ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಖ್ಯಾತಿಯ ನಟ ಗೋವಿಂದೇಗೌಡ ಅಪಘಾತಕ್ಕೀಡಾಗಿದ್ದಾರೆ. ಇಂದು ಸಂಜೆ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿದ್ದು, ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿರುತೆರೆಯಲ್ಲಿ ಜಿಜಿ (ಗೋವಿಂದೇಗೌಡ) ಎಂದೇ ಪರಿಚಿತರಾಗಿದ್ದ ಗೋವಿಂದೇಗೌಡರ ಅಪಘಾತದ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ನಟ ಜಗ್ಗೇಶ್ ಖಚಿತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನವರಸ ನಾಯಕ ಜಗ್ಗೇಶ್, ”ಕಾಮಿಡಿಕಿಲಾಡಿ ನಟ GG ಗೋವಿಂದೆಗೌಡನಿಗೆ ಚಿತ್ರಿಕರಣ ಸಮಯದಲ್ಲಿ ಅಪಘಾತವಾಗಿ BGS ಆಸ್ಪತ್ರೆಯಲ್ಲಿ ದಾಖಲಾಗಿರುವ ದಯಮಾಡಿ ಅವನಿಗೆ ಏನು ಆಗದಂತೆ ನೀವು ಪ್ರಾರ್ಥನೆ ಮಾಡಿ..ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ ಹೊರಟೆ” ಎಂದು ತಿಳಿಸಿದ್ದಾರೆ.
ಕಾಮಿಡಿಕಿಲಾಡಿ ನಟ GG ಗೋವಿಂದೆಗೌಡನಿಗೆ ಚಿತ್ರಿಕರಣ ಸಮಯದಲ್ಲಿ ಅಪಘಾತವಾಗಿ BGS ಆಸ್ಪತ್ರೆಯಲ್ಲಿ ದಾಖಲಾಗಿರುವ ದಯಮಾಡಿ ಅವನಿಗೆ ಏನು ಆಗದಂತೆ ನೀವು ಪ್ರಾರ್ಥನೆ ಮಾಡಿ..ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ ಹೊರಟೆ… pic.twitter.com/KlnqctXII4
— ನವರಸನಾಯಕ ಜಗ್ಗೇಶ್ (@Jaggesh2) July 27, 2021
ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ತೊಡಗಿಸಿಕೊಂಡಿದ್ದ ಗೋವಿಂದೇಗೌಡ ಕೆಜಿಎಫ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ರಾಷ್ಟ್ರಪ್ರಶಸ್ತಿಗೆ ಭಾಜನವಾದ ‘ಅಕ್ಷಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ಐದು ನಿರ್ದೇಶಕರು ಹೊಸ ಪ್ರಯೋಗ ‘ಆದ್ದರಿಂದ’ ಎಂಬ ಸಿನಿಮಾದಲ್ಲಿ ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳಿರುವ ಭಾಗದಲ್ಲಿ ಗೋವಿಂದೇಗೌಡ ನಾಯಕರಾಗಿ ಬಣ್ಣ ಹಚ್ಚಿದ್ದರು.
ಇದೀಗ ಗೋವಿಂದೇ ಗೌಡನನ್ನು ಭೇಟಿಯಾಗಿ ಟ್ವೀಟ್ ಮಾಡಿರುವ ನಟ ಜಗ್ಗೇಶ್, “ಈಗ ತಾನೆ ಗೋವಿಂದೇ ಗೌಡನನ್ನ ಭೇಟಿ ಮಾಡಿದೆ.. ರಾಯರ ಆಶೀರ್ವಾದದಿಂದ ಕ್ಷೇಮವಾಗಿದ್ದಾನೆ.. ನಾನು, ಭಟ್ರು ಮತ್ತು ಶರಣ ಜೊತೆಗಿದ್ದೇವೆ.. ನಿಮ್ಮ ಹಾರೈಕೆಯಿರಲಿ” ಎಂದು ತಿಳಿಸಿದ್ದಾರೆ.
ಈಗ ತಾನೆ ಗೋವಿಂದೇ ಗೌಡನನ್ನ ಭೇಟಿ ಮಾಡಿದೆ.. ರಾಯರ ಆಶೀರ್ವಾದದಿಂದ ಕ್ಷೇಮವಾಗಿದ್ದಾನೆ.. ನಾನು, ಭಟ್ರು ಮತ್ತು ಶರಣ ಜೊತೆಗಿದ್ದೇವೆ.. ನಿಮ್ಮ ಹಾರೈಕೆಯಿರಲಿ..? pic.twitter.com/XORacsC2vr
— ನವರಸನಾಯಕ ಜಗ್ಗೇಶ್ (@Jaggesh2) July 27, 2021
ಇದನ್ನೂ ಓದಿ: Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ
ಇದನ್ನೂ ಓದಿ: Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಎಷ್ಟು ಗೊತ್ತಾ?
Published On - 11:02 pm, Tue, 27 July 21