‘ಕಾಟೇರ’ (Kaatera Movie) ಸೆಲೆಬ್ರಿಟಿ ಶೋ ಮುಗಿದ ಬಳಿಕೆ ದರ್ಶನ್, ರಾಕ್ಲೈನ್ ವೆಂಕಟೇಶ್ ಸೇರಿ ಅನೇಕ ಸೆಲೆಬ್ರಿಟಿಗಳು ಬೆಂಗಳೂರಿನ ಜೆಟ್ ಲ್ಯಾಗ್ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ್ದರು ಎನ್ನುವ ಪ್ರಕರಣ ಸಾಕಷ್ಟು ಚರ್ಚೆ ಆಗುತ್ತಿದೆ. ನೋಟಿಸ್ ಪಡೆದ ಎಲ್ಲಾ ಸೆಲೆಬ್ರಿಟಿಗಳು ಜನವರಿ 12ರಂದು ಬಂದು ವಿಚಾರಣೆ ಎದುರಿಸಿದ್ದಾರೆ. ಈ ಪ್ರಕರಣದಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎನ್ನುವ ಪ್ರಶ್ನೆ ಮೂಡಿದೆ. ಸೆಲೆಬ್ರಿಟಿಗಳ ಹೇಳಿಕೆ ಬಳಿಕ ಸಾಕಷ್ಟು ಅನುಮಾನ ಶುರುವಾಗಿದೆ.
ಅವಧಿ ಮೀರಿ ಪಾರ್ಟಿ ಮಾಡಿದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ, ಊಟಕ್ಕೆ ಮಾತ್ರ ಬಂದಿದ್ದಾಗಿ ಸೆಲೆಬ್ರಿಟಿಗಳ ಹೇಳಿಕೆ ನೀಡಿದ್ದಾರೆ. ಅವಧಿಮೀರಿ ಪಾರ್ಟಿ ವೇಳೆ ಮದ್ಯ ಸೇವನೆ ಮಾಡಲಾಗಿತ್ತು ಎಂದು ಎಫ್ಐಆರ್ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಜೆಟ್ ಲ್ಯಾಗ್ನಲ್ಲಿ ನಾವು ಊಟ ಮಾತ್ರ ಮಾಡಿದೆವು ಎಂದು ಸೆಲೆಬ್ರಿಟಿಗಳು ಹೇಳಿದ್ದಾರೆ. ಪಬ್ನಲ್ಲಿ ಗ್ರಾಹಕರಿದ್ದರು, ಅವರಿಗೆ ಮದ್ಯ ಸರಬರಾಜು ಮಾಡಲಾಗುತಿತ್ತು ಎಂದು ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ. ಮಧ್ಯರಾತ್ರಿ ಜೆಟ್ ಲ್ಯಾಗ್ನಲ್ಲಿ ಕೆಲಸದವರು ಸಹ ಇರಲಿಲ್ಲ ಎಂದು ಸೆಲೆಬ್ರಿಟಿಗಳು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನಿಮಗೆ ತಾಕತ್ತಿದ್ದರೆ, ಧೈರ್ಯ ಇದ್ದರೆ.. ಪೊಲೀಸರಿಗೆ ಸವಾಲೆಸೆದ ದರ್ಶನ್ ಪರ ವಕೀಲ
ಮಧ್ಯರಾತ್ರಿ ತೆರಳಿ ಪಬ್ ಮುಚ್ಚುವಂತೆ ಹೇಳಿದ್ದಾಗಿ ಪೊಲೀಸರು ಈ ಮೊದಲು ತಿಳಿಸಿದ್ದರು. ನಾವು ಊಟ ಮುಗಿಸಿ ಹೊದರು ಯಾವ ಪೊಲೀಸರೂ ಬಂದಿಲ್ಲ ಎಂದು ರಾಕ್ಲೈನ್ ಹೇಳಿಕೆ ನೀಡಿದ್ದಾರೆ. ಅಬಕಾರಿ ಕಾಯ್ದೆ, ಪೊಲೀಸ್ ಕಾಯ್ದೆ ಷರತ್ತು ಉಲ್ಲಂಘನೆ ಹಿನ್ನಲೆಯಲ್ಲಿ ದಾಳಿ ಮಾಡಿರುವುದಾಗಿ ಪೊಲೀಸರು ಉಲ್ಲೇಖ ಮಾಡಿದ್ದಾರೆ. ಆದರೆ ಪೊಲೀಸರೇ ಬಂದಿಲ್ಲ ಎಂದು ಸೆಲೆಬ್ರಿಟಿಗಳು ಹೇಳಿರೋದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಹೀಗಾಗಿ, ಯಾವುದು ಸತ್ಯ? ಯಾವುದು ಸುಳ್ಳು ಎನ್ನುವ ಪ್ರಶ್ನೆ ಮೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಈ ಪ್ರಕರಣದ ಹಿಂದೆ ಇರೋದು ಯಾರು ಎಂದು ರಾಕ್ಲೈನ್ ವೆಂಕಟೇಶ್ ಮಾಧ್ಯಮಗಳ ಎದುರು ಹೇಳಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ಟಾರ್ಗೆಟ್ ಮಾಡುತ್ತಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