‘ಪವಿತ್ರಾ ಯಾರು ಗೊತ್ತಾ? ನನ್ನ ಹೆಂಡತಿ’; ರೇಣುಕಾಸ್ವಾಮಿ ಎದುರೇ ಹೇಳಿದ್ದ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಶ್ ವಿಚಾರಣೆ ವೇಳೆ ಹಲವು ಸ್ಪೋಟಕ ಸಂಗತಿ ಬಿಚ್ಚಿಟ್ಟಿದ್ದಾರೆ. ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತಂದು ದರ್ಶನ್ ಹಲ್ಲೆ ಮಾಡಿದ್ದರು. ಈ ವೇಳೆ ಪವಿತ್ರಾ ಗೌಡ ಭುಜದ ಮೇಲೆ ಕೈಹಾಕಿ 'ಇವಳು ನನ್ನ ಹೆಂಡತಿ' ಎಂದು ದರ್ಶನ್ ಹೇಳಿದರೆಂದು ಪ್ರದೋಶ್ ವಿಚಾರಣೆಯಲ್ಲಿ ಕೃತ್ಯದ ವಿವರಣೆ ನೀಡಿದ್ದಾರೆ.

‘ಪವಿತ್ರಾ ಯಾರು ಗೊತ್ತಾ? ನನ್ನ ಹೆಂಡತಿ’; ರೇಣುಕಾಸ್ವಾಮಿ ಎದುರೇ ಹೇಳಿದ್ದ ದರ್ಶನ್
ಪ್ರದೋಷ್-ಪವಿತ್ರಾ, ದರ್ಶನ್-ರೇಣುಕಾಸ್ವಾಮಿ
Edited By:

Updated on: Sep 29, 2026 | 12:47 PM

ಮುಖ್ಯಾಂಶಗಳು

  • 'ಇವಳು ನನ್ನ ಹೆಂಡತಿ' ರೇಣುಕಾಸ್ವಾಮಿ ಎದುರು ದರ್ಶನ್ ಅಬ್ಬರ
  • ವಿಚಾರಣೆಯಲ್ಲಿ ರೇಣುಕಾಸ್ವಾಮಿ ಕೊಲೆಯ ಕರಾಳ ಸತ್ಯ ಬಿಚ್ಚಿಟ್ಟ ಪ್ರದೋಶ್
  • ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಭೀಕರ ಘಟನೆ

ಬೆಂಗಳೂರು, ಸೆಪ್ಟೆಂಬರ್​ 29: ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಶ್ ಅವರು ಮೊದಲ ದಿನದ ವಿಚಾರಣೆಯಲ್ಲಿ ಅಂದು ನಡೆದ ಘಟನೆ ಬಗ್ಗೆ 3 ಗಂಟೆಗಳ ಕಾಲ ವಿವರಿಸಿದ್ದಾರೆ. ರೇಣುಕಾಸ್ವಾಮಿಯನ್ನು ಕರೆತಂದಿದ್ದು ಯಾರು, ಇಲ್ಲಿ ಹೊಡೆದಿದ್ದು ಯಾರು ಎಂಬ ಬಗ್ಗೆ ವಿವರಿಸಿದ್ದಾರೆ. ಇದರ ಜೊತೆಗೆ ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್​​ಗೆ ಕರೆದುಕೊಂಡು ಹೋಗಲಾಗಿತ್ತು. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು ಇಲ್ಲಿಯೇ. ದರ್ಶನ್ ಕೂಡ ಶೆಡ್​ಗೆ ತೆರಳಿದ್ದರು.ಆ ಬಳಿಕ ಏನಾಯಿತು ಎಂದು ಪ್ರದೋಷ್ ವಿವರಿಸಿದ್ದಾರೆ.

