ಬಳ್ಳಾರಿ ಜೈಲಿನಲ್ಲಿ ಟಿವಿ ಸಹವಾಸವೇ ಬೇಡ ಎನ್ನುವ ರೀತಿ ಸೈಲೆಂಟ್ ಆದ ದರ್ಶನ್​

| Updated By: ಮದನ್​ ಕುಮಾರ್​

Updated on: Sep 03, 2024 | 3:14 PM

ಪರಪ್ಪನ ಅಗ್ರಹಾರದ ರೀತಿ ಬಳ್ಳಾರಿ ಜೈಲಿನಲ್ಲಿ ದರ್ಶನ್​ ಪ್ರಭಾವ ನಡೆಯುತ್ತಿಲ್ಲ. ಚಾರ್ಜ್​ಶೀಟ್​ ಸಲ್ಲಿಕೆ ಬಗ್ಗೆ ತಿಳಿದುಕೊಳ್ಳಲು ದರ್ಶನ್​ ಬಯಸಿದ್ದಾರೆ. ಅವಶ್ಯಕತೆ ಇದ್ದರೆ ಟಿವಿ ನೀಡುವುದಾಗಿ ಸಿಬ್ಬಂದಿ ಹೇಳಿದ್ದಾರೆ. ಆದರೆ ಟಿವಿ ಸಹವಾಸ ಬೇಡ ಎಂಬ ರೀತಿಯಲ್ಲಿ ದರ್ಶನ್​ ಸೈಲೆಂಟ್​ ಆಗಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಅವರು ಹೈರಾಣಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಬಳ್ಳಾರಿ ಜೈಲಿನಲ್ಲಿ ಟಿವಿ ಸಹವಾಸವೇ ಬೇಡ ಎನ್ನುವ ರೀತಿ ಸೈಲೆಂಟ್ ಆದ ದರ್ಶನ್​
ದರ್ಶನ್
Follow us on

ನಟ ದರ್ಶನ್​ಗೆ ಬಳ್ಳಾರಿ ಜೈಲಿನಲ್ಲಿ ಕಾಲ ಕಳೆಯುವುದು ಕಷ್ಟ ಆಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದಿದ್ದರಿಂದ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಯಿತು. ಎಲ್ಲರ ಕಣ್ಣು ಈ ಹೈಪ್ರೊಫೈಲ್​ ಕೇಸ್​ ಮೇಲೆ ಇದೆ. ಇತ್ತ, ಬೆಂಗಳೂರು ಪೊಲೀಸರು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್​ಶೀಟ್​ ಸಲ್ಲಿಸುವ ತಯಾರಿ ನಡೆಸಿದ್ದಾರೆ. ಹಾಗಾಗಿ ದರ್ಶನ್​ಗೆ ಚಾರ್ಜ್​ಶೀಟ್​ ಬಗ್ಗೆ ಮಾಹಿತಿ ಬೇಕಾಗಿದೆ. ಚಾರ್ಜ್‌ಶೀಟ್ ಸಲ್ಲಿಕೆಯ ವಿಚಾರದ ಬಗ್ಗೆ ಪದೇ ಪದೇ ಸಿಬ್ಬಂದಿ ಬಳಿ ದರ್ಶನ್​ ವಿಚಾರಿಸಿದ್ದಾರೆ ಎನ್ನಲಾಗಿದೆ.

ಟಿವಿ ಬೇಕು ಎನ್ನುವ ಬಗ್ಗೆ ಮೇಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಎಂದು ಬಳ್ಳಾರಿ ಜೈಲಿನ ಸಿಬ್ಬಂದಿಯು ದರ್ಶನ್​ಗೆ ಸಲಹೆ ನೀಡಿದ್ದಾರೆ. ಟಿವಿಯ ಅವಶ್ಯಕತೆ ಇದೆ ಎಂದಾದರೆ ನೀಡಲಾಗುತ್ತದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಹೈ-ಸೆಕ್ಯುರಿಟಿ ಸೆಲ್​ಗೆ ಊಟ ನೀಡುವ ವೇಳೆ ಈ ಮಾತುಕತೆ ನಡೆದಿದೆ. ಅಚ್ಚರಿ ಏನೆಂದರೆ, ಟಿವಿ ವಿಚಾರ ತೆಗೆಯುತ್ತಿದಂತೆಯೇ ಅದರ ಸಹವಾಸವೇ ಬೇಡ ಎನ್ನುವ ರೀತಿ ದರ್ಶನ್​ ಸೈಲೆಂಟ್ ಆದರು ಎಂಬ ಮಾಹಿತಿ ಸಿಕ್ಕಿದೆ.

ದರ್ಶನ್​ ಅವರು ಸದ್ಯಕ್ಕೆ ಟಿವಿ ಬೇಕು ಎಂಬ ಬೇಡಿಕೆ ಇಟ್ಟಿಲ್ಲ. ಯೋಗ, ವಾಕ್ ಹಾಗೂ ಪುಸ್ತಕದ ಕಡೆಗೆ ಮಾತ್ರ ಅವರು ಗಮನ ಹರಿಸುತ್ತಿದ್ದಾರೆ. ದರ್ಶನ್ ಇರುವ ಅಕ್ಕಪಕ್ಕದ ಸೆಲ್​ಗಳು ಖಾಲಿ ಆಗಿವೆ. ಆ ಕಾರಣದಿಂದ ಬಳ್ಳಾರಿ ಜೈಲಿನಲ್ಲಿ ದರ್ಶನ್​ ಅಕ್ಷರಶಃ ಏಕಾಂಗಿ ಆಗಿದ್ದಾರೆ. ಬಳ್ಳಾರಿಗೆ ಶಿಫ್ಟ್ ಆದ ಬಳಿಕ ದರ್ಶನ್​ ಮುಖ ಬಾಡಿದೆ.

ಇದನ್ನೂ ಓದಿ: ‘ನನಗೆ ಅದು ಸಂಬಂಧ ಇಲ್ಲ’: ದರ್ಶನ್​ ಬಳ್ಳಾರಿ ಜೈಲಿಗೆ ಬಂದ ಬಗ್ಗೆ ಜಮೀರ್​ ನೇರ ಮಾತು

ಪರಪ್ಪನ ಅಗ್ರಹಾರದಲ್ಲಿ ತಮ್ಮ ಪ್ರಭಾವ ಬಳಸಿ ದರ್ಶನ್​ ಹಲವು ಸೌಕರ್ಯ ಪಡೆದುಕೊಂಡಿದ್ದರು. ಮೊಬೈಲ್​, ಸಿಗರೇಟ್​, ಚೇರ್​, ರೌಡಿಶೀಟರ್​ಗಳ ಜೊತೆ ಹರಟೆ.. ಹೀಗೆ ಹಲವು ಅಕ್ರಮಗಳು ನಡೆದಿದ್ದವು. ಆದರೆ ಬಳ್ಳಾರಿ ಜೈಲಿನಲ್ಲಿ ಇಂಥದ್ದಕ್ಕೆಲ್ಲ ಅವಕಾಶ ಸಿಗುತ್ತಿಲ್ಲ. ಮೆಡಿಕಲ್ ರಿಪೋರ್ಟ್ ಇದ್ದರೂ ಕೂಡ ಸರ್ಜಿಕಲ್ ಚೇರ್ ಪಡೆಯಲು ದರ್ಶನ್​ ಮೂರು ದಿನ ಪರದಾಡಬೇಕಾಯಿತು. ಬಳ್ಳಾರಿ ಜೈಲಿನ ಕಠಿಣತೆಗೆ ದರ್ಶನ್ ಹೈರಾಣಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.