AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಂಟ್ರಿ ಮೇಡ್ ಪಾರ್ಟ್ 2’ ಸಿನಿಮಾದ ಪಾತ್ರಗಳ ಪರಿಚಯಕ್ಕೆ ಟೀಸರ್ ಬಿಡುಗಡೆ

‘ಕಂಟ್ರಿ ಮೇಡ್ ಪಾರ್ಟ್ 2’ ಸಿನಿಮಾದಲ್ಲಿ ಹತ್ತು-ಹಲವು ಪಾತ್ರಗಳು ಇರಲಿವೆ. ಆ ಎಲ್ಲ ಪಾತ್ರಗಳಿಗೂ ಸಿನಿಮಾದಲ್ಲಿ ಮಹತ್ವ ಇದೆ ಎಂದು ಚಿತ್ರತಂಡ ಹೇಳಿದೆ. ಪಾತ್ರಗಳ ಪರಿಚಯ ಮಾಡಿಕೊಡಲು ಟೀಸರ್ ಬಿಡುಗಡೆ ಮಾಡಲಾಗಿದೆ. ಅರವಿಂದ್ ಕೌಶಿಕ್ ನಿರ್ದೇಶನ ಮಾಡಿರುವ ಈ ಸಿನಿಮಾದ ಬಗ್ಗೆ ಇಲ್ಲಿದೆ ಮಾಹಿತಿ..

‘ಕಂಟ್ರಿ ಮೇಡ್ ಪಾರ್ಟ್ 2’ ಸಿನಿಮಾದ ಪಾತ್ರಗಳ ಪರಿಚಯಕ್ಕೆ ಟೀಸರ್ ಬಿಡುಗಡೆ
Country Made Part 2 Movie Team
ಮದನ್​ ಕುಮಾರ್​
|

Updated on: May 22, 2026 | 4:01 PM

Share

ರೌಡಿಸಂ ಕುರಿತು ಈಗಾಗಲೇ ಹಲವು ಸಿನಿಮಾಗಳು ಬಂದಿದೆ. ಗಂಡಸರ ನಡುವಿನ ಈ ಸಂಘರ್ಷದಿಂದ ಮನೆಯ ಹೆಣ್ಮಕ್ಕಳ ಬದುಕು ಯಾವ ರೀತಿ ತೊಂದರೆಗೆ ಸಿಲುಕುತ್ತದೆ ಎಂಬ ಎಳೆಯನ್ನು ಇಟ್ಟುಕೊಂಡು ಕನ್ನಡದಲ್ಲಿ ಹೊಸ ಸಿನಿಮಾ ಬರುತ್ತಿದೆ. ಈ ಚಿತ್ರಕ್ಕೆ ‘ಕಂಟ್ರಿ ಮೇಡ್ ಪಾರ್ಟ್ 2’ (Country Made Part 2) ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಹತ್ತು ಹಲವು ಇಂಟರೆಸ್ಟಿಂಗ್ ಪಾತ್ರಗಳಿವೆ. ಆ ಪಾತ್ರಗಳನ್ನು ಪರಿಚಯಿಸುವ ಸಲುವಾಗಿ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ಅರವಿಂದ್‍ ಕೌಶಿಕ್‍ (Aravind Kaushik) ಅವರು ನಿರ್ದೇಶನ ಮಾಡಿದ್ದಾರೆ.

ಈ ಮೊದಲು ‘ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾ ಮಾಡಿದ್ದ ಅರವಿಂದ್‍ ಕೌಶಿಕ್‍ ಅವರು ಈಗ ಸದ್ದಿಲ್ಲದೆ ‘ಕಂಟ್ರಿ ಮೇಡ್ ಪಾರ್ಟ್ 2’ ಸಿನಿಮಾ ಮಾಡಿ ಮುಗಿಸಿದ್ದಾರೆ. ಇದುವರೆಗೂ ಬೇರೆಬೇರೆ ಶೈಲಿಯ ಸಿನಿಮಾಗಳನ್ನು ಮಾಡಿದ್ದ ಅವರು, ಇದೇ ಮೊದಲ ಬಾರಿಗೆ ಒಂದು ಗ್ಯಾಂಗ್‍ಸ್ಟರ್ ಕಥೆಯೊಂದನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

