ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಫಿನಾಲೆ ಪ್ರವೇಶಿಸಿದ ಕಿಚ್ಚನ ‘ಕರ್ನಾಟಕ ಬುಲ್ಡೋಜರ್ಸ್’

ಈ ಮೊದಲು 2013 ಹಾಗೂ 2014ರಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಟೀಂ ಸಿಸಿಎಲ್ ಟ್ರೋಫಿ ಗೆದ್ದಿತ್ತು. ಈಗ ಮತ್ತೊಮ್ಮೆ ಗೆಲ್ಲುವ ಕನಸು ಕಾಣುತ್ತಿದೆ. ಫಿನಾಲೆಯಲ್ಲಿ ಯಾವ ತಂಡ ಆಡಲಿದೆ ಎಂಬುದು ಇಂದು ಗೊತ್ತಾಗಲಿದೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಫಿನಾಲೆ ಪ್ರವೇಶಿಸಿದ ಕಿಚ್ಚನ ‘ಕರ್ನಾಟಕ ಬುಲ್ಡೋಜರ್ಸ್’
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on:Mar 16, 2024 | 2:49 PM

ಸಿಸಿಎಲ್​ (CCL)  2024ರ ಕ್ವಾಲಿಫೈಯರ್ 1 ಮ್ಯಾಚ್​ನಲ್ಲಿ ಕಿಚ್ಚ ಸುದೀಪ್ ಅವರ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಫಿನಾಲೆ ತಲುಪಿದೆ. ಬೆಂಗಾಲ್ ಟೈಗರ್ಸ್ ತಂಡವನ್ನು 8 ವಿಕೆಟ್​ಗಳಲ್ಲಿ ಮಣಿಸಿ ಫಿನಾಲೆಗೆ ಟಿಕೆಟ್ ಪಡೆದಿದೆ. ಮಾರ್ಚ್ 25ರಂದು ಫಿನಾಲೆ ನಡೆಯಲಿದೆ. ಎಲ್ಲರೂ ಸುದೀಪ್ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಫಿನಾಲೆಯಲ್ಲಿ ಯಾವ ರೀತಿಯ ಸೆಣೆಸಾಟ ನಡೆಯಲಿದೆ ಎನ್ನುವ ಕುತೂಹಲ ಮೂಡಿದೆ.

ತಿರುವನಂತಪುರದ ಗ್ರೀನ್‌ಫೀಲ್ಡ್​ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ಮಧ್ಯೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ನಮ್ಮ ಕರ್ನಾಟಕದ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸಿಸಿಎಲ್​ನ ಫಾರ್ಮ್ಯಾಟ್ ಬೇರೆ ರೀತಿಯಲ್ಲಿ ಇದೆ. 10 ಓವರ್​ಗಳ ನಾಲ್ಕು ಇನ್ನಿಂಗ್ಸ್ ಇರುತ್ತದೆ. ಈ ಪೈಕಿ ಎರಡೂ ತಂಡಗಳು ಮೊದಲು 10 ಓವರ್ ಆಡಬೇಕು. ಎರಡನೇ ಇನ್ನಿಂಗ್ಸ್​​ನಲ್ಲಿ ಮತ್ತೆ ತಲಾ 10 ಓವರ್ ಆಡಬೇಕು.

ಮೊದಲು ಬ್ಯಾಟ್ ಮಾಡಿದ ಬೆಂಗಾಲ್ ಟೈಗರ್ಸ್ 86ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಈ ಸಣ್ಣ ಮೊತ್ತವನ್ನು ಬೆನ್ನು ಹತ್ತಿದ ಸುದೀಪ್ ಪಡೆ 114ರನ್​ಗೆ 4 ವಿಕೆಟ್ ಕಳೆದುಕೊಂಡಿತು. ಈ ಮೂಲಕ 28ರನ್​ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್​ನಲ್ಲಿ ಬೆಂಗಾಲ್ ಟೈಗರ್ಸ್ ಒಳ್ಳೆಯ ಪ್ರದರ್ಶನ ನೀಡಿತು.

ಎರಡನೇ ಇನ್ನಿಂಗ್ಸ್ ಆಡಿದ ಬೆಂಗಾಲ್ ಟೈಗರ್ಸ್ 127ರನ್​ಗೆ 6 ವಿಕೆಟ್ ಕಳೆದುಕೊಂಡಿತು. ಈ ಮೂಲಕ 100 ರನ್​ಗಳ ಟಾರ್ಗೆಟ್​ನ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆನ್ನು ಹತ್ತಿತು. ಉತ್ತಮ ಆರಂಭ ಕಂಡ ತಂಡ ಇನ್ನೂ ಎರಡು ಓವರ್ ಇರುವಾಗಲೇ ಎರಡು ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತು. ಈ ಮೂಲಕ ಫಿನಾಲೆ ಕನಸನ್ನು ನನಸಾಗಿಸಿಕೊಂಡಿತು .

ಇದನ್ನೂ ಓದಿ: CCL 2024: ಸಿಸಿಎಲ್​ನಲ್ಲಿ ಸತತ ಮೂರನೇ ಅರ್ಧಶತಕ ಸಿಡಿಸಿದ ಡಾರ್ಲಿಂಗ್ ಕೃಷ್ಣ..!

ಈ ಮೊದಲು 2013 ಹಾಗೂ 2014ರಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಟೀಂ ಸಿಸಿಎಲ್ ಟ್ರೋಫಿ ಗೆದ್ದಿತ್ತು. ಈಗ ಮತ್ತೊಮ್ಮೆ ಗೆಲ್ಲುವ ಕನಸು ಕಾಣುತ್ತಿದೆ. ಫಿನಾಲೆಯಲ್ಲಿ ಯಾವ ತಂಡ ಆಡಲಿದೆ ಎಂಬುದು ಇಂದು ಗೊತ್ತಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:51 am, Sat, 16 March 24