ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ರೇಣುಕಾ ಸ್ವಾಮಿ ಗೌಡ ಕೊಲೆ ಕೇಸ್ನಲ್ಲಿ ಎ2 ಹಾಗೂ ಎ1 ಆರೋಪಿ ಆಗಿದ್ದಾರೆ. ಇವರ ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಈ ಮೊಬೈಲ್ನಲ್ಲಿರುವ ಡಾಟಾ ರಿಟ್ರೀವ್ ಮಾಡಲು ಹೈದರಾಬಾದ್ನ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ (CFSL) ತಜ್ಞರ ಬಳಿ ಸಾಧ್ಯವಾಗಿಲ್ಲ. ಐಫೋನ್ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ಡಾಟಾ ತೆಗೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ದರ್ಶನ್ ಹಾಗೂ ಪವಿತ್ರಾ ಅವರನ್ನು ಅರೆಸ್ಟ್ ಮಾಡಿದ ಬಳಿಕ ಅವರ ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿತ್ತು. ಮೊಬೈಲ್ನಲ್ಲಿರುವ ಡಾಟಾ ಪಡೆಯಲು ಮೊಬೈಲ್ನ ಹೈದರಾಬಾದ್ನ CFS ಲ್ಯಾಬ್ಗೆ ಕಳುಹಿಸಲಾಗಿತ್ತು. ಆದರೆ, ಈಗ ಅವರು ಎರಡೂ ಮೊಬೈಲ್ಗಳನ್ನು ವಾಪಸ್ ಕಳುಹಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ಈ ಮೊಬೈಲ್ಗಳು ಲ್ಯಾಬ್ನಲ್ಲಿ ಇತ್ತು. ಎಫ್ಎಸ್ಎಲ್ ತಜ್ಞರು ರಿಟ್ರೀವ್ಗೆ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ, ಅವರಿಂದ ಸಾಧ್ಯವಾಗಿಲ್ಲ. ಹೀಗಾಗಿ, 2 ಐಫೋನ್ಗಳನ್ನು ಗುಜರಾತ್ನ ಎಫ್ಎಸ್ಎಲ್ ಯೂನಿವರ್ಸಿಟಿಗೆ ಕಳಿಸಲು ಚಿಂತನೆ ನಡೆಸಿದ್ದಾರೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಇರುತ್ತದೆ.
ಇದನ್ನೂ ಓದಿ: ‘ನನ್ನ ಮಗನಿಗಾದ ನೋವು ದರ್ಶನ್ಗೂ ಆಗಬೇಕು’; ಹಿಡಿಶಾಪ ಹಾಕಿದ ರೇಣುಕಾಸ್ವಾಮಿ ತಂದೆ
ಈ ಮೊದಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಸ್ನಲ್ಲೂ ಹೀಗೆಯೇ ಆಗಿತ್ತು. ಅವರ ಮೊಬೈಲ್ನ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು. ಈ ಮೊಬೈಲ್ನ ಅನ್ಲಾಕ್ ಮಾಡಲು ಸಹಾಯ ಮಾಡುವುದಿಲ್ಲ ಎಂದು ಆ್ಯಪಲ್ ಸಂಸ್ಥೆ ಹೇಳಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:36 pm, Thu, 5 September 24