‘ಕಂಟ್ರಿ ಮೇಡ್‍ ಪಾರ್ಟ್ 2’ ಸಿನಿಮಾ ಟೀಸರ್‍ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಟೀಸರ್‍ ಬಿಡುಗಡೆ ಮಾಡಿದ ನಂತರ ಈ ಸಿನಿಮಾದಲ್ಲಿ ಅಭಿನಯಿಸಿರುವ ಹಲವು ಕಲಾವಿದರನ್ನು ಅರವಿಂದ್‍ ಕೌಶಿಕ್ ಅವರು ಪರಿಚಯಿಸಿದರು. ಎಲ್ಲರೂ ಚಿತ್ರದಲ್ಲಿ ನಟಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಳಿಕ ಈ ಸಿನಿಮಾ ರೂಪುಗೊಂಡಿದ್ದು ಹೇಗೆ ಎಂದು ಅರವಿಂದ್‍ ಹೇಳಿದರು.

‘ಕಂಟ್ರಿ ಮೇಡ್ ಪಾರ್ಟ್ 2’ ಟೀಸರ್:

‘ನನ್ನ ಹಿಂದಿನ ಸಿನಿಮಾ ಬಿಡುಗಡೆಯಾದ ಮೇಲೆ ಒಂದು ದಿನ ಪಾವಗಡದ ಕಡೆ ಹೋದೆ. ಬಾಲ್ಯದಿಂದಲೂ ನನಗೆ ಬಹಳ ಕಾಡಿದಂತಹ ಊರು ಅದು. ಅಲ್ಲೇನಾದರೂ ಶೂಟಿಂಗ್‍ ಮಾಡಬೇಕೆಂಬ ಆಸೆ ಇತ್ತು. ಆ ಊರಿನಲ್ಲಿ ನಾನು ನೋಡಿದ ಒಂದಿಷ್ಟು ನಿಜ ಜೀವನದ ವ್ಯಕ್ತಿಗಳನ್ನು ಆಧರಿಸಿ ಪಾತ್ರಗಳನ್ನು ಸೃಷ್ಟಿಸಿದೆ. ಹಾಗೆ ಹುಟ್ಟಿಕೊಂಡಿದ್ದೇ ಈ ಸಿನಿಮಾದ ಪಾತ್ರಗಳು. ಅವುಗಳಿಂದಲೇ ಕಂಟ್ರಿ ಮೇಡ್‍ ಪಾರ್ಟ್ 2 ಸಿನಿಮಾ ಆಗಿದೆ’ ಎಂದು ಅರವಿಂದ್ ಕೌಶಿಕ್ ಅವರು ವಿವರಿಸಿದರು.

ಇದನ್ನೂ ಓದಿ: ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ ‘ಲ್ಯಾಂಡ್ ಲಾರ್ಡ್​’ ಸಿನಿಮಾ; ಇಲ್ಲಿದೆ ವಿವರ

ಈ ಸಿನಿಮಾದಲ್ಲಿ ಅರವಿಂದ್‍ ಕೌಶಿಕ್‍, ರಾಘವ್‍ ರಾಮ್‍, ಅಭಿಲಾಷ್‍ ದ್ವಾರಕೀಶ್‍, ಶಿಲ್ಪಾ ಅರವಿಂದ್‍, ಪ್ರದೀಪ್‍ ರೋಶನ್‍, ಕುಲದೀಪ್, ಅಶ್ವಿತಾ ಗೌಡ, ಗೌರವ್‍ ಆರ್ಯನ್, ಸುಜಿತ್‍ ಶೆಟ್ಟಿ, ಅಪೂರ್ವಶ್ರೀ, ವೀರೇನ್‍ ಸಾಗರ್, ಸುಧಾ ಪ್ರಸನ್ನ ಮುಂತಾದವರು ನಟಿಸಿದ್ದಾರೆ. ಉಮೇಶ್‍ ಮಠಪತಿ, ಸೂರ್ಯ, ಅರವಿಂದ್‍ ಕೌಶಿಕ್‍ ಹಾಗೂ ಚಂದನ್ ಗೌಡ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರ್ಜುನ್‍ ರಾಮು ಅವರ ಸಂಗೀತ, ಸೂರ್ಯ ಅವರ ಛಾಯಾಗ್ರಹಣ, ಅಲ್ಟಿಮೇಟ್‍ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More