Pradosh's Witness hearing: 2ನೇ ದಿನವೂ ಪ್ರದೋಷ್ ಸಾಕ್ಷ್ಯ ವಿಚಾರಣೆಗೆ ಕೋರ್ಟ್​ಗೆ ಹಾಜರು |#TV9D

‘ದರ್ಶನ್​ಗೆ ಈ ವಿಷಯ ತಿಳಿದಾಗ ಅವರು ಕೋಪಗೊಂಡಿದ್ದರು. ಶೆಡ್​​ಗೆ ಕರೆದುಕೊಂಡು ಬಂದ ರೇಣುಕಾಸ್ವಾಮಿಗೆ ದರ್ಶನ್ ಹೊಡೆದರು. ರೇಣುಕಾಸ್ವಾಮಿಯನ್ನು ದರ್ಶನ್ ಅವಾಚ್ಯ ಶಬ್ದಗಳಿಂದ ಬೈದರು. ಇವಳು ಯಾರು ಅಂತ ಗೊತ್ತಾಯ್ತ ಎಂಬುದು ದರ್ಶನ್ ಪ್ರಶ್ನೆ ಆಗಿತ್ತು. ಆಗ ರೇಣುಕಾಸ್ವಾಮಿ ಕೈ ಮುಗಿದು ಕ್ಷಮಿಸುವಂತೆ ಕೇಳಿದರು’ ಎಂದು ಪ್ರದೋಷ್ ಹೇಳಿದ್ದಾರೆ.

ಇದನ್ನೂ ಓದಿ: ರೇಣುಕಾ ಸ್ವಾಮಿ ಮೇಲೆ ದರ್ಶನ್ ಅಟ್ಟಹಾಸದ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪ್ರದೋಶ್

ಈ ಸಂದರ್ಭದಲ್ಲಿ ದರ್ಶನ್ ಅವರು ಪವಿತ್ರಾ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದರಂತೆ. ‘ಇವಳು ಯಾರು ಗೊತ್ತಾಯ್ತಾ ಎಂದು ದರ್ಶನ್ ಮತ್ತೊಮ್ಮೆ ಕೇಳಿದರು. ಪವಿತ್ರಾ ಗೌಡ ಭುಜದ ಮೇಲೆ ಕೈ ಹಾಕಿ ಇವಳು ನನ್ನ ಹೆಂಡ್ತಿ ಎಂದು ದರ್ಶನ್ ಹೇಳಿದ್ದರು. ನನ್ನ ಹೆಂಡತಿಗೆ ಮೆಸೇಜ್ ಮಾಡುವಷ್ಟು ಧೈರ್ಯ ಇದೆಯೇ ಎಂದು ದರ್ಶನ್ ಕೇಳಿದ್ದರು’ ಎಂದಿದ್ದಾರೆ ಪ್ರದೋಷ್. ಆ ಬಳಿಕ ದರ್ಶನ್ ಅವರು ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಒದ್ದಿದ್ದಾಗಿ ಪ್ರದೋಷ್ ವಿವರಿಸಿದ್ದಾರೆ.

ಸಾಮನ್ಯವಾಗಿ ಕೇಳಲಾಗುವ ಪ್ರಶ್ನೆ ಉತ್ತರಗಳು


ಪ್ರಶ್ನೆ: ರೇಣುಕಾಸ್ವಾಮಿ ಕೊಲೆ ನಡೆದಿದ್ದು ಯಾವಾಗ?


ಉತ್ತರ:
ರೇಣುಕಾಸ್ವಾಮಿ ಕೊಲೆ ನಡೆದಿದ್ದು 2024ರ ಜೂನ್ 8 ರಂದು


ಪ್ರಶ್ನೆ: ರೇಣುಕಾಸ್ವಾಮಿ ಯಾರು?


ಉತ್ತರ:
ರೇಣುಕಾಸ್ವಾಮಿ ಅವರು ಜೂನ್ 2024ರಲ್ಲಿ ಬೆಂಗಳೂರಿನಲ್ಲಿ ಹತ್ಯೆಗೀಡಾದ ಚಿತ್ರದುರ್ಗದ 33 ವರ್ಷದ ವ್ಯಕ್ತಿ

ಪ್ರಶ್ನೆ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯರ್ಯಾರು ಶಾಮೀಲಾಗಿದ್ದಾರೆ?


ಉತ್ತರ:
ಕನ್ನಡದ ಖ್ಯಾತ ಚಿತ್ರ ನಟ ದರ್ಶನ್​ ತೂಗುದೀಪ ಮತ್ತು ಇತರರ ಮೇಲೆ ರೇಣುಕಾಸ್ವಾಮಿ ಕೊಲೆ ಆರೋಪವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:24 pm, Tue, 29 September 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us