ದರ್ಶನ್ ಹಾಗೂ ಕುಟುಂಬದ ವಿರುದ್ಧ ಮಾತನಾಡದಂತೆ ಧನ್ವೀರ್​​ಗೆ ಕೋರ್ಟ್ ತಡೆ

ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ನಡುವಿನ ಜಟಾಪಟಿ ಠಾಣೆ ಮೆಟ್ಟಿಲು ಹತ್ತಿದ್ದು, ಈಗಾಗಲೇ ಧನ್ವೀರ್ ಗೌಡ ವಿರುದ್ಧ ಎರಡು ಎಫ್​​ಐಆರ್​​ಗಳು ದಾಖಲಾಗಿದೆ. ದರ್ಶನ್​​ ವರೆಗೂ ಸುದ್ದಿ ಮುಟ್ಟಿದ್ದು, ಇದೀಗ ಧನ್ವೀರ್ ವಿರುದ್ಧ ಜೈಲಲ್ಲಿದ್ದುಕೊಂಡೆ ‘ಕ್ರಮ’ ಕೈಗೊಂಡಿದ್ದಾರೆ ನಟ ದರ್ಶನ್. ಧನ್ವೀರ್ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ದರ್ಶನ್, ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ತಡೆ ನೀಡಬೇಕೆಂದು ಕೋರಿದ್ದರು.

ದರ್ಶನ್ ಹಾಗೂ ಕುಟುಂಬದ ವಿರುದ್ಧ ಮಾತನಾಡದಂತೆ ಧನ್ವೀರ್​​ಗೆ ಕೋರ್ಟ್ ತಡೆ
Darshan Dhanveer

Updated on: Oct 30, 2026 | 4:57 PM

ಮುಖ್ಯಾಂಶಗಳು

  • ಧನ್ವೀರ್ ವಿರುದ್ಧ ನಿರ್ಬಂಧಕಾಜ್ಞೆ ತಂದ ದರ್ಶನ್
  • ದರ್ಶನ್ ಹೆಸರು ದುರ್ಬಳಕೆ ಮಾಡದಂತೆ ತಡೆ
  • ದರ್ಶನ್ ಹಾಗೂ ಕುಟುಂಬದ ಬಗ್ಗೆ ಮಾತನಾಡುವಂತಿಲ್ಲ ಧನ್ವೀರ್

ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ನಡುವಿನ ಜಟಾಪಟಿ ಠಾಣೆ ಮೆಟ್ಟಿಲು ಹತ್ತಿದ್ದು, ಈಗಾಗಲೇ ಧನ್ವೀರ್ ಗೌಡ ವಿರುದ್ಧ ಎರಡು ಎಫ್​​ಐಆರ್​​ಗಳು ದಾಖಲಾಗಿದೆ. ದರ್ಶನ್​​ ವರೆಗೂ ಸುದ್ದಿ ಮುಟ್ಟಿದ್ದು, ಇದೀಗ ಧನ್ವೀರ್ ವಿರುದ್ಧ ಜೈಲಲ್ಲಿದ್ದುಕೊಂಡೆ ‘ಕ್ರಮ’ ಕೈಗೊಂಡಿದ್ದಾರೆ ನಟ ದರ್ಶನ್. ಧನ್ವೀರ್ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ದರ್ಶನ್, ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ತಡೆ ನೀಡಬೇಕೆಂದು ಕೋರಿದ್ದರು.

ಚಲನಚಿತ್ರ ನಟ ದರ್ಶನ್ ತೂಗುದೀಪ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಸಾರ್ವಜನಿಕವಾಗಿ ಯಾವುದೇ ರೀತಿಯ ಹೇಳಿಕೆಗಳು ಅಥವಾ ಅವಹೇಳನಕಾರಿ ಟೀಕೆಗಳನ್ನು ಮಾಡುವುದನ್ನು ನಿರ್ಬಂಧಿಸುವಂತೆ ಬೆಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ ದರ್ಶನ್ ಅರ್ಜಿ ಸಲ್ಲಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಸ್ಪಷ್ಟ ಆದೇಶ ಹೊರಡಿಸಿದ್ದು, ದರ್ಶನ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ತಡೆ ಹಿಡಿಯಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಕಾನೂನು ವಿವಾದಗಳು ಮತ್ತು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದು ಮಹತ್ವದ ತೀರ್ಪಾಗಿದೆ.

ಈಗಾಗಲೇ ನಟ ಧನ್ವೀರ್ ಗೌಡ, ವಿಜಯಲಕ್ಷ್ಮಿ ದರ್ಶನ್ ಕುರಿತಾಗಿ ಕೆಲ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಒಂದು ಹೇಳಿಕೆಯಲ್ಲಿ ವಿಜಯಲಕ್ಷ್ಮಿ ಅವರನ್ನು ‘ಫೇಕ್’ ಎಂದು ಸಹ ಕರೆದಿದ್ದಾರೆ. ಮಾತ್ರವಲ್ಲದೆ ಇನ್ನೂ ಕೆಲವು ನಕಾರಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇದೇ ಕಾರಣಕ್ಕೆ ದರ್ಶನ್ ಅವರು ಧನ್ವೀರ್ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದಾರೆ.

ಇದನ್ನೂ ಓದಿ:ಹೆಸರು ದುರ್ಬಳಕೆ, ನಂಬಿಕೆ ದ್ರೋಹ: ಧನ್ವೀರ್ ಮೇಲೆ ಆರೋಪಿಸಿ ಕೇಸ್ ಜಡಿದ ದರ್ಶನ್

ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವೆ ಜಟಾಪಟಿ ನಡೆಯುತ್ತಿದೆ. ಇಬ್ಬರ ನಡುವೆ ಮುನಿಸಿಗೆ 10 ಕೋಟಿ ರೂಪಾಯಿ ಹಣಕಾಸಿನ ವ್ಯವಹಾರ ಕಾರಣ ಎನ್ನಲಾಗುತ್ತಿದೆ. ವಿಜಯಲಕ್ಷ್ಮಿ ಅವರ ಪರ ಇರುವ ಕೆಲವರು ಈಗಾಗಲೇ ಧನ್ವೀರ್ ವಿರುದ್ಧ ಆರ್​​ಆರ್ ನಗರ, ಬಸವೇಶ್ವರ ನಗರ, ಬ್ಯಾಟರಾಯನಪುರ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸಿದ್ದು, ಆರ್​​ಆರ್ ನಗರ ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ಸಹ ದಾಖಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us