ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್, ಪವಿತ್ರಾ​ಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಇತರ 16 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ದೊರೆತಿದೆ. ಪೊಲೀಸರು ದರ್ಶನ್‌ರ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ ತಾತ್ಕಾಲಿಕ ನಿರಾಳತೆ ನೀಡಿದೆ. ಹೆಚ್ಚುವರಿ ಸಾಕ್ಷ್ಯಾಧಾರಗಳೊಂದಿಗೆ 132 ಪುಟಗಳ ಹೆಚ್ಚುವರಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್, ಪವಿತ್ರಾ​ಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್
ದರ್ಶನ್

Updated on: May 21, 2025 | 11:18 AM

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ (Darshan), ಪವಿತ್ರಾ ಸೇರಿದಂತೆ 17 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ವಿಚಾರಣೆ ವೇಳೆ ಕೋರ್ಟ್​ಗೆ ಹಾಜರಿ ಹಾಕಬೇಕು ಎಂಬುದು ಕೋರ್ಟ್​ನ ಷರತ್ತುಗಳಲ್ಲಿ ಒಂದು. ಈ ಷರತ್ತನ್ನು ಅವರು ಪಾಲಿಸುತ್ತಾ ಇದ್ದಾರೆ. ಈ ಮಧ್ಯೆ ದರ್ಶನ್ ಅವರ ಜಾಮೀನು ರದ್ದು ಮಾಡಬೇಕು ಎಂದು ಪೊಲೀಸರು ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದರು. ಈ ವಿಚಾರದಲ್ಲಿ ಕೋರ್ಟ್ ದರ್ಶನ್​ಗೆ ತಾತ್ಕಾಲಿಕ ರಿಲೀಫ್ ನೀಡಿದೆ.

ರೇಣುಕಾಸ್ವಾಮಿ ಬರ್ಬರ ಹತ್ಯೆ ಕೇಸ್​ನಲ್ಲಿ ದರ್ಶನ್ ಮತ್ತು ಗ್ಯಾಂಗ್ ಬಂಧನಕ್ಕೆ ಒಳಗಾಗಿತ್ತು. ಆರು ತಿಂಗಳ ಕಾಲ ಇವರು ಜೈಲಿನಲ್ಲಿ ಇದ್ದರು. 2014ರಲ್ಲಿ ಪ್ರಕರಣದ ಎಲ್ಲಾ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಆದರೆ, ಪ್ರಕರಣದ ಪ್ರಮುಖ ಏಳು ಆರೋಪಿಗಳಿಗೆ ಜಾಮೀನು ನೀಡಿದ್ದನ್ನು ಬೆಂಗಳೂರು ಪೊಲೀಸರು ಪ್ರಶ್ನೆ ಮಾಡಿದ್ದರು. ಸದ್ಯ ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ.

ಸದ್ಯ ಸುಪ್ರೀಂಕೋರ್ಟ್​ಗೆ ಬೇಸಿಗೆ ರಜೆ ಇದೆ. ಜುಲೈ 14ಕ್ಕೆ ಬೇಸಿಗೆ ರಜೆ ಅಂತ್ಯವಾಗಲಿದೆ. ಇದಾದ ಬಳಿಕ ವಿಚಾರಣೆ ನಡೆಸೋದಾಗಿ ಸುಪ್ರೀಂಕೋರ್ಟ್​ ಹೇಳಿದೆ. ಅಲ್ಲಿಯವರೆಗೆ ದರ್ಶನ್ ಹಾಗೂ ಇತರರು ಯಾವುದೇ ಚಿಂತೆ ಇಲ್ಲದೆ ಹೊರಗೆ ಓಡಾಡಿಕೊಂಡು ಇರಬಹುದಾಗಿದೆ. ವಿಚಾರಣೆ ದಿನಾಂಕ ಮುಂದಿನ ದಿನಗಳಲ್ಲಿ ಪ್ರಕಟ ಆಗಲಿದೆ.

ಇದನ್ನೂ ಓದಿ
‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆಯಲು ಅಕ್ಷಯ್ ಕುಮಾರ್ ಕಾರಣ
3.5 ಲಕ್ಷ ಬೆಲೆಯ ಗೌನ್ ಧರಿಸಿ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ಜಾನ್ವಿ
ಹಿರಿಯ ನಟ ಪರೇಶ್ ರಾವಲ್ ವಿರುದ್ಧ ದೂರು, 25 ಕೋಟಿ ರೂ ಪರಿಹಾರಕ್ಕೆ ಒತ್ತಾಯ
ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು

ಇದನ್ನೂ ಓದಿ: ದರ್ಶನ್ ವಿರುದ್ಧ ಹೆಚ್ಚುವರಿ ಚಾರ್ಜ್​ಶೀಟ್ ಸಲ್ಲಿಕೆ, ಫೋಟೊದಿಂದ ಹೆಚ್ಚಾಯ್ತು ಕಂಟಕ

ರೇಣುಕಾಸ್ವಾಮಿ ಕೇಸ್​ನಲ್ಲಿ ಹೆಚ್ಚುವರಿ ಸಾಕ್ಷ್ಯ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ 132 ಪುಟಗಳ ಹೆಚ್ಚುವರಿ ಚಾರ್ಜ್​ಶೀಟ್​​ ಸಲ್ಲಿಕೆ ಆಗಿದೆ. ಎಸಿಪಿ ಚಂದನ್ ಅವರು ಕೋರ್ಟ್​ಗೆ ಇದನ್ನು ಸಲ್ಲಿಕೆ ಮಾಡಿದ್ದಾರೆ. ಕೊಲೆ ಬಳಿಕ ಶೆಡ್​ನಲ್ಲಿ ಆರೋಪಿ ದರ್ಶನ್ ಫೋಟೋಗೆ ಪೋಸ್​ ನೀಡಿದ್ದರು. ಆದರೆ, ದರ್ಶನ್ ಬಂದಿರುವುದು ಗೊತ್ತಾಗಬಾರದು ಎಂದು ಫೋಟೋ ಡಿಲೀಟ್ ಮಾಡಲಾಗಿತ್ತು. ತನಿಖಾಧಿಕಾರಿಗಳು ಮೊಬೈಲ್​ನ ಲ್ಯಾಬ್​ಗೆ ಕಳುಹಿಸಿತ್ತು. ಡಿಲೀಟ್ ಆಗಿದ್ದ ಫೋಟೋ, ಡೇಟಾ, ಎಲ್ಲವೂ ರಿಟ್ರೀವ್ ಆಗಿ ಮ್ಯಾಚ್ ಆಗಿದೆ. ದರ್ಶನ್ ಶೆಡ್​ನಲ್ಲಿ ಇದ್ದರು ಅನ್ನೋದಕ್ಕೆ ಪೂರಕ ಸಾಕ್ಷ್ಯ ಸಿಕ್ಕಂತೆ ಆಗಿದೆ. ಇದನ್ನು ಸುಪ್ರೀಂಕೋರ್ಟ್​ನಲ್ಲಿ ವಾದಿಸೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.