್​ನಲ್ಲಿ ನಿಯಮ ಮೀರಿ ತಡರಾತ್ರಿ ವರೆಗೆ ಪಾರ್ಟಿ ಮಾಡಿದ್ದಾರೆಂದು ಆರೋಪಿಸಿ ನಟ ದರ್ಶನ್, ರಾಕ್​ಲೈನ್ ವೆಂಕಟೇಶ್, ಡಾಲಿ ಧನಂಜಯ್, ಸತೀಶ್ ನೀನಾಸಂ ಇನ್ನೂ ಕೆಲವರ ವಿರುದ್ಧ ದೂರು ದಾಖಲಾಗಿತ್ತು. ಜನವರಿ 15 ರಂದು ಪೊಲೀಸ್ ಠಾಣೆಗೆ ವಿಚಾರಣೆ ಹಾಜರಾಗಿದ್ದರು ದರ್ಶನ್.

ಹುಲಿ ಉಗುರು ಪ್ರಕರಣ

ವರ್ತೂರು ಸಂತೋಶ್ ಬಿಗ್​ಬಾಸ್ ಮನೆಗೆ ಹೋದಾಗ ಆರಂಭವಾದ ಹುಲಿ ಉಗುರು ಪ್ರಕರಣ ಹಲವು ಸೆಲೆಬ್ರಿಟಿಗಳನ್ನು ಸುತ್ತು ಹಾಕಿಕೊಂಡಿತ್ತು. ಅಂತೆಯೇ ದರ್ಶನ್ ಅವರಿಗೂ ಈ ಪ್ರಕರಣ ಸುತ್ತಿಕೊಂಡಿತ್ತು. ದರ್ಶನ್ ಮನೆಗೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ದರ್ಶನ್​ರಿಂದ ಹುಲಿ ಉಗುರು ವಶಪಡಿಸಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Tue, 11 June 24

ತಾಜಾ ಸುದ್ದಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!